ಮೈಲಾಪುರ ಮಲ್ಲಯ್ಯಜಾತ್ರೆ ವೈಭವ
Team Udayavani, Jan 15, 2020, 4:25 PM IST
ಯಾದಗಿರಿ: ಕಲ್ಯಾಣ ಕರ್ನಾಟಕದ ಪ್ರಸಿದ್ಧ ಭಂಡಾರದ ಒಡೆಯ ಖ್ಯಾತಿಯ ಮೈಲಾಪುರ ಮಲ್ಲಯ್ಯ ಜಾತ್ರೆ ಮಂಗಳವಾರ ವೈಭವದಿಂದ ನಡೆಯಿತು. ಕಿಕ್ಕಿರಿದು ನೆರೆದಿದ್ದ ಲಕ್ಷಾಂತರ ಭಕ್ತರ ಮಧ್ಯೆ ಏಳು ಕೋಟಿ‰ ಏಳು ಕೋಟಿಗೋ ಎನ್ನುವ ಘೋಷಣೆಗಳು ಜನರನ್ನು ಭಕ್ತಿಯಲ್ಲಿ ಮಿಂದೇಳುವಂತೆ ಮಾಡಿದವು. ಬೆಳಗ್ಗೆ 11:00ರ ಸುಮಾರಿಗೆ ದೇವಸ್ಥಾದನದಿಂದ ಹೊನ್ನಕೆರೆ ಗಂಗಾಸ್ನಾನಕ್ಕೆ ಮೈಲಾರಲಿಂಗೇಶ್ವರ-ಗಂಗೆ ಮಾಳಮ್ಮರ ಮೂರ್ತಿ ಪಲ್ಲಕಿಯನ್ನು ಹೊತ್ತುಯ್ಯೊವಾಗ ಭಂಡಾರ, ಉತ್ತತ್ತಿ ಜಮೀನಿನಲ್ಲಿ ಬೆಳೆದ ಬೆಳೆ, ಕುರಿ ಉಣ್ಣೆ, ಚಿಲ್ಲರೆ ನಾಣ್ಯ ಎಸೆದು ಭಕ್ತರು ಸಂಭ್ರಮಪಟ್ಟರು.
ಜಾತ್ರೆಯಲ್ಲಿ ಭದ್ರತೆ ದೃಷ್ಟಿಯಿಂದ 36 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಕುರಿಮರಿ ಎಸೆಯುವುದನ್ನು ನಿಷೇಧಿಸಿದ್ದರೂ ಕೂಡ ಕೆಲ ಭಕ್ತರು ಚೆಕ್‌ಪೋಸ್ಟ್ ಹಾಗೂ ಪೊಲೀಸರ ಕಣ್ಣುತಪ್ಪಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಜಾತ್ರೆಗೆ ಬೆಳಗ್ಗೆಯಿಂದ ಅಸಂಖ್ಯಾತರ ಭಕ್ತರು ಹೊನ್ನಕೆರೆಯಲ್ಲಿ ಪುಣ್ಯ ಸ್ನಾನಮಾಡಿ ದೇವರ ದರ್ಶನ ಪಡೆದರು. ದೂರದಿಂದ ಬಂದ ಭಕ್ತರು ತಾವು ತಂಗಿದ್ದ ಬಯಲಲ್ಲಿಯೇ ಒಲೆ ಹೂಡಿ ನೈವೇದ್ಯ ತಯಾರಿಸಿ ಶ್ರದ್ಧಾ, ಭಕ್ತಿಯಿಂದ ದೇವರ ಹೆಸರಲ್ಲಿ ಅರ್ಪಿಸಿ ಪೂಜಾ ಕಾರ್ಯ ನೆರವೇರಿಸುತ್ತಿರುವುದು ಕಂಡು ಬಂತು.
ರಾಜ್ಯ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಿಂದ 3 ಲಕ್ಷಕ್ಕೂ ಮೀರಿ ಭಕ್ತರು ಆಗಮಿಸಿ ಮೈಲಾರಲಿಂಗೇಶ್ವರ ದರ್ಶನ ಪಡೆದು ಪುನೀತರಾದರು. ಇದಾದ ಬಳಿಕ ದೇವಸ್ಥಾನದ ಆವರಣದಲ್ಲಿ ಸರಪಳಿ ಹರಿಯುವುದನ್ನು ಅಸಂಖ್ಯಾತರ ಭಕ್ತರು ಕಣ್ತುಂಬಿಸಿಕೊಂಡರು. ಬಳಿಕ ದೇವರ ಮೂರ್ತಿಗಳನ್ನು ಪುನಃ ಪ್ರತಿಷ್ಠಾಪಿಸಲಾಯಿತು. ನಂತರ ತುಪ್ಪದ ಗುಡ್ಡದ ಜ್ಯೋತಿ ಬೆಳಗಿಸಲು ಭಕ್ತರು ತಂದಿದ್ದ ಎಣ್ಣೆ, ಹೂವು ಅರ್ಪಿಸಿದರು. ಜಾತ್ರೆ ಭದ್ರತೆಗಾಗಿ ಏಳು ಮಂದಿ ಪೊಲೀಸ್ ಇನ್ಸ್‌ಪೆಕ್ಟರ್, 12 ಪಿಎಸ್‌ಐ, 47 ಎಎಸ್‌ಐ, 250 ಮುಖ್ಯಪೇದೆ, 300 ಹೋಮ್‌ಗಾರ್ಡ್ ಹಾಗೂ 2 ಕೆಎಸ್‌ಆರ್‌ಪಿ, 3 ಡಿಎಆರ್ ತುಕಡಿಯಿಂದ ಬಂದೋಬಸ್ತ್ ಒದಗಿಸಲಾಗಿತ್ತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ ಸೋನಾವಣೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ
Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.