ಹೊಟ್ಟೆಪಾಡಿಗೆ ಮಹಾನಗರಕ್ಕೆ ಗುಳೆ!
ಕೈತುಂಬ ಕೆಲಸವೂ ಇಲ್ಲ, ಕೂಲಿಯೂ ಇಲ್ಲ | ತುತ್ತಿನ ಚೀಲ ತುಂಬಿಸಿಕೊಳ್ಳ ಲು ಸಾಹಸ
Team Udayavani, Sep 9, 2020, 4:17 PM IST
ಸಾಂದರ್ಭಿಕ ಚಿತ್ರ
ಯಾದಗಿರಿ: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಕೋವಿಡ್ ಅಟ್ಟಹಾಸದಮಧ್ಯೆಯೇ ಗಡಿ ಜಿಲ್ಲೆ ಯಾದಗಿರಿಯಿಂದ ಜನರು ಕೂಲಿ ಕೆಲಸ ಅರಿಸಿ ನಿತ್ಯ ಐದು ನೂರಕ್ಕೂ ಹೆಚ್ಚು ಜನ ಗುಳೆ ಹೋಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಕೋವಿಡ್ ಆತಂಕ ಮತ್ತು ಕೆಲಸಗಳಿಲ್ಲದೇ ಬೆಂಗಳೂರು, ಪುಣೆ, ಹೈದರಾಬಾದ್, ಮುಂಬೈಯಿಂದ ಜಿಲ್ಲೆಗೆ ಸುಮಾರು 40 ಸಾವಿರದಷ್ಟು ಜನರು ಮರಳಿ ಗ್ರಾಮಗಳಿಗೆ ಸೇರಿದ್ದರು. ಪಡಿತರ ಚೀಟಿದಾರರಿಗೆ ಸರ್ಕಾರ ಉಚಿತ ಪಡಿತರ ಧಾನ್ಯಗಳನ್ನೇನೋ ನೀಡುತ್ತಿದೆ. ಆದರೆ ಕೈಯಲ್ಲಿ ಕೆಲಸವೂ ಇಲ್ಲ,ಸಮರ್ಪಕ ಕೂಲಿಯೂ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಗ್ರಾಮಗಳಿಂದ ಮತ್ತೆ ಮಹಾನಗರಗಳತ್ತ ಜನ ಮುಖ ಮಾಡುತ್ತಿದ್ದಾರೆ.
ಕೋವಿಡ್ ವೈರಸ್ ರುದ್ರನರ್ತನ ಮುಂದುವರಿಸಿದ್ದು ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ. ಬೆಂಗಳೂರು ವ್ಯಾಪ್ತಿಯಲ್ಲಿಯೇನಿತ್ಯ ಸಾವಿರಾರು ಪ್ರಕರಣಗಳು ಪತ್ತೆಯಾಗುತ್ತಿದ್ದುಇದ್ಯಾವುದನ್ನು ಲೆಕ್ಕಿಸದ ಜನರು ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ರಾಣವನ್ನೇ ಪಣಕ್ಕಿಡುವ ಸಾಹಸಕ್ಕೆ ಕೈ ಹಾಕಿದ್ದಾರೆ.
ಪ್ರಸ್ತುತ ರೈಲು ಸಂಚಾರ ವಿರಳವಾಗಿದ್ದು, ಸುಮಾರು ಒಂದು ತಿಂಗಳಿನಿಂದ ಈಶಾನ್ಯ ಸಾರಿಗೆ ಸಂಸ್ಥೆ ಬಸ್‌ಗಳ ಮೂಲಕ ಜನರು ತಮ್ಮ ಚಿಕ್ಕ ಮಕ್ಕಳೊಂದಿಗೆ ಬೆಂಗಳೂರಿಗೆ ತೆರಳುತ್ತಿದ್ದಾರೆ. ಜಿಲ್ಲೆಯಿಂದ ನಿತ್ಯ ಅಂದಾಜು 20ರಿಂದ 22 ವಾಹನಗಳು ಸಂಚರಿಸುತ್ತಿರುವ ಕುರಿತು ಸಾರಿಗೆ ಮೂಲಗಳಿಂದ ತಿಳಿದು ಬಂದಿದೆ. ಗ್ರಾಮೀಣ ಜನರು ಸ್ಥಳೀಯವಾಗಿಯೇ ಇದ್ದು ಕೆಲಸ ಮಾಡಲು ಖಾತ್ರಿ ಯೋಜನೆಯಡಿ ಮಾನವ ದಿನ ಸೃಷ್ಟಿಸಿ ಕೆಲಸ ನೀಡಲು ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಜಿಲ್ಲಾಡಳಿತದ ಉನ್ನತ ಅಧಿಕಾರಿಗಳೂ ಗ್ರಾಮೀಣ ಜನರಿಗೆ ಇದ್ದಲ್ಲಿಯೇ ಕೆಲಸ ಕಲ್ಪಿಸಿ ಅನುಕೂಲ ಮಾಡುತ್ತಿದ್ದೇವೆ ಎನ್ನುತ್ತಾರೆ. ಆದರೆ ಜನರು ಮಾತ್ರ ತಮಗೆ ಕೆಲಸ ಸಿಗುತ್ತಿಲ್ಲ ಎಂದು ಕೋವಿಡ್ ಸಂಕಷ್ಟದಲ್ಲಿಯೂ ಕೆಲಸ ಅರಿಸಿ ಗುಳೆ ಹೋಗುತ್ತಿರುವುದು ತಪ್ಪಿಲ್ಲ.
