ಯಾದಗಿರಿ: ಮತ್ತೆ 7 ಜನರಿಗೆ ಸೋಂಕು
Team Udayavani, Jul 3, 2020, 9:07 AM IST
ಯಾದಗಿರಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಗುರುವಾರ ಜಿಲ್ಲೆಯಲ್ಲಿ ಮತ್ತೆ 7 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 956ಕ್ಕೆ ತಲುಪಿದೆ. ಆತಂಕಕಾರಿ ವಿಚಾರವೆಂದರೆ ಇಂದು ಸೋಂಕು ದೃಢಪಟ್ಟ 5 ಜನರ ಸೋಂಕಿನ ಸಂಪರ್ಕದ ಮೂಲವೇ ಪತ್ತೆಯಾಗಿಲ್ಲ.
ತೆಲಂಗಾಣದ ಹೈದರಾಬಾದ್ ಮೂಲದ ನಂಟು ಹೊಂದಿರುವ ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದ 22 ವರ್ಷದ ಮಹಿಳೆ (ಪಿ-16826), ಹಾಲಭಾವಿಯ 60 ವರ್ಷದ ಮಹಿಳೆ (ಪಿ-16828) ಮಹಾರಾಷ್ಟ್ರದಿಂದ ಹಿಂತಿರುಗಿದ್ದಾರೆ. ಇವರನ್ನು ಹೊರತುಪಡಿಸಿ ಐದು ಜನ ತಾಲೂಕಿನ ಹತ್ತಿಕುಣಿ ಗ್ರಾಮದ 45 ವರ್ಷದ ಪುರುಷ (ಪಿ-16827), ಹೊನಗೇರಾ ಮೂಲದ ಯಾದಗಿರಿಯ ಬಸವೇಶ್ವರ ನಗರದ 16 ವರ್ಷದ ಯುವಕ (ಪಿ-16829) ಮತ್ತು 55 ವರ್ಷದ ಮಹಿಳೆ (ಪಿ-16830), ಗುರುಮಠಕಲ್ ತಾಲೂಕಿನ ಎಜೆಟಿ ಕಾಲೋನಿಯ 45 ವರ್ಷದ ಮಹಿಳೆ (ಪಿ-16831) ಹಾಗೂ ಯಾದಗಿರಿ ತಾಲೂಕಿನ ಕೂಡ್ಲೂರನ 30 ವರ್ಷದ ಪುರುಷ (ಪಿ-16832)ಗೆ ಸೋಂಕು ದೃಢವಾಗಿದ್ದು ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಈವರೆಗೆ 854 ಸೋಂಕಿತರು ಗುಣಮುಖವಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಗುರುವಾರ ಹೊಸದಾಗಿ 296 ಜನರ ಮಾದರಿ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿದ್ದು, ಒಟ್ಟು 967 ಜನರ ವರದಿ ಬರಬೇಕಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದ 1805 ಜನ, ದ್ವಿತೀಯ ಸಂಪರ್ಕದ 3069 ಜನರನ್ನು ಪ್ರತ್ಯೇಕವಾಗಿರಿಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ 24417 ಜನರ ವರದಿ ನೆಗೆಟಿವ್ ಬಂದಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.