ತೊಗರಿ ಖರೀದಿ ಕೇಂದ್ರ ಬಂದ್
Team Udayavani, Feb 19, 2018, 5:41 PM IST
ವಡಗೇರಾ: ಕಳೆದ ಹಲವು ತಿಂಗಳಿಂದ ಸಮೀಪದ ಬೆಂಡೆಬೆಂಬಳಿ ಗ್ರಾಮದ ವ್ಯವಸಾಯ ಸಹಕಾರ ಸಂಘದ ತೊಗರಿ ಖರೀದಿ ಕೇಂದ್ರ ಮುಚ್ಚಿರುವುದರಿಂದ ಈ ಭಾಗದ ಅನೇಕ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಹಿಂದೆ ಜಿಲ್ಲೆಯಾದ್ಯಂತ ಅನೇಕ ರೈತರು ತೊಗರಿ ಖರೀದಿ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ರಸ್ತೆ ತಡೆ ಮಾಡಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು. ಆಗ ಜಿಲ್ಲಾಧಿಕಾರಿ ತೊಗರಿ ಖರೀದಿ ಅವಧಿಯನ್ನು ವಿಸ್ತರಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದರು.
ಆಗ ಸರಕಾರ ಫೆ. 14ರಿಂದ ಮಾರ್ಚ್ 15ರವರೆಗೆ ರೈತರಿಂದ ತೊಗರಿ ಖರೀದಿಸಬೇಕು ಎಂದು ಆದೇಶ ಹೊರಡಿಸಿತ್ತು. ಜಿಲ್ಲೆಯಲ್ಲಿ ಸರಕಾರ ಸ್ಥಾಪನೆ ಮಾಡಿದ ತೊಗರಿ ಕೇಂದ್ರದಲ್ಲಿ ರೈತರಿಂದ ತೊಗರಿ ಖರೀದಿಸುತಿವೆ. ಆದರೆ ಹಲವು ದಿನಗಳಿಂದ ಬೆಡೆಬೆಂಬಳಿ ತೊಗರಿ ಕೇಂದ್ರದಲ್ಲಿ ತೊಗರಿ ಖರೀದಿಸುತ್ತಿಲ್ಲ.
ಹೀಗಾಗಿ ತೊಗರಿ ಖರೀದಿ ಕೇಂದ್ರದ ಎದುರು ಲಾರಿ, ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ನೂರಾರು ಕ್ವಿಂಟಲ್ ತೊಗರಿ ತಂದು ತೊಗರಿ ಖರೀದಿ ಕೇಂದ್ರದ ಎದುರು ರೈತರು ಕಾಯುತ್ತಿದ್ದಾರೆ. ಆದರೆ ಅತ್ತ ವ್ಯವಸಾಯ ಸೇವಾ ಸಹಕಾರ ಸಂಘದ ಯಾವೊಬ್ಬ ಸಿಬ್ಬಂದಿ ಸುಳಿಯುತ್ತಿಲ್ಲ ಎಂದು ರೈತರು ದೂರಿದ್ದಾರೆ.
ಬೆಂಡೆಬೆಂಬಳಿ ಗ್ರಾಮದಲ್ಲಿರುವ ವ್ಯವಸಾಯ ಸೇವಾ ಸಹಕಾರ ಸಂಘದಲ್ಲಿ ಇಲ್ಲಿಯವರೆಗೂ ಸುಮಾರು 661 ಜನ
ರೈತರು ತೊಗರಿ ಮಾರಾಟಕ್ಕಾಗಿ ಹೆಸರು ನೋಂದಾಯಿಸಿದ್ದಾರೆ. ಅದರಲ್ಲಿ ಈಗಾಗಲೇ ಸುಮಾರು 392 ರೈತರಿಂದ ಸುಮಾರು 5,444 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ. ಇನ್ನೂಳಿದ 269 ಜನ ರೈತರಿಂದ ತೊಗರಿ ಖರೀದಿಸಬೇಕಾಗಿದೆ.
ರೈತರ ಆರೋಪ: ಬೆಂಡೆಬೆಂಬಳಿ ವ್ಯವಸಾಯ ಸಹಕಾರ ಸಂಘದಲ್ಲಿ ಸ್ಥಾಪನೆ ಮಾಡಿರುವ ತೊಗರಿ ಕೇಂದ್ರದ ಕೆಲ ಸಿಬ್ಬಂದಿ ಶ್ರೀಮಂತ ರೈತರಿಂದ ತೊಗರಿ ಖರೀದಿಸುತ್ತಿದ್ದಾರೆ. ಆದರೆ ಬಡ ರೈತರ ತೊಗರಿ ಖರೀದಿಸಲು ಸಿಬ್ಬಂದಿ ಕುಂಟು ನೆಪ ಹೇಳುತ್ತಿದ್ದಾರೆ ಎಂದು ರೈತರ ಆರೋಪವಾಗಿದೆ.
ಆದಕಾರಣ ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನಹರಿಸಿ ಬೆಂಡೆಬೆಂಬಳಿ ಗ್ರಾಮದಲ್ಲಿರುವ ತೊಗರಿ ಖರೀದಿ ಕೇಂದ್ರದ
ಸಿಬ್ಬಂ ಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಈ ಭಾಗದ ಅನೇಕ ಗ್ರಾಮಗಳ ರೈತರು ಆಗ್ರಹಿಸಿದ್ದಾರೆ.
ತೊಗರಿ ತುಂಬಲು ಖಾಲಿ ಚೀಲ ಇರಲಿಲ್ಲ ತೊಗರಿ ತುಂಬಲು ಖಾಲಿ ಚೀಲ ಇರಲಿಲ್ಲ ಎಂಬ ಮಾಹಿತಿ ಬಂದಿದೆ. ಅದಕ್ಕಾಗಿ ಸಮಸ್ಯೆಆಗಿದ್ದು, ನೋಂದಣಿ ಮಾಡಿರುವ ಎಲ್ಲಾ ರೈತರಿಂದ ನಾಳೆಯಿಂದ ಬೆಂಡೆಬೆಂಬಳಿ ತೊಗರಿ ಕೇಂದ್ರದಲ್ಲಿ ತೊಗರಿ ಖರೀದಿಸಲಾಗುವುದು.
ರಂಗನಾಥ, ಎಪಿಎಂಸಿ ಕಾರ್ಯದರ್ಶಿ ಶಹಾಪುರ
ರೈತರ ಸಮಸ್ಯೆ ಶೀಘ್ರ ನಿವಾರಿಸಿ ಕಳೆದ ಹಲವು ದಿನಗಳಿಂದ ಬೆಂಡೆಬೆಂಬಳಿ ತೊಗರಿ ಕೇಂದ್ರದಲ್ಲಿ ತೊಗರಿ ಖರೀದಿಸುತ್ತಿಲ್ಲ. ಇದರಿಂದ ರೈತರಿಗೆ ಸಾಕಷ್ಟು ಸಮಸ್ಯೆ ಆಗಿದೆ. ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಂಡು ರೈತರ ಸಮಸ್ಯೆ ನಿವಾರಿಸಬೇಕು.
ನಿಂಗಣ್ಣ ಜಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಸಿರು ಸೇನೆ
ನಾಮದೇವ ವಾಟ್ಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.