ಪತ್ರಕರ್ತರಿಗೆ ಕೋವಿಡ್-19 ತಪಾಸಣೆ
Team Udayavani, Apr 25, 2020, 12:28 PM IST
ಯಾದಗಿರಿ: ಹಳೆ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಯಾದಗಿರಿ: ರಾಜ್ಯದಲ್ಲಿ ಕೋವಿಡ್-19 ವ್ಯಾಪಿಸುತ್ತಿರುವ ಪ್ರಯುಕ್ತ ಮಾಧ್ಯಮ ಪ್ರತಿನಿಧಿಗಳಿಗೆ ಆರೋಗ್ಯ ತಪಾಸಣೆ ನಡೆಸಲು ಸರ್ಕಾರದ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಶುಕ್ರವಾರ ಆರೋಗ್ಯ ತಪಾಸಣೆ ನಡೆಸಲಾಯಿತು.
ನಗರದ ಹಳೆ ಪ್ರವಾಸಿ ಮಂದಿರ, ಶಹಾಪುರದ ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಪತ್ರಕರ್ತರ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಶ್ವಾಸಕೋಶ, ಜ್ವರ ಹಾಗೂ ರಕ್ತದೊತ್ತಡ ತಪಾಸಣೆ ಮಾಡಲಾಯಿತು. ವೈದ್ಯಾಧಿಕಾರಿಗಳು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಪತ್ರಕರ್ತರಿಗೆ ಸಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು.
ಜಿಲ್ಲಾ ಕೇಂದ್ರದಲ್ಲಿ ನಡೆದ ಶಿಬಿರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎಸ್.ಪಾಟೀಲ, ಯಾದಗಿರಿ ತಾಲೂಕು ವೈದ್ಯಾಧಿಕಾರಿ ಹಣಮಂತರೆಡ್ಡಿ ಇದ್ದರು. ಡಾ| ಮಹಾಂತೇಶ್ವರಿ ಆರ್. ಜಾಂಡೇದ್, ಡಾ| ಕೀರ್ತಿ ಎಚ್. ಚಿಂತನಹಳ್ಳಿ, ಡಾ| ಭಾಗರೆಡ್ಡಿ, ನೇತ್ರಾಧಿಕಾರಿ ಬಸವರಾಜ ಆರ್.ಕಲಬುರ್ಗಿ, ಅಬ್ದುಲ್ ವಾಜೀದ್, ಶುಶ್ರೂಷಕಿಯರಾದ ನಿರ್ಮಲಾ, ಮಲ್ಲಮ್ಮ ತಪಾಸಣೆ ನಡೆಸಿದರು.
ಸುರಪುರ: ನಗರ ಆರೋಗ್ಯ ಕೇಂದ್ರದ ಕಚೇರಿಯಲ್ಲಿ ಶುಕ್ರವಾರ ತಾಲೂಕಿನ 24 ಪತ್ರಕರ್ತರಿಗೆ ಕೋವಿಡ್-19 ತಪಾಸಣೆ ಮಾಡಲಾಯಿತು. ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘ ರಾಜ್ಯ ಘಟಕದ ಕೋರಿಕೆ ಮೇರೆಗೆ ಜಿಲ್ಲೆ ಮತ್ತು ತಾಲೂಕು ಪತ್ರಕರ್ತರಿಗೆ ಕೋವಿಡ್-19 ತಪಾಸಣೆ ಕೈಗೊಳ್ಳುವಂತೆ ರಾಜ್ಯ ಸರಕಾರದ ಆದೇಶದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಪತ್ರಕರ್ತರಿಗೆ ತಪಾಸಣಾ ಶಿಬಿರ ಏರ್ಪಡಿಸಿತ್ತು .
ತಾಲೂಕು ಆರೋಗ್ಯಾಧಿಕಾರಿ ಡಾ| ಆರ್.ವಿ. ನಾಯಕ ನೇತೃತ್ವ ವಹಿಸಿದ್ದರು. ಸುರಪುರ ನಗರ, ಕೆಂಭಾವಿ ಮತ್ತು ಕಕ್ಕೇರಾದ ಹಲವು ಪತ್ರಕರ್ತರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಎಲ್ಲರು ಆರೋಗ್ಯವಂತರಾಗಿದ್ದಾರೆ. ಮುಂಬರುವ ದಿನಗಳಲ್ಲಿ ಹುಣಸಗಿ ಮತ್ತು ಕಕ್ಕೇರಾದ ಇನ್ನುಳಿದ ಪತ್ರಕರ್ತರಿಗೂ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ನಾಯಕ ತಿಳಿಸಿದರು.
ಕೋವಿಡ್ ವೈರಸ್ ನಿಯಂತ್ರಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸುದ್ದಿ ಸಂಗ್ರಹ ಭರಾಟೆಯಲ್ಲಿ ತೊಡಗಿಸಿಕೊಳ್ಳುವ ಪತ್ರಕರ್ತರ ಆರೋಗ್ಯ ರಕ್ಷಣೆ ಕೂಡ ನಮಗೆ ಅಷ್ಟೆ ಮುಖ್ಯವಾಗಿದೆ. ಕಾರಣ ವರದಿಗಾರರು ಸುದ್ದಿ ಸಂಗ್ರಹದೊಂದಿಗೆ ತಮ್ಮ ಸುರಕ್ಷಿತ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆನೀಡಿದರು. ತಪಾಸಣೆಗೆ ಆಗಮಿಸಿದ್ದ ಪತ್ರಕರ್ತರಿಗೆ ಸಾನಿಟೈಸರ್ ಮತ್ತು ಮಾಸ್ಕ್ ವಿತರಿಸ ಲಾಯಿತು. ಅವರ ರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಯಿತು.
ಪತ್ರಕರ್ತರ ಹೆಸರು, ವಯಸ್ಸು, ಪತ್ರಿಕೆ ಹೆಸರು ದಾಖಲಿಸಿಕೊಳ್ಳಲಾಯಿತು. ತಹಶೀಲ್ದಾರ್ ನಿಂಗಣ್ಣ ಬಿರಾದಾರ, ಹಿರಿಯ ಮತ್ತು ಕಿರಿಯ ಪತ್ರಕರ್ತರು, ಹಲವು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ತಪಾಸಣಾ ಶಿಬಿರದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.