ಸಂತ್ರಸ್ತರಿಗೆ ಅಡುಗೆ ಬಡಿಸಿ ಧನ್ಯತೆ
ಸೀರೆ, ಧೋತಿ, ಟನ್ ಅಕ್ಕಿ ವಿತರಣೆ•ಆಹಾರ ಸಾಗಾಟಕ್ಕೆ ಉಚಿತ ವಾಹನ ಸೇವೆ
Team Udayavani, Aug 24, 2019, 10:06 AM IST
ಯಡ್ರಾಮಿ: ಜಮಖಂಡಿ ತಾಲೂಕಿನಲ್ಲಿ ನೆರೆ ಹಾವಳಿಗೆ ತುತ್ತಾದ ಸೂರ್ಪಾಲಿ ಗಾಮದ ಹೊರವಲಯದಲ್ಲಿನ ಸಂತ್ರಸ್ತರಿಗಾಗಿ ತಾಲೂಕಿನ ಯುವಕರು ಅಡುಗೆ ತಯಾರಿಸಿ, ಬಡಿಸಿದರು.
ಯಡ್ರಾಮಿ: ನೆರೆ ಹಾವಳಿಗೆ ತತ್ತರಿಸಿ ಕಂಗಾಲಾಗಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸೂರ್ಪಾಲಿ ಗ್ರಾಮದ ನೆರೆ ಸಂತ್ರಸ್ತರಿಗೆ ಅಡುಗೆ ಮಾಡಿ, ಊಟ ಬಡಿಸಿ, ಧನ್ಯತಾಭಾವ ವ್ಯಕ್ತಪಡಿಸಿದ್ದು ತಾಲೂಕಿನ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಯುವಕರು.
ಪಟ್ಟಣದ ಮುರಘೇಂದ್ರ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗಾಗಿ ಯಡ್ರಾಮಿ ಸೇರಿದಂತೆ ಮಳ್ಳಿ, ಹಂಹರಗಾ (ಕೆ), ಸುಂಬಡ, ಮಾಗಣಗೇರಿ, ಹರನಾಳ, ಕಾಚಾಪುರ, ಕಡಕೋಳ ಮುಂತಾದ ಗ್ರಾಮಗಳಿಂದ ಏಳೆಂಟು ದಿನಗಳವರೆಗೆ ದವಸ-ಧಾನ್ಯ, ಬಟ್ಟೆ, ಹಾಸಿಗೆ- ಹೊದಿಕೆ, ಆರು ಲಕ್ಷ ರೂ. ಗಿಂತ ಅಧಿಕ ಮೌಲ್ಯದ ದಿನಬಳಕೆ ವಸ್ತುಗಳನ್ನು ಸಂಗ್ರಹಿಸಿ ನೇರವಾಗಿ ಸೂರ್ಪಾಲಿ ಗ್ರಾಮಕ್ಕೆ ತಲುಪಿಸಿದರು.
ಇವೆಲ್ಲ ಸಾಮಗ್ರಿಗಳನ್ನು ಸಂಗ್ರಹಿಸಲು ಬಸವರಾಜ ಪಾಟೀಲ ಎನ್ನುವವರು ತಮ್ಮ ವಾಹನವನ್ನು ಉಚಿತವಾಗಿ ನೀಡಿದ್ದರು. ಯಡ್ರಾಮಿಯಿಂದ ನೆರೆ ಪ್ರದೇಶ ಜಮಖಂಡಿ ತಾಲೂಕಿನ ಸೂರ್ಪಾಲಿ ಗ್ರಾಮಕ್ಕೆ ತೆರಳಲು ಮಡಿವಾಳಪ್ಪ ಜವಳಗಿ ಎನ್ನುವರು ಉಚಿತ ಟ್ರಕ್ ಸೇವೆ ಒದಗಿಸಿದ್ದರು.
ಸಂಗ್ರಹಿಸಿದ ಸೀರೆ, ಧೋತಿ, ಮಕ್ಕಳ ಬಟ್ಟೆ, ಲುಂಗಿ ಹಾಗೂ ಒಂದು ಟನ್ ಅಕ್ಕಿಯನ್ನು ಸಂತ್ರಸ್ತರಿಗೆ ಹಂಚಿದ ಯುವಕರು, ಸ್ಥಳದಲ್ಲೇ ಬಿಡಾರ ಹೂಡಿ ಒಂದು ದಿನದ ಅಡುಗೆ ತಯಾರಿಸಿ, ಊಟ ಬಡಿಸಿದರು.
ಸ್ಥಳಕ್ಕೆ ಆಗಮಿಸಿದ್ದ ಜಮಖಂಡಿ ತಾಲೂಕಿನ ಶಾಸಕ ಆನಂದ ನ್ಯಾಮಗೌಡ ಯುವಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಯುವಕರಾದ ಸಾಹೇಬಗೌಡ ದೇಸಾಯಿ, ವಿಶ್ವನಾಥ ಪಾಟೀಲ, ಸಂತೋಷ ಕೊಡೆಕಲ್ಲ, ಅಫ್ರೂೕಜ್ ಅತನೂರ, ಬಸವರಾಜ ಗುರಶೆಟ್ಟಿ, ಅನೀಲ ಗುತ್ತೇದಾರ, ಅಜರುದ್ದೀನ್ ಮಳ್ಳಿಕರ್, ಶರಣು ಬೆಲ್ಲದ, ಸಮರ್ಥ ಬೆಲ್ಲದ, ಸಾಯಿ ಡಂಬಳ, ಆನಂದ ಮಾದರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Protest: ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆ ಖಂಡಿಸಿ ಗದಗ, ಕಲಬುರಗಿ ಬಂದ್
CT Ravi ಪ್ರಕರಣ ನ್ಯಾಯಾಂಗ ತನಿಖೆ ಏಕೆ: ಸಿಎಂ ಸಿದ್ದರಾಮಯ್ಯ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.