ಬಣ್ಣದಲ್ಲಿ ಮಿಂದೆದ್ದ ಯಾದಗಿರಿ ಜನತೆ


Team Udayavani, Mar 3, 2018, 4:36 PM IST

yad-1.jpg

ಯಾದಗಿರಿ: ಹೋಳಿ ಹಬ್ಬದ ನಿಮಿತ್ತ ನಗರದ ಜನತೆ ಸಡಗರದಿಂದ ಶುಕ್ರವಾರ ವಿವಿಧ ಬಗೆಯ ಬಣ್ಣ ಎರೆಚುವ ಮೂಲಕ ರಂಗಿನಾಟದಲ್ಲಿ ತೊಡಗಿ ಮಿಂದೆದ್ದರು. ನಗರದ ರೈಲ್ವೆ ಸ್ಟೇಷನ್‌ ರಸ್ತೆ, ಬಸವೇಶ್ವರ ನಗರ, ಗಾಂಧಿ ವೃತ್ತ, ಮೈಲಾಪುರ ಅಗಸಿ, ಸುಭಾಷ ವೃತ್ತ, ಶಾಸ್ತ್ರೀ ವೃತ್ತ, ಬಸ್‌ ನಿಲ್ದಾಣ, ಬಸವೇಶ್ವರ ಗಂಜ್‌, ಲಕ್ಷ್ಮೀ ನಗರ, ಶಹಾಪುರಪೇಠ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಮಹಿಳೆಯರು, ಮಕ್ಕಳು, ಯುವಕರು ಬಂಧುಗಳಿಗೆ ಪರಸ್ಪರ ಬಣ್ಣ ಎರಚುವ ಮೂಲಕ ಹೋಳಿ ಹಬ್ಬ ಆಚರಿಸಿ ಸಂಭ್ರಮಿಸಿದರು.

ಮಕ್ಕಳು, ಯುವಕರು, ಮಹಿಳೆಯರು ತಮ್ಮ ಸ್ನೇಹಿತರ, ಸಂಬಂಧಿಕರ ಮನೆಗಳಿಗೆ ತೆರಳಿ ಬಣ್ಣ ಎರಚುತ್ತಿರುವುದು ಸಾಮಾನ್ಯವಾಗಿ ಕಂಡು ಬಂದಿತು. ಮಧ್ಯಾಹ್ನ ಮೈಲಾಪುರ ಅಗಸಿಯಿಂದ ನಗರದ ಗಾಂಧಿ ವೃತ್ತ ಹಾಗೂ ಸ್ಟೇಷನ್‌ ಬಜಾರ್‌ನಲ್ಲಿ ಎರಡು ಪ್ರತ್ಯೇಕ ಬಂಡಿಗಳಲ್ಲಿ ಬಣ್ಣ ತುಂಬಿಕೊಂಡು ಎಲ್ಲರ ಮೈಮೇಲೆ ಬಣ್ಣದ ನೀರು ಎರಚುವ ಮೂಲಕ ಹೋಳಿ ಆಚರಿಸಲಾಯಿತು.

ಯುವಕರು ಹೋಳಿ ಹಬ್ಬಕ್ಕೆ ಸಂಬಂಧಿಸಿದ ಹಾಡು ಹಾಡುತ್ತಾ, ಕುಣಿಯುತ್ತಾ ನಗರ ತುಂಬೆಲ್ಲಾ ಬೈಕ್‌ ಮೇಲೆ ಸಂಚರಿಸುವ ಮೂಲಕ ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹೋಳಿ ಹಬ್ಬ ನಿಮಿತ್ತ ನಗರದಲ್ಲಿ ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್ ಮಾಡಿತ್ತು. ಜಿಲ್ಲಾಡಳಿತ ಮದ್ಯ ನಿಷೇಧ ಹೇರಿದ್ದರಿಂದ ಯಾವುದೇ ಅಹಿತಕರ ಘಟನೆ ಜರುಗದೆ ಹೋಳಿ ಹಬ್ಬ ಶಾಂತಿಯುತವಾಗಿ ನಡೆಯಿತು.

