Yadgir: ಮಳೆಗೆ ಗೋಡೆ ಕುಸಿದು ವೃದ್ಧೆ ಸಾವು
Team Udayavani, Sep 1, 2024, 9:31 PM IST
ಯಾದಗಿರಿ: ಜಿಲ್ಲೆಯಲ್ಲಿ ರವಿವಾರ(ಸೆ1)ಸುರಿದ ಮಳೆಗೆ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹುರಸಗುಂಡಗಿ ಗ್ರಾಮದ ಸಕೀನಾಬಿ ನದಾಫ್ (70) ಮೃತ ದುರ್ದೈವಿ, ಧಾರಾಕಾರ ಸುರಿದ ಮಳೆಗೆ ಮನೆ ಗೊಡೆ ಕುಸಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ವೃದ್ದೆ ಸಕೀನಾಬಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ವೃದ್ದೆ ಸಾವನ್ನಪ್ಪಿದ್ದಾರೆ.
ಭಾನುವಾರ ಗ್ರಾಮದ ಪರಿಚಿತ ಮಲ್ಲಿಕಾರ್ಜುನ ಅವರ ಮನೆ ಮುಂಭಾಗದ ಕಟ್ಟೆ ಮೇಲೆ ಮಹಿಳೆಯರ ಜತೆ ಮಾತನಾಡುತ್ತಾ ಕುಳಿತಿದ್ದ ಸಕೀನಾಬಿ ಮೈ ಮೇಲೆ ಮಲ್ಲಿಕಾರ್ಜುನ ಅವರ ಮನೆ ಗೊಡೆ ಕುಸಿದು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಇನ್ನಿಬ್ಬರು ಮಹಿಳೆಯರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surapura: ಗೆಳೆಯರು ಸಾಲ ಕಟ್ಟದ್ದಕ್ಕೆ ಪಿಗ್ಮಿ ಏಜೆಂಟ್ ಆತ್ಮಹ*ತ್ಯೆ
MUDA Case: ಸಿಎಂ ಸಿದ್ದರಾಮಯ್ಯನವರು ಪ್ರಜ್ಞಾಪೂರ್ವಕ ವ್ಯಕ್ತಿ: ಡಾ.ಜಿ.ಪರಮೇಶ್ವರ
Yadagiri: ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ನೊಂದ ಮಹಿಳೆಯರಿಂದ ಎಸ್‌ಪಿಗೆ ದೂರು
Yadgiri: ನಿಲ್ಲದ ಫೈನಾನ್ಸ್ ಕಿರುಕುಳ: ಮಗನ ಅನಾರೋಗ್ಯದ ನಡುವೆ ಮನೆಗೆ ಬೀಗ ಜಡಿದ ಅಧಿಕಾರಿಗಳು
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