ಗಾಂಧಿ ವೃತ್ತ ಅಭಿವೃದ್ಧಿ ಯಾವಾಗ?
Team Udayavani, Sep 22, 2017, 4:39 PM IST
ಸುರಪುರ: ನಗರದ ಹೃದಯ ಭಾಗದಲ್ಲಿರುವ ಗಾಂಧಿ ವೃತ್ತದ ಗಾಂಧಿ ಪ್ರತಿಮೆ ಚಾವಣಿ ಬೀಳುವ ಹಂತದಲ್ಲಿದ್ದು, ಈ ಬಗ್ಗೆ ನಗರಸಭೆ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂಬ ಆರೋಪ ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಂದಿನ ಮೈಸೂರ ಸರಕಾರ 1977ರಲ್ಲಿ
ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
ಅಂದಿನ ರಾಜ್ಯಪಾಲರಾದ ಗೋವಿಂದ ನಾರಾಯಣ ಮತ್ತು ಅಬಕಾರಿ ಸಚಿವ ಡಿ.ಬಿ. ಕಲ್ಮಣಕರ ಪುತ್ಥಳಿ ಉದ್ಘಾಟನೆ
ನೆರವೇರಿಸಿದರು. ಪುರಸಭೆ ಅಂದಿನ ಅಧ್ಯಕ್ಷ ರಾಜಾ ಲಕ್ಷ್ಮಪ್ಪ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪುತ್ಥಳಿ ಉದ್ಘಾಟಿಸಿದ್ದ ಸರಕಾರ ಇದಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸುವುದು ಸೇರಿದಂತೆ ಇದರ ರಕ್ಷಣ ಜವಾಬ್ದಾರಿಯನ್ನು ಪುರಸಭೆಗೆ ವಹಿಸಿದೆ.
ಅಲ್ಲಿಂದ ಇಲ್ಲಿಯವರೆಗೂ ನಗರಸಭೆ ಗಾಂಧಿವೃತ್ತದ ಅಭಿವೃದ್ಧಿಗೆ ಪ್ರಯತ್ನಿಸುತ್ತಿಲ್ಲ ಸೂಮಾರು 30 ವರ್ಷಗಳ ಹಿಂದೆ
ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಅವರು ಕಾಳಜಿ ವಹಿಸಿ ಈ ವೃತ್ತಕ್ಕೆ ತಾತ್ಕಾಲಿಕವಾಗಿ ಸೇಡ್ ನಿರ್ಮಿಸಿದರು.ಇದನ್ನು ಹೊರತು ಪಡಿಸಿದರೆ ನಗರಸಭೆ ಇವತ್ತಿಗೂ ಯಾವುದೇ ಅಭಿವೃದ್ಧಿ ಕಾರ್ಯಕ್ಕೆ ಕೈ ಹಾಕಿಲ್ಲ.
ಪ್ರತಿ ಚಟುವಡಿಕೆಗಳಿಗೂ ಈ ವೃತ್ತ ಮುಖ್ಯ ವೇದಿಕೆಯಾಗಿದೆ. ವಿವಿಧ ಸಂಘ-ಸಂಸ್ಥೆಗಳು ತಮ್ಮ ಪ್ರತಿಭಟನೆಗೆ ಬಳಸಿಕೊಳ್ಳುತ್ತಿವೆ. ರಾಜಕೀಯ ಪಕ್ಷಗಳು ವಿಜಯೋತ್ಸವ, ಹರ್ಷಾಚರಣೆ, ಮೆರವಣಿಗೆಗಳಿಗೆ ಮಾತ್ರ ಈ ವೃತ್ತವನ್ನು
ಬಳಸಿಕೊಳ್ಳಲಾಗುತ್ತಿದೆ. ಆದರೆ ವೃತ್ತದ ಅಭಿವೃದ್ಧಿ ಪಡಿಸುವ ಮನಸ್ಸು ಮಾಡದೇ ಇರುವುದು ದುರಂತ.
ಆಗಸ್ಟ 15 ಸ್ವಾತಂತ್ರ್ಯದಿನೋತ್ಸ ಮತ್ತು ಜನವರಿ 26ರಂದು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಪುತ್ಥಳಿಯನ್ನು ಒಂದಿಷ್ಟು ಸ್ವತ್ಛಗೊಳಿಸಿ ಮಾರ್ಲಾಪಣೆಮಾಡಿ ಕೈ ತೊಳೆದುಕೊಳ್ಳುವ ನಗರಸಭೆ ನಂತರ ಇತ್ತ ತಿರುಗಿಸಹ ನೋಡುತ್ತಿಲ್ಲ ಎಂದು ನಗರದ ಜನತೆ ಬೇಸರ ವ್ಯಕ್ತಪಡಿಸುತ್ತಾರೆ.
ವೃತ್ತದ ಸುತ್ತಲಿನ ಕಬ್ಬಿಣ ಸರಳು ಸಂಪೂರ್ಣ ಹಾಳಾಗಿದ್ದು, ಇದಕ್ಕೆ ಗೇಟ್ ಕೊಡ ಅಳವಡಿಸಿಲ್ಲ. ಹೀಗಾಗಿ ಮಹಾತ್ಮನ
ವೃತ್ತದ ಪುತ್ಥಳಿ ಎದುರು ಬಿಡಾಡಿ ದನಗಳು ರಾಜಾರೋಷವಾಗಿ ಮಲುಗುತ್ತಿವೆ.
ಸಂಚಾರ ನಿಯಂತ್ರಿಸುವ ಪೊಲೀಸರು ಅಲ್ಲಿಯೇ ಇದ್ದರು ಕೊಡಾ ಈ ಕಡೆ ಕಣ್ಣೆತ್ತಿ ಕೂಡ ನೋಡುವುದಿಲ್ಲ ಎಂಬುದು ಜನರ ಆರೋಪವಾಗಿದೆ.
ನಗರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷದಿಂದ ಗಾಂಧಿವೃತ್ತ ಸೂಕ್ತ ರಕ್ಷಣೆ ಕಾಣದೆ ಅವಸಾನದತ್ತ ಸಾಗಿದೆ. ನಗರೋತ್ಥಾನ ಯೋಜನೆ ಅಡಿ ಕೊಟ್ಯಾಂತರ ಅನುದಾನ ಇದ್ದರು ವೃತ್ತಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಿದ್ದಯ್ಯ ಪಾಟೀಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.