ಕಾಂಗ್ರೆಸ್ ಮಾಯವಾಗಿ, ಬಿಜೆಪಿ ಭದ್ರ ಕೋಟೆಯಾಗಲಿದೆ ಕಲ್ಯಾಣ
Team Udayavani, Aug 27, 2022, 3:21 PM IST
ಸೈದಾಪುರ: ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ವರ್ಗಗಳ ಸಮುದಾಯ ಮತ್ತು ಕ್ಷೇತ್ರಗಳ ಅಭಿವೃದ್ಧಿಗೆ ಬಿಜೆಪಿ ಪ್ರಾತಿನಿಧ್ಯ ನೀಡುತ್ತಿರುವುದರಿಂದ ಮುಂದಿನ 20 ವರ್ಷಗಳ ಕಾಲ ಕಾಂಗ್ರೆಸ್ ಮಾಯವಾಗಿ, ಈ ಭಾಗ ಬಿಜೆಪಿಯ ಭದ್ರಕೋಟೆಯಾಗುವುದು ಎಂದು ವಿ.ಪ. ನೂತನ ಸದಸ್ಯ ಬಾಬುರಾವ್ ಚಿಂಚನಸೂರ ತಿಳಿಸಿದರು.
ಪಟ್ಟಣದ ಐರೆಡ್ಡಿ ಕಲ್ಯಾಣ ಮಂಟಪದಲ್ಲಿ ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಮತ್ತು ಬಳಿಚಕ್ರ ಹೋಬಳಿಯ ಸರ್ವ ಸಮಾಜದ ಮುಖಂಡರು ಮತ್ತು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದಲ್ಲಿನ ಜನರಿಗೆ ಮುಟ್ಟಿಸುವ ಮೂಲಕ ಮುಂದಿನ 2023ರ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿ ಭಾರಿ ಅಂತರದ ಜಯಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಸಂಸದ ಡಾ| ಉಮೇಶ ಜಿ. ಜಾಧವ ಮಾತನಾಡಿ, ಬಿಜೆಪಿ ಹಿಂದುಳಿದ ವರ್ಗಗಳ ದೊಡ್ಡ ಶಕ್ತಿ ಬಾಬುರಾವ್ ಚಿಂಚನೂರು ಅವರಿಗೆ ಎಂಎಲ್‌ಸಿ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಹೊಸ ಹುರುಪು ಮೂಡಿಸಿದೆ ಎಂದರು.
ಭೀಮಣ್ಣಗೌಡ ಕ್ಯಾತ್ನಾಳ, ಪ್ರಕಾಶಗೌಡ ಸೈದಾಪುರ, ಮಲ್ಲಣ್ಣಗೌಡ ಕೂಡ್ಲೂರು, ಬಸುಗೌಡ ಐರೆಡ್ಡಿ, ಶ್ರೀಧರ ಘಂಟಿ ಬಾಡಿಯಾಲ, ಮಲ್ಲಣ್ಣಗೌಡ ದುಪ್ಪಲ್ಲಿ, ಹಿರಿಯ ಮುಖಂಡ ಬಸವರಾಜಯ್ಯಸ್ವಾಮಿ ಬದ್ದೇಪಲ್ಲಿ, ಭೀಮರೆಡ್ಡಿ ನ್ಯಾಯವಾದಿ ಶೆಟ್ಟಿಹಳ್ಳಿ, ಮುಕುಂದ ಕುಮಾರ ಅಲಿಝಾರ್, ರವೀಂದ್ರ ಮಲ್ಲೋರ್, ಹನುಮಂತ ಈಡ್ಲೂರ್, ತಾಪಂ ಮಾಜಿ ಸದಸ್ಯ ಚಂದಪ್ಪ ಕಾವಲಿ, ಶರಣಪ್ಪಗೌಡ ಬಾಲಛೇಡ್, ಶರಣಬಸವ ಸ್ವಾಮಿ ಬದ್ದೇಪಲ್ಲಿ, ಸುರೇಶ ಆನಂಪಲ್ಲಿ, ರಮೇಶ ಭೀಮನಹಳ್ಳಿ, ಮರೆಪ್ಪ ಕಟ್ಟಮನಿ, ಭೀಮಣ್ಣ ಮಡಿವಾಳ, ಅಮರೇಶ ನಾಯಕ, ಮಲ್ಲೇಶ ನಾಯಕ, ರಾಜು ದೊರೆ, ಬಸು ನಾಯಕ, ಲಕ್ಷ್ಮಣ ಓಬಲಾಪುರ, ಶ್ರೀದೇವಿ ಶೆಟ್ಟಿಹಳ್ಳಿ, ಶರಣಗೌಡ ಮಲ್ಹಾರ, ಬಸವರಾಜ ಹಿರೇನೂರು, ಶಂಕರ ಕಂದಕೂರು, ಖತಲಪ್ಪ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.