ಪಾಠ ಬೋಧನೆಗೆ ಕಲಿಕಾ ಸಂಪನ್ಮೂಲ ಬಳಸಿ
Team Udayavani, Aug 3, 2017, 8:43 AM IST
ನಾರಾಯಣಪುರ: ಮೇಳಗಳಲ್ಲಿ ಪ್ರದರ್ಶಿಸಲ್ಪಡುವ ಚಟುವಟಿಕೆಗಳ ವಿಶ್ಲೇಷಣೆಯಿಂದ ವಿದ್ಯಾರ್ಥಿಗಳಿಗೆ ವಿಷಯಾಧಾರಿತ ಬಾಹ್ಯ ಜ್ಞಾನ ಲಭಿಸಲಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಅಮರೇಶ ಕುಂಬಾರ ಹೇಳಿದರು.
ಸಮೀಪದ ಬೆಳ್ಳಿಗುಂಡ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜೀ ಪೌಂಢೇಶನ್ ಸಹಯೋಗದಲ್ಲಿ ನಡೆದ ಪರಿಸರ ಮೇಳ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಶಿಕ್ಷಕರು ಪಾಠ ಬೋಧನೆಯನ್ನು ತರಗತಿ ಕೋಣೆಗೆ ಸೀಮಿತ ಗೊಳಿಸಬಾರದು. ವಿದ್ಯಾರ್ಥಿಗಳಿಗೆ ವಿವಿಧ ಮೇಳಗಳಲ್ಲಿ ಭಾಗವಹಿಸಲು ಪ್ರೇರಿಪಿಸಬೇಕು ಜತೆಗೆ ಕಲಿಕಾ ಸಂಪನ್ಮೂಲಗಳ ಬಳಸಿಕೊಳ್ಳುವಂತೆ ಮಾರ್ಗದರ್ಶನ ನೀಡಿ ನಾನಾ ಚಟುವಟಿಕೆಗಳನ್ನು, ಪ್ರಯೋಗಳನ್ನು ತಯಾರಿಸಲು ಪ್ರೋತ್ಸಾಯಿಸಬೇಕು ಎಂದು ಹೇಳಿದರು. ಶಾಲಾಭಿವೃದ್ಧಿಗೆ ಸಮುದಾಯ ಸಹಭಾಗಿತ್ವ ಜತೆಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದರು.
ಶಿಕ್ಷಕರ ಕಲಿಕಾ ಕೇಂದ್ರದ ಮೇಲ್ವಿಚಾರಕ ಕೃಷ್ಣಾ ಬಿಜಾಸ್ಪೂರ ಮಾತನಾಡಿದರು. ಪರಿಸರ ಮೇಳವನ್ನು ಜೋಗುಂಢಬಾವಿ ಗ್ರಾಪಂ ಅಧ್ಯಕ್ಷ ಬಾಲನಗೌಡ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕ್ಲಸ್ಟರ್ ವ್ಯಾಪ್ತಿಯ 8 ಶಾಲೆಗಳ ವಿದ್ಯಾರ್ಥಿಗಳು ಪರಿಸರ ಕುರಿತಾದ 35ಕ್ಕೂ ಹೆಚ್ಚು ಚಟುವಟಿಕೆಗಳನ್ನು ಪ್ರದರ್ಶಿಸಿದರು. ತಾಪಂ ಸದಸ್ಯ ಬಾಲಜಿ ಚವ್ಹಾಣ, ಗದ್ದೆಪ್ಪ ಪೂಜಾರಿ, ಸೋಮನಗೌಡ ಬಿರಾದಾರ, ಇಸಿಒ ಜಗದೀಶ ಸಜ್ಜನ, ಸಿಆರ್‌ಪಿ ಶರಣು ಬಿರಾದಾರ, ಮೇಘಾ ಕುಲಕರ್ಣಿ, ಸಿದ್ದಲಿಂಗ್ ಮನಗೂಳಿ, ಮಾನಪ್ಪ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.