![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Nov 12, 2021, 5:50 PM IST
ಶಹಾಪುರ: ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಪಾರದರ್ಶಕತೆ ಕಾಣಲು ಮತು ಭ್ರಷ್ಟಾಚಾರ ಮುಕ್ತತೆ ಸೇರಿದಂತೆ ಕಸಾಪ ಸಮರ್ಪಕ ಅಭಿವೃದ್ಧಿ, ನಾಡಿನ ಒಳಿತಿಗಾಗಿ ಈ ಬಾರಿ ಕಸಾಪ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಬೇಕು ಎಂದು ಕಸಾಪ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ರಾಜಶೇಖರ ಮುಲಾಲಿ ಮನವಿ ಮಾಡಿದರು.
ಕಸಾಪ ಚುನಾವಣೆ ನಿಮಿತ್ತ ನಗರದ ಸುಕ್ಷೇತ್ರ ಚರಬಸವೇಶ್ವರ ಸಂಸ್ಥಾನಕ್ಕೆ ಭೇಟಿ ನೀಡಿ ಮಠದ ಬಸಯ್ಯ ಶರಣರ ಆಶೀರ್ವಾದ ಪಡೆದು ಮತಯಾಚಿಸಿ ಅವರು ಮಾತನಾಡಿದರು.
ಕಸಾಪ ಒಂದೇ ಸಮುದಾಯದ ಸ್ವತ್ತಾಗಿದೆ. ಅದನ್ನು ಸಮಾನತೆಯಡಿ ಪಾರದರ್ಶಕವಾಗಿ ನಿರ್ಮಾಣ ಮಾಡುವ ಗುರಿ ಹೊಂದಿದ್ದೇನೆ. ಕಸಾಪದಲ್ಲಿ ಭ್ರಷ್ಟಾಚಾರ ವಾಸನೆ ಕಂಡು ಬಂದಿದ್ದು ಅದೆಲ್ಲವನ್ನು ಕಿತ್ತೆಸೆಯಬೇಕಿದೆ. ಸಾಹಿತ್ಯ ವಿಭಾಗದಲ್ಲೂ ಸಾಕಷ್ಟು ತಾರತಮ್ಯ ಕಂಡಿದ್ದೇನೆ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಕಸಾಪ ಸಾರಥ್ಯ ಮರೀಚಿಕೆ ಎನ್ನುವಂತಾಗಿದೆ. ಈ ಭಾಗದಲ್ಲಿ ಒಂದು ಲಕ್ಷ ಜನ ಮತದಾರರಿದ್ದು, ಎಲ್ಲರೂ ಒಗ್ಗಟ್ಟಾಗಿ ಮತ ಚಲಾಯಿಸುವ ಮೂಲಕ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ನಂತರ ಮಠದ ಬಸಯ್ಯ ಶರಣರು ಮುಲಾಲಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ವೇಳೆ ಹನುಮೇಶ ಉಪ್ಪಾರ, ನಾಡಗೌಡ, ಮಂಜುನಾಥ ಚಟ್ಟಿ, ರಾಮು ತಹಸೀಲ್, ಭಾಗೇಶ ಸೇರಿದಂತೆ ಇತರರಿದ್ದರು.
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.