ನೀರಿನ ತೆರಿಗೆ ವಸೂಲಿಯಲ್ಲಿ ಹಿಂದುಳಿದ ನಗರಸಭೆ
Team Udayavani, Jan 30, 2020, 1:21 PM IST
ಯಾದಗಿರಿ: ನಗರಸಭೆ ನೀರಿನ ತೆರಿಗೆ ವಸೂಲಿಯಲ್ಲಿ ಹಿಂದೆ ಬಿದ್ದಿದ್ದು, ಸಾರ್ವಜನಿಕರಿಂದ ಬರಬೇಕಾದ ತೆರಿಗೆ ಬಾಕಿಯಿಂದ ನಗರಸಭೆ ಆದಾಯಕ್ಕೆ ಕತ್ತರಿ ಬಿದ್ದಿದೆ. ನಗರದಲ್ಲಿ ನೀರಿನ ಸಮರ್ಪಕ ಸರಬರಾಜು ಕುರಿತು ಸಾರ್ವಜನಿಕರು ಬೇಡಿಕೆ ಇಡುವುದು ಸಾಮಾನ್ಯ. ಆದರೆ ನೀರಿನ ಕರ ಕಟ್ಟುವುದಕ್ಕೆ ಮಾತ್ರ ಜನರು ನಿರಾಸಕ್ತಿ ವಹಿಸಿರುವುದು ಕಂಡು ಬಂದಿದೆ.
ನಗರಸಭೆಯಿಂದ ಒಟ್ಟು ನಗರದಲ್ಲಿಆರು ಸಾವಿರಕ್ಕೂ ಹೆಚ್ಚು ನಳದ ಸಂಪರ್ಕ ನೀಡಲಾಗಿದ್ದು, ತಿಂಗಳಿಗೆ 120 ರೂಪಾಯಿ ತೆರಿಗೆ ನಿಗದಿಗೊಳಿಸಲಾಗಿದೆ. ನಗರದಲ್ಲಿ ಸುಮಾರು 3 ವರ್ಷಕ್ಕೂ ಹಿಂದಿನಿಂದಲೇ 24×7 ನೀರಿನ ಸಂಪರ್ಕ ನೀಡುವ ಕಾರ್ಯ ಆರಂಭವಾಗಿದ್ದು, ಈವರೆಗೆ 7 ಸಾವಿರದಷ್ಟು ಸಂಕರ್ಪಗಳನ್ನು ನೀಡಲಾಗಿದ್ದು, ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.
ನಗರಸಭೆಯಿಂದ ನೀಡಿರುವ ನೀರಿನ ಸಂಪರ್ಕ ಕಡಿತಗೊಳಿಸಿ ಹಂತ ಹಂತವಾಗಿ 24×7 ನೀರಿನ ಸಂಪರ್ಕ ನೀಡಲಾಗುತ್ತಿದೆ. ಕೆಲವು ಬಡವಣೆಗಳಲ್ಲಿ ನೀರು ಸಮರ್ಪಕ ಸರಬರಾಜು ಆಗದಿರುವುದು ಜನರು ತೆರಿಗೆ ಕಟ್ಟಲು ಮುಂದಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿಬಂದಿದೆ. ಸಿಬ್ಬಂದಿ ಹೇಳುವ ಪ್ರಕಾರ 2012ರಿಂದಲೇ ನೀರಿನ ತೆರಿಗೆ 120 ರೂಪಾಯಿಗೆ ಏರಿಸಲಾಗಿದೆ.
ಆದರೇ 24ಗಿ7 ಸಂಪರ್ಕ ನೀಡುವ ಕಾರ್ಯ ಆರಂಭದಲ್ಲಿರುವುದರಿಂದ, ಆ ಸಂಪರ್ಕವನ್ನು ಪಡೆಯುತ್ತಿರುವ ನಿವಾಸಿಗಳು ಹಿಂದಿನ ಬಾಕಿ ಉಳಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 2019-20ನೇ ಸಾಲಿನ ನೀರಿನ ತೆರಿಗೆ 79.20 ಲಕ್ಷ ವಸೂಲಿ ಗುರಿ ಹೊಂದಿದ್ದ ನಗರಸಭೆ 2019ರ ಡಿಸೆಂಬರ್ ಅಂತ್ಯಕ್ಕೆ ಕೇವಲ 7.56 ಲಕ್ಷ ರೂಪಾಯಿ ಮಾತ್ರ ವಸೂಲಿಯಾಗಿರುವುದು ಬೆಳಕಿಗೆ
ಬಂದಿದೆ. ಅಲ್ಲದೇ 2018-19ರಲ್ಲಿಯೂ ಕೇವಲ 4.83 ಲಕ್ಷ ರೂಪಾಯಿ ವಸೂಲಿ ಮಾಡಲಾಗಿದೆ. ಗುರಿಯಲ್ಲಿ ಕೇವಲ ಶೇ. 10ರಷ್ಟು ವಸೂಲಿಯಾಗಿರುವುದು ಈ ಬಗ್ಗೆ ನಗರಸಭೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕಿದೆ.
ನೀರಿನ ತೆರಿಗೆ ಬಾಕಿ ಹೆಚ್ಚಿನ ಪ್ರಮಾಣದಲ್ಲಿ ಉಳಿದಿದ್ದು, ಇದಕ್ಕೆ ವಿಶೇಷ ತಂಡ ರಚಿಸಿ ಮನೆ ಮನೆಗೆ ಸಿಬ್ಬಂದಿ ಕಳಿಸಿ ವಸೂಲಿ ಮಾಡಲು ಕ್ರಮ ವಹಿಸಲಾಗುವುದು. ಮಾರ್ಚ್ ಅಂತ್ಯದ ವೇಳೆಗೆ ಬಾಕಿ ವಸೂಲಿ ಮಾಡಲಾಗುವುದು.
ರಮೇಶ ಸುಣಗಾರ, ಪೌರಾಯುಕ್ತ,
ನಗರಸಭೆ
ಅನೀಲ ಬಸೂದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.