Yadagiri: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ನೊಂದ ಮಹಿಳೆಯರಿಂದ ಎಸ್‌ಪಿಗೆ ದೂರು
ಒಟ್ಟು 8 ಕಂಪನಿಯವರಿಂದ ಸಾಲ ಪಡೆದು ಕಷ್ಟಪಡುತ್ತಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖ
Team Udayavani, Jan 26, 2025, 9:26 PM IST
ಯಾದಗಿರಿ: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ತಾಳಲಾರದೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಪೃಥ್ವಿಕ್ ಶಂಕರ್‌ಗೆ ದೂರು ನೀಡಿದ್ದಾರೆ.
ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಯವರಿಂದ ಒಂದು-ಎರಡು ಕಂತು ಹಣ ಕಟ್ಟಲು ವಿಳಂಬವಾಗಿದ್ದಕ್ಕೆ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಂತು ಕಟ್ಟದ್ದರಿಂದ ದಿನನಿತ್ಯ ಮಾನಸಿಕ ಹಿಂಸೆ ನೀಡುತ್ತಿದ್ದು, ಸಮಯ ನೀಡಿ ಎಂದು ಕಾಲಾವಕಾಶ ಕೇಳಿದರೂ ತೊಂದರೆ ಕೊಡುತ್ತಿದ್ದಾರೆ ಎಂದು ಮಹಿಳೆಯರು ದೂರಿನಲ್ಲಿ ತಿಳಿಸಿದ್ದಾರೆ. ಗ್ರಾಮೀಣ ಕೂಟ ಮೈಕ್ರೋ ಫೈನಾನ್ಸ್, ಆಶೀರ್ವಾದ ಮೈಕ್ರೋ ಫೈನಾನ್ಸ್, ಗ್ರಾಮ ಶಕ್ತಿ ಮೈಕ್ರೋ ಫೈನಾನ್ಸ್, ಸಮಸ್ತ ಮೈಕ್ರೋ ಫೈನಾನ್ಸ್, ನವಚೈತನ್ಯ ಮೈಕ್ರೋ ಫೈನಾನ್ಸ್, ಆರ್.ಬಿ. ಎಲ್. ಮೈಕ್ರೋ ಫೈನಾನ್ಸ್ ಸೇರಿ ಒಟ್ಟು 8 ಕಂಪನಿಯವರಿಂದ ಸಾಲ ಪಡೆದು ನಾವು ಕಷ್ಟ ಅನುಭವಿಸುತ್ತಿದ್ದೇವೆ ಎಂದು ದೂರಿದ್ದಾರೆ.
ಪಡೆದಿರುವ ಸಾಲ ಮರುಪಾವತಿ ಮಾಡುತ್ತೇವೆ ಆದರೆ ನಮಗೆ ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳಿದರೂ ಅದಕ್ಕೆ ಯಾವುದೇ ಕಿಮ್ಮತ್ತು ನೀಡದೇ ನಮಗೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ನಮಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಶಬಿ, ರಾಜೇಶ್ವರಿ, ಅಕ್ಕಮ್ಮ, ರಸೂಲಬಿ, ಸೈದಾಬಿ, ನೂರಜಾ, ದೌಲಬಿ, ರಾಣುಬಾಯಿ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Problem Solve: ನೀಗಿದ ಸರ್ವರ್ ಸಮಸ್ಯೆ: ಸಹಜ ಸ್ಥಿತಿಗೆ ಆಸ್ತಿ ನೋಂದಣಿ, ಮಾರಾಟ ಪ್ರಕ್ರಿಯೆ
Online ಗೇಮ್ ನಲ್ಲಿ 20 ಲಕ್ಷ ರೂ. ಕಳೆದುಕೊಂಡು ನೇಣಿಗೆ ಶರಣಾದ ಯುವಕ
ಕಾಂಗ್ರೆಸ್‌ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Dandeli: ಮೀಟರ್ ಬಡ್ಡಿ ದಂಧೆ ವಿರುದ್ಧ ಕಾರ್ಯಾಚರಣೆ: ಇಬ್ಬರ ಬಂಧನ
Belagavi: ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿ ಜೀವ ಕಳೆದುಕೊಂಡ ಯುವ ನೇಕಾರ