![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 13, 2024, 8:19 PM IST
ಯಾದಗಿರಿ:ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಅಕಾಲಿನ ಮಳೆಗೆ ಕುರಿಗಾಹಿ ಮೃತ ಪಟ್ಟಿದ್ದು, 17 ಕುರಿಗಳು ಬಲಿಯಾಗಿವೆ.
ಶಹಾಪುರ ತಾಲೂಕಿನ ವಿಭೂತಿಹಳ್ಳಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಕುರಿಗಾಯಿ ಸೇರಿದಂತೆ 7 ಕುರಿಗಳು ಮೃತಪಟ್ಟಿವೆ. ಸಿಡಿಲಿಗೆ ಬಲಿಯಾದ ವ್ಯಕ್ತಿಯನ್ನು ಗೋವಿಂದಪ್ಪ (26)ಎಂದು ಗುರುತಿಸಲಾಗಿದೆ. ಕುರಿಹಟ್ಟಿಯಲ್ಲಿ ಒಟ್ಟು 200 ಕುರಿಗಳು ಇದ್ದವು ಎಂದು ಹೇಳಲಾಗಿದ್ದು ಈ ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಡಗೇರಾ ತಾಲೂಕಿನ ಐಕೂರ ಗ್ರಾಮಾಂತರದಲ್ಲಿ ಸೊಮವಾರ ಬೆಳಗಿನ ಜಾವ ಸಿಡಿಲು ಬಡಿದು ಸಾಬಣ್ಣ ಮುಂಡರಗಿ ಇವರಿಗೆ ಸೇರಿದ 10 ಕುರಿಗಳು ಸಾವನಪ್ಪಿವೆ. ತಮ್ಮ ಜಮೀನಿನಲ್ಲಿರುವ ಕುರಿಹಟ್ಟಿಯಲ್ಲಿ ಕುರಿಗಳು ಸಾವನಪ್ಪಿವೆ. ಈ ಕುರಿತು ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.