ನಗರದಲ್ಲೆಡೆ ಹೋಳಿ ಸಂಭ್ರಮ
ಶಹಾಪುರ: ಪಟ್ಟಣದ ಗಣೇಶ ನಗರದಲ್ಲಿ ಶುಕ್ರವಾರ ಯುವತಿಯರು, ಮಹಿಳೆಯರು ಬಣ್ಣದಾಟದಲ್ಲಿ ಮಿಂದೇಳುವ ಮೂಲಕ ಹೋಳಿ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ನಗರದ ಚರಬಸವೇಶ್ವರ ವಸತಿ ನಿಲಯದ ವಿದ್ಯಾರ್ಥಿನಿಯರು ಸಾಮೂಹಿಕವಾಗಿ ರಂಗಿನಾಟವಾಡಿದರು. ಪರಸ್ಪರ ಬಣ್ಣ ಎರಚಿ ಕುಣಿದು ಸಂಭ್ರಮಿಸಿದರು. ಅದರಂತೆ ವಿವಿಧ ಬಡಾವಣೆಗಳಲ್ಲಿ, ಪ್ರಮುಖ ರಸ್ತೆ ಮೇಲೆ
ಮಕ್ಕಳು, ಯುವ ಸಮೂಹಗಳು ಪ್ರಮುಖ ರಸ್ತೆಗಳಲ್ಲಿ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸುತ್ತಿರುವುದು ಕಂಡು ಬಂದಿತು.

ಕಾಮ ದಹಿಸುವ ಮುಂಚೆ ಬಡಾವಣೆ ಮಹಿಳೆಯರು ಕಾಮ ದೇವನಿಗೆ ಹೋಳಿಗೆ, ಕಡಬು ಸೇರಿದಂತೆ ಖಾದ್ಯ ಪದಾರ್ಥಗಳ ನೈವೇದ್ಯವನ್ನು ಸಾಂಪ್ರದಾಯದಂತೆ ಅರ್ಪಿಸಿದರು.

ಪಟ್ಟಣದಾದ್ಯಂತ ಬಣ್ಣದ ಓಕುಳಿ ಸಡಗರ ಮನೆ ಮಾಡಿತ್ತು. ಹೋಳಿ ಹಬ್ಬದಂಗವಾಗಿ ವ್ಯಾಪಾರ ವ್ಯವಹಾರಕ್ಕೆ ಅಲ್ಪ ಬ್ರೇಕ್‌ ಹಾಕಲಾಗಿತ್ತು. ಬೆಳಗ್ಗೆಯಿಂದಲೇ ಮಕ್ಕಳು, ಹಿರಿಯರು ಮಹಿಳೆಯರು ಸೇರಿದಂತೆ ಯುವತಿಯರು ಪರಸ್ಪರ ಬಣ್ಣ ಹಚ್ಚುವ ಮೂಲಕ ಸಂತಸ ಹಂಚಿಕೊಂಡರು. 

