Yadgir; ಭಾರೀ ಬಿರುಗಾಳಿ ಸಹಿತ ಮಳೆ: ಭೀತರಾದ ಜನರು
Team Udayavani, May 26, 2024, 8:28 PM IST
ಯಾದಗಿರಿ: ಜಿಲ್ಲಾದ್ಯಂತ ಸುರಿದ ಬಿರುಗಾಳೆ ಸಮೇತ ಮಳೆಗೆ ಧರಗೆ ಮರಗಳು ಉರುಳಿದ ಘಟನೆ ನಡೆದಿದೆ. ಜಿಲ್ಲೆಯ ಸೈದಾಪುರ, ನಾಯ್ಕಲ್, ಖಾನಾಪುರ, ಗುರುಸುಣಗಿ ಗ್ರಾಮಗಳಲ್ಲಿ ಜೋರು ಗಾಳಿ ಸಮೇತ ಮಳೆಯಾಗಿದೆ.ಜಿಲ್ಲೆಯ ಗುರಸುಣಗಿ ಗ್ರಾಮ ಬಳಿ ಗಾಳೆ ಮಳೆಗೆ ಬೃಹತ್ ಮರ ಉರುಳಿ ರಸ್ತ ಬಿದ್ದ ಪರಿಣಾಮ ಯಾದಗಿರಿ- ಶಹಾಪುರ ಮುಖ್ಯರಸ್ತ ಮೂರು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತು.
ಶಹಾಪುರ ಮುಖ್ಯ ರಸ್ತೆಯ ನಾಯ್ಕಲ್ ಕ್ರಾಸ್ ನಿಂದ ಗುರಸುಣಗಿ ಗ್ರಾಮದವರೆಗೆ ವಾಹನಗಳು ಸಂಚಾರಕ್ಕೆ ಪರದಾಡುವ ಸ್ಥಿತಿ ತಲುಪಿತು. ಮರ ಉರುಳಿ ಎರಡು ತಾಸು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಯವರು ಬರದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.
ಇಬ್ರಾಹಿಮಪುರ ತಾಂಡಾದಲ್ಲಿ ಮರವೊಂದು ಧರಗೆ ಉರುಳಿದ ಪರಿಣಾಮ ವಿದ್ಯುತ್ ಕಂಬ ಹಾಗೂ ವೈಯರ್ ರಸ್ತೆಯ ಮೇಲೆ ಬಿದ್ದು ತಾಂಡಾದ ಜನರಿಗೆ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿತು. ಇಬ್ರಾಹಿಮಪುರ, ಗುರುಸುಣಗಿ, ನಾಯ್ಕಲ್, ಖಾನಾಪುರ, ಮನಗನಹಾಳ, ಗುಂಡಳ್ಳಿ, ಚಟ್ನಳ್ಳಿ, ತಂಗಡಗಿ ಸೇರದತೆ ಅನೇಕ ತಾಂಡಾಗಳಲ್ಲಿ ದಾರಿಯುದ್ದಕ್ಕೂ ಮರಗಳು ಬಿದ್ದವು, ಹೊಲ-ಗದ್ದೆಗಳು ಜಲಾವೃತಗೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.