ಯಾದಗಿರಿ: ಸೋಂಕಿತರ ಸಂಖ್ಯೆ 515ಕ್ಕೆ ಏರಿಕೆ
ರವಿವಾರ ಐವರು ಮಕ್ಕಳು ಸೇರಿ 39 ಮಂದಿಗೆ ಕೋವಿಡ್ ದೃಢ ಇದುವರೆಗೆ 70 ಜನ ಗುಣಮುಖ
Team Udayavani, Jun 8, 2020, 12:40 PM IST
ಸಾಂದರ್ಭಿಕ ಚಿತ್ರ
ಯಾದಗಿರಿ: ಜಿಲ್ಲೆಯಲ್ಲಿ ರವಿವಾರ 10 ವರ್ಷದೊಳಗಿನ 5 ಮಕ್ಕಳು ಸೇರಿದಂತೆ ಒಟ್ಟು 39 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 515 ಪ್ರಕರಣಗಳ ಪೈಕಿ 70 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಯಾದಗಿರಿ ತಾಲೂಕಿನ ರಾಯನಕಲ್ ತಾಂಡಾದ 3 ವರ್ಷದ ಹೆಣ್ಣುಮಗು (ಪಿ-5269) ಸೇರಿದಂತೆ ಹತ್ತಿಕುಣಿ ತಾಂಡಾದ 32 ವರ್ಷದ ಪುರುಷ (ಪಿ-5260), 30 ವರ್ಷದ ಮಹಿಳೆ (ಪಿ-5261), ವಿಶ್ವಾಸಪುರದ 20 ವರ್ಷದ ಪುರುಷ (ಪಿ-5262), ಶಹಾಪುರ ತಾಲೂಕಿನ ಸಗರದ 20 ವರ್ಷದ ಪುರುಷ (ಪಿ-5263), 45 ವರ್ಷದ ಮಹಿಳೆ (ಪಿ-5264), ಸುರಪುರ ತಾಲೂಕಿನ ನಾರಾಯಣಪುರದ 55 ವರ್ಷದ ಮಹಿಳೆ (ಪಿ-5265), 55 ವರ್ಷದ ಪುರುಷ (ಪಿ-5266), ಬದ್ದೇಪಲ್ಲಿ ತಾಂಡಾದ 19 ವರ್ಷದ ಯುವತಿ (ಪಿ-5267), ಏವೂರು ಭೀಮಾ ತಾಂಡಾದ 55 ವರ್ಷದ ಪುರುಷ (ಪಿ-5268), ರಾಯನಕಲ್ ತಾಂಡಾದ 20 ವರ್ಷದ ಮಹಿಳೆ (ಪಿ-5270), 10 ವರ್ಷದ ಬಾಲಕಿ (ಪಿ-5271), ಹತ್ತಿಕುಣಿ ತಾಂಡಾದ 6 ವರ್ಷದ ಬಾಲಕ (ಪಿ-5272), ಗಾಜರಕೋಟ್‌ನ 60 ವರ್ಷದ ಪುರುಷ (ಪಿ-5273), ಯಾದಗಿರಿ ನಗರದ 20 ವರ್ಷದ ಪುರುಷ (ಪಿ-5274) ಮತ್ತು 25 ವರ್ಷದ ಪುರುಷ (ಪಿ-5275), 21 ವರ್ಷದ ಮಹಿಳೆ (ಪಿ-5276) ಹಾಗೂ 35 ವರ್ಷದ ಮಹಿಳೆ (ಪಿ-5277), ಯಾದಗಿರಿ ತಾಲೂಕಿನ ವಿಶ್ವಾಸಪುರದ 25 ವರ್ಷದ ಪುರುಷ (ಪಿ-5278) ಅದೇ ಗ್ರಾಮದ 20 ವರ್ಷದ ಮಹಿಳೆ (ಪಿ-5279)ಹಾಗೂ 28 ವರ್ಷದ ಪುರುಷ (ಪಿ-5280), ಯಾದಗಿರಿ ನಗರದ 18 ವರ್ಷದ ಯುವತಿ (ಪಿ-5281), ಅರಕೇರಾ ತಾಂಡಾದ 12 ವರ್ಷದ ಬಾಲಕ (ಪಿ-5282), 9 ವರ್ಷದ ಬಾಲಕ (ಪಿ-5283), ಪಸಪೂಲ್ ತಾಂಡಾದ 25 ವರ್ಷದ ಮಹಿಳೆ (ಪಿ-5284), ಆರ್.ಹೊಸಳ್ಳಿ ತಾಂಡಾದ 10 ವರ್ಷದ ಬಾಲಕಿ (ಪಿ-5285), ಅರಕೇರಾ ಬಸವನ ತಾಂಡಾದ 20 ವರ್ಷದ ಪುರುಷ (ಪಿ-5286) ಅದೇ ತಾಂಡಾದ 35 ವರ್ಷದ ಮಹಿಳೆ (ಪಿ-5287), 18 ವರ್ಷದ ಯುವತಿ (ಪಿ-5288) ಹಾಗೂ 40 ವರ್ಷದ ಪುರುಷ (ಪಿ-5289), 13 ವರ್ಷದ ಬಾಲಕಿ (ಪಿ-5290), ಗುರುಮಠಕಲ್‌ನ 25 ವರ್ಷದ ಪುರುಷ (ಪಿ-5291), ಅಲ್ಲಿಪುರವಾರಿ ತಾಂಡಾದ 25 ವರ್ಷದ ಮಹಿಳೆ (ಪಿ-5292), ಮಗದಂಪುರ ತಾಂಡಾದ 52 ವರ್ಷದ ಪುರುಷ (ಪಿ-5293), ಸೌದಾಗರ ತಾಂಡಾದ 20 ವರ್ಷದ ಪುರುಷ (ಪಿ-5294), ಅದೇ ತಾಂಡಾದ 18 ವರ್ಷದ ಯುವಕ (ಪಿ-5295), ಹತ್ತಿಕುಣಿ ಸಮಲಪುರದ 30 ವರ್ಷದ ಮಹಿಳೆ (ಪಿ-5296), ಚಿನ್ನಾಕರದ 32 ವರ್ಷದ ಪುರುಷ (ಪಿ-5297), ಬೆಳಗೇರಾದ 29 ವರ್ಷದ ಪುರುಷ (ಪಿ-5298) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 39 ಜನ ಸೋಂಕಿತರಲ್ಲಿ 18 ಮಹಿಳೆಯರು, 21 ಪುರುಷರಿದ್ದು, ಸೋಂಕಿತರೆಲ್ಲರೂ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಪ್ರಕರಣ ಸಂಖ್ಯೆ ಪಿ-5263, ಪಿ-5264ರ ವ್ಯಕ್ತಿಗಳು ಗುಜರಾತ್‌ನ ಅಹ್ಮದಾಬಾದ್‌ನಿಂದ ಮತ್ತು ಉಳಿದ 37 ಜನ ಮಹಾರಾಷ್ಟ್ರದ ಮುಂಬಯಿನಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿದ್ದಾರೆಂದು ಜಲ್ಲಾಡಳಿತ ಮಾಹಿತಿ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.