ಹೋಳಿ ಬಣ್ಣ ಬದುಕಿಗೆ ಮೆರಗು
ಸೈದಾಪುರ: ಹೋಳಿ ಹಬ್ಬ ಬಣ್ಣದ ಬದುಕಿಗೆ ಹೊಸ ಮೆರಗು ನೀಡುತ್ತದೆ. ಇದೊಂದು ಹಿಂದುಗಳ ಪವಿತ್ರ ಧಾರ್ಮಿಕ ಹಿನ್ನೆಲೆಯುಳ್ಳ ಆಚರಣೆಯಾಗಿದೆ ಎಂದು ಬಳಿಚಕ್ರ ಜಿಪಂ ಸದಸ್ಯ ಭೀಮರಡ್ಡಿಗೌಡ ಹೊಸಗೌಡ ಕೂಡಲೂರ ಹೇಳಿದರು. ಅವರು ಇಲ್ಲಿಗೆ ಸಮೀಪದ ಸೈದಾಪುರ ಹೊರವಲಯದ ತಮ್ಮ ಜಮೀನಿನಲ್ಲಿ ಅಭಿಮಾನಿಗಳಿಂದ ಬಣ್ಣ ಎರಚಿಕೊಂಡು ನಂತರ ಹಿತೈಷಿಗಳೊಂದಿಗೆ ಹೋಳಿ
ಆಚರಣೆ ಮಾಡಿ ಸಂಭ್ರಮಿಸಿದರು. ಗ್ರಾಮೀಣ ಭಾಗದಲ್ಲಿ ಈ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಇದೊಂದು ಭಾವೈಕ್ಯತೆಯ
ಉತ್ತಮ ಸಾಮಾಜಿಕ ವಾತವರಣವನ್ನುಂಟು ಮಾಡುವ ಆಚರಣೆಯಾಗಬೇಕು ಎಂದರು. ಈ ಸಂದರ್ಭದಲ್ಲಿ ಸದಾಶಿವರಡ್ಡಿಗೌಡ ಪಾಟೀಲ ಕಣೇಕಲ, ಗ್ರಾಪಂ ಸದಸ್ಯ ಕೆ.ಪಿ. ಗೋವರ್ಧನ, ಬಸರಡ್ಡಿಗೌಡ ಹೆಗ್ಗಣಗೇರಾ, ಚಂದ್ರಯ್ಯಗೌಡ ಶೆಟ್ಟಳ್ಳಿ, ಸತೀಶ ಉಡುಪಿ ಇದ್ದರು.

ಹಲಗಿ ಬಾರಿಸಿ ಸಂತಸ ಪಟ್ಟ ಯುವ ಪಡೆ 
ನಾರಾಯಣಪುರ: ಪಟ್ಟಣದಲ್ಲಿ ಶುಕ್ರವಾರ ಹಿರಿಯರು, ಯುವಕರು, ಚಿಣ್ಣರೆಲ್ಲರು ಸೇರಿ ಹೋಳಿ ಹಬ್ಬವನ್ನು ರಂಗು ರಂಗಿನ ಬಣ್ಣದಲ್ಲಿ
ಮೂಳುಗಿ ಸಂಭ್ರಮದಿಂದ ಆಚರಿಸಿದರು. ಯುವಕರ ದಂಡು ಹಲಗಿ ಬಾರಿಸುವ ಮೂಲಕ ವಿವಿಧ ರಂಗಿನ ಬಣ್ಣಗಳನ್ನು ಬಂಧು
ಸ್ನೇಹಿತರಿಗೆ ಪರಸ್ಪರ ಎರಚಿ ಬಣ್ಣದಾಟದಲ್ಲಿ ತೊಡಗಿದ್ದರು. ಗ್ರಾಪಂ ಮಾಜಿ ಅಧ್ಯಕ್ಷ ಶಿವಪ್ಪ ಬಿರಾದಾರ, ರಮೇಶ ಕೋಳುರ, ಯಂಕಪ್ಪ
ರೊಡಲಬಂಡಾ, ಮಂಜು ಹಾದಿಮನಿ, ಚರಣ, ಮುತ್ತು ಶೃಂಗೇರಿ, ಪುಂಡಲಿಕ, ಯಂಕೂಬ, ಸದ್ದಾಂ, ವೀರೇಶ, ಜಗದೀಶ, ಗುರು ಸೇರಿದಂತೆ ಯುವಕರು ಇದ್ದರು. ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳೀಯ ಪೊಲೀಸ್‌ ಠಾಣೆ ಪಿಎಸೈ ಮಾನಪ್ಪ ಯಕ್ಷಂತಿ, ಎಎಸೈ ಕೃಷ್ಣಮೂರ್ತಿ ನೇತೃತ್ವದ ಪೊಲೀಸ್‌ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು

