ತೊಗರಿ ಖರೀದಿ ಅವೈಜ್ಞಾನಿಕ: ತಕ್ಷಣ ಕ್ರಮಕ್ಕೆ ಆಗ್ರಹ
Team Udayavani, Jan 22, 2020, 2:45 PM IST
ಯಾದಗಿರಿ: ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಈ ಭಾಗದ ಪ್ರಮುಖ ಬೆಳೆಯಾದ ತೊಗರಿ ಖರೀದಿ ಮಾಡಲು ಅವೈಜ್ಞಾನಿಕ ಕ್ರಮ ಅನುಸರಿಸುತ್ತಿದ್ದು, ಇದನ್ನು ಬಿಟ್ಟು ವೈಜ್ಞಾನಿಕವಾಗಿ ತೊಗರಿ ಖರೀದಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಆಗ್ರಹಿಸಿದೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಪಾಟೀಲ ಮದ್ದರಕಿ, ಈ ಭಾಗದ ತೊಗರಿ ಬೆಳೆಯನ್ನು ಬೆಂಬಲ ಬೆಲೆಯಡಿ ಖರೀದಿಸಲು ಸರ್ಕಾರ ಎಫ್‌ಕ್ಯೂ ಗುಣಮಟ್ಟ ನಿಗದಿ ಮಾಡಿದೆ. ಆದರೆ ಕೇವಲ 10 ಕ್ವಿಂಟಲ್ ಪ್ರತಿ ರೈತರಿಂದ ಖರೀದಿಸುವ ಷರತ್ತು ವಿಧಿಸಿರುವುದು ತೀರಾ ಅವೈಜ್ಞಾನಿಕ ಮತ್ತು ಬಾಲಿಷವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಯಾಗಿ ರೈತ ಬೆಳೆದ ಎಲ್ಲ ಬೆಳೆಯನ್ನು ಬೆಂಬಲ ಬೆಲೆಗೆ ಖರೀದಿಸಬೇಕು ಮತ್ತು ಕ್ವಿಂಟಲ್‌ಗೆ 6,100 ರೂ. ಗೆ ಬದಲಾಗಿ 9,100 ರೂ. ಗೆ ಖರೀದಿಸಬೇಕು ಎಂದು ಆಗ್ರಹಿಸಿದರು.
ತಕ್ಷಣ ಕ್ರಮ ವಹಿಸಿ ಹೆಚ್ಚುವರಿ ತೊಗರಿ ಕೇಂದ್ರ ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಬರಿ ಜಿಲ್ಲಾ ಕೇಂದ್ರವಷ್ಟೇ ಅಲ್ಲದೇ ಶೀಘ್ರ ಕೇಂದ್ರಗಳಲ್ಲಿ ತೊಗರಿಯನ್ನು ವೈಜ್ಞಾನಿಕ ದರಕ್ಕೆ ಖರೀದಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘದಿಂದ ಜಿಲ್ಲೆ ಹಾಗೂ ರಾಜ್ಯಾದ್ಯಂತ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಲ್ಲಿಕಾರ್ಜುನ ಬಿ. ಯಾದಗಿರಿ, ದೇವಿಂದ್ರಪ್ಪ ದೊರಿ ಎವೂರ, ಶರಣಪ್ಪ ಪೂಜಾರಿ ಏವೂರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.