ಬಸ್ ಸೌಲಭ್ಯ ಕಲ್ಪಿಸಲು ಕಕ ಸಾರಿಗೆ ನಿಗಮಕ್ಕೆ ಮನವಿ
Team Udayavani, Oct 23, 2021, 2:28 PM IST
ಯಾದಗಿರಿ: ಪರಸಾಪೂರ ಮತ್ತು ಟಿ. ವಡಗೇರಾ ಗ್ರಾಮಗಳಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಜಿಲ್ಲಾ ವಿಭಾಗ ವ್ಯವಸ್ಥಾಪಕ ಹರಿಬಾಬು ಅವರಿಗೆ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಚಂದ್ರಶೇಖರಗೌಡ ಮಾಗನೂರ ಮನವಿ ಮಾಡಿದರು.
ಟಿ. ವಡಗೇರಾ ಗ್ರಾಮದ ಹಲವಾರು ವಿದ್ಯಾರ್ಥಿಗಳು ಹಾಗೂ ಗ್ರಾಮದ ಜನರು ತಮ್ಮ ವೈಯಕ್ತಿಕ ಕೆಲಸ-ಕಾರ್ಯಗಳಿಗಾಗಿ ದಿನಾಲೂ ಶಹಾಪುರ ಪಟ್ಟಣಕ್ಕೆ ಬರುತ್ತಾರೆ. ಆದರೆ ಗ್ರಾಮಸ್ಥರಿಗೆ ಓಡಾಡಲು ಬಸ್‌ಗಳ ಕೊರತೆ ಇದೆ. ಪ್ರಸ್ತುತ ಓಡಾಡುವ ಬಸ್ ಬೀರನೂರ ಗ್ರಾಮದವರೆಗೂ ಬರುತ್ತದೆ. ಆದ್ದರಿಂದ ಈ ಬಸ್ಸನ್ನು ಪರಸಾಪೂರ ಗ್ರಾಮದ ವರೆಗೆ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಶಹಾಪುರ ಪಟ್ಟಣದಿಂದ ಗುಂಡಗುರ್ತಿ ಗ್ರಾಮದ ವರೆಗೆ ಬಸ್ ಸಂಚಾರವಿದ್ದು, ಅದನ್ನು ಟಿ. ವಡಗೇರಾ ಗ್ರಾಮದವರೆಗೆ ಮುಂದುವರಿಸಿ, ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡ ಬೇಕು ಎಂದು ಮನವಿ ಮಾಡಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚನ್ನಾರಡ್ಡಿಗೌಡ ಬಿಳಾರ, ರವಿಮಾಲಿ ಪಾಟೀಲ, ಸುರೇಶ ಹಾಗೂ ಮುಖಂಡರು, ಗ್ರಾಮಸ್ಥರು ಈ ಸಂದರ್ಭದಲ್ಲಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.