ಚಿಣ್ಣರ ತಂಡ ಸಂಭ್ರಮ
ಹುಣಸಗಿ: ವಜ್ಜಲ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಸಾರ್ವಜನಿಕರು ಬಣ್ಣದ ಓಕುಳಿಯಾಡಿ ಸಂಭ್ರಮಿಸಿದರು. ಗ್ರಾಮದಲ್ಲಿ ಯುವಕರ ದಂಡು ಹಲಗೆ ಮೆರವಣೆಗೆಯೊಂದಿಗೆ ಮನೆ ಮನೆಗೆ ತೆರಳಿ ಬಣ್ಣದಾಟದಲ್ಲಿ ತೊಡಗಿರುವುದು ಕಂಡು ಬಂದಿತು. ಗ್ರಾಮದ ಪ್ರತಿ ಬಡಾವಣೆಯಲ್ಲಿ ಮಹಿಳೆಯರು, ಮಕ್ಕಳು, ಯುವಕರು ಸೇರಿ ವಿವಿಧ ವರ್ಣದ ಬಣ್ಣವನ್ನು ಮುಖಕ್ಕೆ ಸವರುತ್ತಾ ಮೈತುಂಬ ಬಣ್ಣ ಚಿಮ್ಮುತ್ತಾ ಸಂತಸಗೊಂಡರು. ಚಿಕ್ಕ ಮಕ್ಕಳು ಕೂಡ ಬಣ್ಣದಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು ಹರ್ಷದಿಂದ ಕುಣಿದಾಡಿದರು.

ಸಡಗರದ ಹೋಳಿ ಆಚರಣೆ
ಸುರಪುರ: ಕೈಯಲ್ಲಿ ಬಣ್ಣದ ಬಾಟಲಿ, ಹೆಗಲಿಗೆ ಹಲಗೆ ಹಾಕಿ ಯುವಕರು ಹಾಡು ಹಾಡುವ ಮೂಲಕ ಹೋಳಿ ಹಬ್ಬ ಆಚರಣೆ ಮಾಡಿದ ಸಂಭ್ರಮದ ಕ್ಷಣ ನಗರದಲ್ಲಿ ಶುಕ್ರವಾರ ಕಂಡು ಬಂತು. ಹೌದು, ನಗರದಲ್ಲಿ ಹೋಳಿ ಹಬ್ಬ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಭಾತೃತ್ವ
ಸಾರುವ ಹೋಳಿ ಹಬ್ಬವನ್ನು ನಗರದ ಜನತೆ ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ನಗರದ ಗಾಂಧಿ ವೃತ್ತ, ಪಟೇಲ ವೃತ್ತ, ವೇಣುಗೋಪಾಲಸ್ವಾಮಿ ದೇವವಸ್ಥಾನದ ಬಳಿ ಯುವಕರು ಹಲಗೆ ಬಾರಿಸುವ ಮೂಲಕ ಬಣ್ಣದ ಆಟದಲ್ಲಿ ತೊಡಗಿದ್ದರು.
ಕೆಲವರು ಮನೆ ಮನೆಗೆ ಹೋಗಿ ತಮ್ಮ ಗೆಳೆಯರನ್ನು ಹಿಡಿದು ಬಣ್ಣ ಎರಚಿ ಸಂಭ್ರಮಿಸಿದರು. ಕೆಲವರು ಅಣುಕು ಶವದ ಯಾತ್ರೆ ನಡೆಸಿ ಮೋಜು ಮಾಡಿದರು. ಮಹಿಳೆಯರು, ಯುವತಿಯರು, ಬಣ್ಣದ ಆಟದಲ್ಲಿ ತೊಡಗಿದ್ದರು. 

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

YDR-Assult

Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು

Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ

Yadgiri: ಸಿದ್ದರಾಮಯ್ಯನವರಿಗೆ ರೈತರ ಶಾಪ ತಟ್ಟಲಿದೆ: ವಿಜಯೇಂದ್ರ

Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ

Yadagiri: ಸಂಸದ, ಸಚಿವ, ಶಾಸಕರಿದ್ದರೂ ಅಧಿಕಾರಿಗಳು ಗೈರು; ಸಿಟ್ಟಾದ ಸಚಿವ ದರ್ಶನಾಪುರ

7-shahapur

Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.