ಖಾತ್ರಿಯಲ್ಲಿ 18 ಲಕ್ಷ ಮಾನವ ದಿನ : ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವುದು, ಕಲ್ಯಾಣ ಪುನಶ್ಚೇತನ, ಬದು ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. ಸೆ.8ರ ವರೆಗೆ ಜಿಲ್ಲೆಯಲ್ಲಿ 18.38 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಿ ಕೆಲಸ ನೀಡಲಾಗಿದ್ದು, 13312 ಜನ ಇಂದು ಕೂಲಿ ಕೆಲಸ ನಿರ್ವಹಿಸಿದ್ದಾರೆ.
ಜಿಲ್ಲೆಯಲ್ಲಿ ಗ್ರಾಮೀಣ ಜನರಿಗೆ ಇಲ್ಲಿಯೇ ಕೆಲಸ ನೀಡಲು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗುತ್ತಿದೆ. ಕೊರೊನಾ ಹಬ್ಬುತ್ತಿರುವ ಕಾಲದಲ್ಲಿ ಜನರು ಊರಲ್ಲಿಯೇ ಇದ್ದು ಕೆಲಸಮಾಡಲು ಅನುಕೂಲವಿದೆ. ಗ್ರಾಮೀಣ ಭಾಗದಲ್ಲಿಸೂಕ್ತ ಜಾಗೃತಿ ಮೂಡಿಸಿ ಜನರಿಗೆ ಇಲ್ಲಿಯೇ ಉದ್ಯೋಗ ಕಲ್ಪಿಸುವ ಕುರಿತು ಅಗತ್ಯ ಕ್ರಮವಹಿಸುವ ಬಗ್ಗೆ ಜಿಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು. -ಡಾ. ರಾಗಪ್ರೀಯಾ ಆರ್. ಜಿಲ್ಲಾಧಿಕಾರಿ
ಇಲ್ಲಿದ್ದು ಏನ್ ಮಾಡೋದ್ರಿ,ಸರಿಯಾಗಿ ಕೂಲಿ ಸಿಗಲ್ಲ, ಬೆಂಗಳೂರಿನಲ್ಲಿ ದಿನಕ್ಕೆ 500ರಿಂದ 700 ಕೂಲಿ ಸಿಗುತ್ತದೆ. ಕೊರೊನಾ ಭಯವೂ ಇದೆ. ಆದರೆ ಹೊಟ್ಟೆ ಸುಮ್ಮನಿರಲ್ಲ ಅಲ್ವಾ, ಬೆಂಗಳೂರಿನಿಂದ ಬಂದು 3 ತಿಂಗಳಾಯಿತು. ಈಗ ಮತ್ತೆ ಕೆಲಸ ಸಿಗುವ ನಿರೀಕ್ಷೆಯಲ್ಲಿ ಹೊರಟಿದ್ದೇನೆ -ಬಸವರಾಜ, ಕೂಲಿ ಕಾರ್ಮಿಕ
-ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
JDS: ದೇವೇಗೌಡರ ಕುಟುಂಬ ಬಲಿ ಪಡೆಯೋದಾದ್ರೆ ಶಿವರಾಮೇಗೌಡ್ರು ಸಂಸದರಾಗ್ತಿದ್ರಾ?: ಕಂದಕೂರ
Hunasagi: ಕೃಷ್ಣಾನದಿಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಸಾವು
Yadagiri: ಕೃಷ್ಣಾ ನದಿಯಲ್ಲಿ ಈಜಲು ಹೋಗಿ ಯುವಕರಿಬ್ಬರು ಸಾವು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.