Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Team Udayavani, Apr 26, 2024, 9:33 PM IST
ಯಾದಗಿರಿ:ದೇಶದ ರಕ್ಷಣೆಗಾಗಿ ಮೂರನೇ ಬಾರಿ ಮೋದಿ ಅವರನ್ನು ಮತ್ತೆ ಪಿಎಂ ಮಾಡಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ವಿನಂತಿ ಮಾಡಿದರು.
ಅವರು ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದು ಮಹತ್ವದ ಚುನಾವಣೆಯಾಗಿದೆ.ದೇಶವನ್ನು ಗಟ್ಟಿಗೊಳಿಸುವ ಸುಭದ್ರ ಸರಕಾರಕ್ಕೆ ದೇಶದ ಜನರು ಬಿಜೆಪಿಗೆ ಹೆಚ್ಚಿನ ಶಕ್ತಿ ತುಂಬಬೇಕಿದೆ.ಪಿಎಂ ನರೇಂದ್ರ ಮೋದಿ ದೇಶದಲ್ಲಿ ಅನೇಕ ಯೋಜನೆ ಮೂಲಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ರೈತರಿಗೆ ಅನೇಕ ಯೋಜನೆ ಜಾರಿ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿ, ಕಾಂಗ್ರೆಸ್ ಸಮಾಜ ಒಡೆಯುವ ಕಾರ್ಯ ಮಾಡಲಿದೆ.ಆದರೆ, ಮೋದಿ ಅವರು ದೇಶವನ್ನು ವಿಕಸಿತ ಮಾಡಲಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಹಾಗೂ ಸುರಪುರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರು ಬಿಜೆಪಿ ಅಭ್ಯರ್ಥಿಗಳಾಗಿದ್ದು ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು.ರಾಜಾ ಅಮರೇಶ್ವರ ನಾಯಕ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು.. ರಾಜುಗೌಡ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದರು.
ಈ ವೇಳೆ ಜನರತ್ತ ಕೈಬಿಸಿದರು.ನಡ್ಡಾ ಅವರು ಮಾತನಾಡುವ ವೇಳೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗಿದರು.ಭಾಷಣ ನಿಲ್ಲಿಸಿ ಜನರತ್ತ ಕೈಬೀಸಿ ಮತ್ತೆ ಭಾಷಣ ಮಾಡಿದರು.
ರಾಜಾಅಮರೇಶ್ವರ ನಾಯಕ ಅವರು ಮಾತನಾಡಿ, ರಾಯಚೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚಿನ ಮತಗಳು ನೀಡಿ ಗೆಲ್ಲಿಸಬೇಕೆಂದರು.ಪಿಎಂ ನರೇಂದ್ರ ಮೋದಿ ಅವರನ್ನು ಪಿಎಂ ಮಾಡಲು ಆರಿಸಿ ಕಳುಹಿಸಬೇಕೆಂದರು.
ರಾಜುಗೌಡ ಅವರು ಮಾತನಾಡಿ,ಪಿಎಂ ನರೇಂದ್ರ ಮೋದಿ ಅವರು ಅನೇಕ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರೆ. ಯಾದಗಿರಿ ಜಿಲ್ಲೆಗೆ ಪಿಎಂ ಮೋದಿ ಅವರು ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ಕಾರ್ಯ ಮಾಡಿದ್ದಾರೆ. ನನ್ನನ್ನು ಹೆಚ್ಚು ಮತಗಳಿಂದ ಗೆಲ್ಲಿಸಿ ತನ್ನಿ ಗೆದ್ದು ಶಾಸಕನಾದ ನಂತರ ರೈತರ ಬೆಳೆಗಳಿಗೆ ಎರಡು ಪೀಕ್ ನೀರು ಕೊಡದಿದ್ದರೆ ರಾಜೀನಾಮೆ ನೀಡುತ್ತೆನೆಂದರು.ರೈತರು ಹಾಗೂ ಕ್ಷೇತ್ರದ ಜನರ ಕಲ್ಯಾಣಕ್ಕಾಗಿ ಜೀವ ಕೊಡಲು ಸಿದ್ದನಿದ್ದೆನೆಂದರು.
ಬಿಸಿಲ ನಡುವೆ ರೋಡ್ ಶೋ
ಮೊಟ್ಟಮೊದಲ ಬಾರಿಗೆ ಯಾದಗಿರಿ ಜಿಲ್ಲೆಗೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು,ಲೋಕಸಭಾ ಚುನಾವಣೆ ಹಾಗೂ ಸುರಪುರ ಉಪಚುನಾವಣೆ ಹಿನ್ನಲೆ ಮತ ಬೇಟೆ ನಡೆಸಲು ಬಂದಿದ್ದರು.ಸುರಪುರ ನಗರದ ವಾಲ್ಮೀಕಿ ವೃತ್ತದಿಂದ ಗಾಂಧಿ ವೃತ್ತದ ವರಗೆ ತೆರೆದ ವಾಹನದಲ್ಲಿ ಬಿಸಿಲ ನಡುವೆ ರೋಡ್ ಶೋ ನಡೆಸಿದರು.ನಡ್ಡಾ ಅವರ ಮೈ ಮೇಲೆ ರಸ್ತೆ ಅಕ್ಕಪಕ್ಕದಲ್ಲಿದ್ದ ಅಭಿಮಾನಿ ಹಾಗೂ ಕಾರ್ಯಕರ್ತರು ಪುಷ್ಪ ಮಳೆ ಗೈದರು.
ರೋಡ್ ಶೋ ವೇಳೆ ಎಲ್ಲಡೇ ಮೋದಿ ಮೋದಿ ಎಂಬ ಜಯಘೋಷಣೆಗಳನ್ನು ಕೂಗಿದರು.ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ಹಾಗೂ ಕಾರ್ಯಕರ್ತರು ರೋಡ್ ಶೋದಲ್ಲಿ ಭಾಗಿಯಾದರು.
ಈ ವೇಳೆ ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ,ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ,ಯಲ್ಲಪ್ಪ ಕುರಕುಂದಿ,ಬಸವರಾಜ ಸ್ಥಾವರಮಠ,ಬಸನಗೌಡ ಯಡಿಯಾಪುರ,ರಾಜಾಹಣಮಪ್ಪ ನಾಯಕ ತಾತಾ,ಬಿ.ಎಂ.ಹಳ್ಳಿಕೊಟೆ,ಎಚ್.ಸಿ.ಪಾಟೀಲ, ಸುರೇಶ್ ಸಜ್ಜನ್,ಬಬ್ಲುಗೌಡ,ಸಣ್ಣದೇಸಾಯಿ ದೇವರಗೋನಾಲ,ಮಲ್ಲು ದಂಡಿನ್,ಭಲಭೀಮನಾಯಕ ಭರಮಡ್ಡಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.