ರಸ್ತೆ ದುರಸ್ತಿ ಗೆ ಕ್ರಮ ಯಾವಾಗ?
Team Udayavani, Jun 20, 2018, 4:48 PM IST
ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ: ಬಾಕಿ ಉಳಿದ ಒಂದು ಕಿ.ಮೀ ರಸ್ತೆಗೆ ಡಾಂಬರೀಕರಣ ಹಾಕುವಲ್ಲಿ ಲೋಕೊಪಯೋಗಿ ಇಲಾಖೆ ಹಿಂದೇಟು ಹಾಕಿದ್ದರಿಂದ ಹಾಳಾದ ರಸ್ತೆಯಲ್ಲಿ ನಿತ್ಯ ವಾಹನಗಳು ಸಂಚರಿಸುವುದು ಕಷ್ಟವಾಗಿದ್ದು, ಅಲ್ಲದೇ ಪ್ರಯಾಣಿಕರಿಗೆ, ಸಾರ್ವಜನಿಕರಿಗೆ, ಬೈಕ್ ಸವಾರರಿಗೆ ಸಂಕಟವಾಗಿದೆ.
ಕಕ್ಕೇರಾ ಪಟ್ಟಣದಿಂದ ಬಲಶೆಟ್ಟಿಹಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ ಇದು. 9 ಕಿ.ಮೀ ರಸ್ತೆಯಲ್ಲಿ 8 ಕಿ.ಮೀ ರಸ್ತೆಗೆ ಡಾಂಬರೀಕರಣ ಹಾಕಿ ದುರಸ್ತಿಗೊಳಿಸಲಾಗಿದ್ದು, ಚಿಂಚೋಡಿರ ದೊಡ್ಡಿಯಿಂದ ಒಂದು ಕಿ.ಮೀ ರಸ್ತೆ ರಿಪೇರಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದು, ರಸ್ತೆಗೆ ಅಲ್ಲಲ್ಲಿ ಜಲ್ಲಿಕಲ್ಲು ಎದ್ದು ರಸ್ತೆ ತೀರಾ ಹದಗೆಟ್ಟಿದ್ದು, ಪ್ರಯಾಣಿಕರು ಸಂಚಾರಕ್ಕೆ ನರಕಯಾತನೆ ಅನುಭವಿಸುವಂತಾಗಿದೆ.
ಅಪೆಂಡಿಕ್.ಇ. ಅಡಿಯಲ್ಲಿ 2.75 ಕೋಟಿ ರೂ. ವೆಚ್ಚದಲ್ಲಿ ಕಕ್ಕೇರಾದಿಂದ ಚಿಂಚೋಡಿರ ದೊಡ್ಡಿವರೆಗೂ ರಸ್ತೆಗೆ ಡಾಂಬರೀಕರಣ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಬಾಕಿ ಇದ್ದ ಒಂದು ಕಿ.ಮೀ ರಸ್ತೆಗೆ ಇಲ್ಲಿಯವರೆಗೂ ಡಾಂಬರೀಕರಣ ಹಾಕುವ ಗೋಜಿಗೆ ಸಂಬಂಧಿಸಿದ ಇಲಾಖೆ ಮುಂದಾಗಿಲ್ಲ.
ಈ ಸಮಸ್ಯೆ ಅನೇಕ ದಿನಗಳಿಂದ ವಾಹನ ಸವಾರರು ಎದುರಿಸುತ್ತಿದ್ದಾರೆ. ಅಧಿಕಾರಿಗಳಿಗೆ ಕೇಳಿದರೆ, ರಸ್ತೆಗೆ ಅನುದಾನ ಇಲ್ಲ ಎಂದು ಸಬೂಬು ಹೇಳುತ್ತಾರೆ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.
ನಿರ್ವಹಣೆ ವೆಚ್ಚ ಎಲ್ಲಿ?: ಬಾಕಿ ಉಳಿದ ರಸ್ತೆಗೆ ಅನುದಾನ ಇಲ್ಲದೆ ಹಾಗೇ ಬಿಡಲಾಗಿದೆಯಾದರೂ ಇದಕ್ಕಾಗಿ ಇದ್ದ
ನಿರ್ವಹಣೆ ವೆಚ್ಚದಲ್ಲಿ ಡಾಂಬರೀಕರಣ ಹಾಕಿ ದುರಸ್ತಿ ಗೊಳಿಸಬಹುದಾಗಿತ್ತು. ಇದಕ್ಕೂ ನಿಷ್ಕಾಳಜಿ ತೋರಲಾಗಿದೆ.
ಹಾಗಾದರೆ ರಸ್ತೆಗೆ ಸಂಬಂಧಿಸಿದ ನಿರ್ವಹಣ ವೆಚ್ಚ ಏನು ಮಾಡಲಾಗಿದೆ ಎಂದು ಜನರ ಪ್ರಶ್ನೆಯಾಗಿದೆ. ನಿರ್ವಹಣೆ ಅನುದಾನದಲ್ಲಿ ಗುಂಡಿ ಬಿದ್ದ ರಸ್ತೆಗೆ ತಾತ್ಕಾಲಿಕವಾಗಿ ಡಾಂಬರೀಕರಣ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ಇದ್ಯಾವುದು ಗಮನಹರಿಸಿಲ್ಲ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಪೂರ್ಣಗೊಂಡ 1 ಕಿ.ಮೀ ರಸ್ತೆಗೆ ತಾತ್ಕಾಲಿಕವಾಗಿ ರಿಪೇರಿ ಮಾಡಲಿ ಎಂದು ಪ್ರಯಾಣಿಕರ ಒತ್ತಾಯವಾಗಿದೆ.
ಸದ್ಯ ಕ್ರಿಯಾಯೋಜನೆಯಡಿ ಬಾಕಿ ಉಳಿದ ನೂರು ಮೀಟರ್ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಇದಕ್ಕಾಗಿ ಅಂದಾಜು ವರದಿ ತಯಾರಿಸಲಾಗಿದ್ದು, ಅನುಮೊದನೆಯೊಂದಿಗೆ ಡಾಂಬರೀಕರಣ ರಸ್ತೆ ನಿರ್ಮಿಸಲಾಗುವುದು.
ಸುಭಾಶ್ಚಂದ್ರ. ಎಇಇ
ರಸ್ತೆ ಹದಗೆಟ್ಟಿದರಿಂದ ಸಂಚಾರಕ್ಕೆ ತೊಂದರೆ ಅನುಭವಿಸಬೇಕಾಗಿದೆ. ರಾತ್ರಿ ವೇಳೆ ಅಪಾಯವೇ ಜಾಸ್ತಿ. ಹೀಗಾಗಿ ಶೀಘ್ರ ರಸ್ತೆ ಅಭಿವೃದ್ಧಿಪಡಿಸಬೇಕು.
ಹನುಮಂತ, ವಾಹನ ಸವಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.