ಶಿಥಿಲಾವಸ್ಥೆಯಲ್ಲಿ ನಾಗರಳ್ಳಿ ಬಸ್ ತಂಗುದಾಣ
ಸಾರ್ವಜನಿಕ ಶೌಚಾಲಯ ನಿರ್ಮಿಸಲು ಒತ್ತಾಯ
Team Udayavani, Jul 21, 2019, 12:14 PM IST
ಯಡ್ರಾಮಿ: ನಾಗರಹಳ್ಳಿ ಕ್ರಾಸ್‌ನಲ್ಲಿ ಶಿಥಿಲಾವಸ್ಥೆಗೆ ತಲುಪಿರುವ ಬಸ್ ತಂಗುದಾಣ.
ಯಡ್ರಾಮಿ: ಸುಮಾರು ವರ್ಷಗಳ ಹಿಂದೆ ನಿರ್ಮಾಣವಾದ ನಾಗರಹಳ್ಳಿ ಸಾರ್ವಜನಿಕ ತಂಗುದಾಣ ಶಿಥಿಲಾವಸ್ಥೆಯಲ್ಲಿದ್ದು, ನೂತನ ತಂಗುದಾಣ ನಿರ್ಮಿಸಲು ಜನಪ್ರತಿನಿಧಿಗಳಾಲಿ, ಅಧಿಕಾರಿಗಳಾಗಿ ಆಸಕ್ತಿ ತೋರುತ್ತಿಲ್ಲ.
ಮಳೆ, ಬಿಸಿಲು, ಗಾಳಿಗೆ ರಕ್ಷಣೆ ಪಡೆಯಲು ಪ್ರಯಾಣಿಕರು ತಂಗುದಾಣದಲ್ಲಿ ಜೀವ ಭಯದಿಂದಲೇ ಕುಳಿತುಕೊಳ್ಳುವಂತಾಗಿದೆ.
ಬಸ್ ತಂಗುದಾಣದ ಸ್ಥಿತಿ ಈ ರೀತಿಯಾದರೇ, ಸಾರ್ವಜನಿಕರಿಗೆ ಪ್ರಕೃತಿ ಕರೆಗೆ ಓಗೊಡಲು ಶೌಚಾಲಯದ ವ್ಯವಸ್ಥೆಯೂ ಇಲ್ಲ.
ನಾಗರಹಳ್ಳಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಸುತ್ತಮುತ್ತಲಿನ ಗ್ರಾಮಗಳಾದ ಯಡ್ರಾಮಿ, ಶಹಾಪುರ, ಸಿಂದಗಿ, ವಿಜಯಪುರಕ್ಕೆ ಹೋಗುವ ಪ್ರಯಾಣಿಕರು ನಾಗರಹಳ್ಳಿ ಕ್ರಾಸ್‌ನಲ್ಲಿ ಬಸ್ಸುಗಳಿಗಾಗಿ ಕಾಯುತ್ತಾರೆ. ಈ ವೇಳೆ ಕೆಲ ಸಮಯ ತಂಗುದಾಣದಲ್ಲಿ ಕುಳಿತುಕೊಳ್ಳಲು ಹೋದಾಗ ಅದರ ಸ್ಥಿತಿ ನೋಡಿ ರಸ್ತೆಯಲ್ಲೇ ನಿಂತುಕೊಳ್ಳುತ್ತಾರೆ.
ಮಹಿಳಾ ಪ್ರಯಾಣಿಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ವಯಸ್ಸಾದವರು ಹೀಗೆ ಅನೇಕ ಪ್ರಯಾಣಿಕರು ಕುಳಿತುಕೊಳ್ಳಲು ಸೂಕ್ತ ತಂಗುದಾಣವಿಲ್ಲದೇ ಪ್ರದಾಡುವಂತಾಗಿದೆ.
ನಾಗರಹಳ್ಳಿ ಬಸ್ ತಂಗುದಾಣ ಕಟ್ಟಡ ಅನೇಕ ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಸದ್ಯ ಅದರ ಸ್ಥಿತಿ ಗಂಭೀರವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೆ ಹೋಗುವ ನನ್ನ ಸಹೋದ್ಯೋಗಿಗಳು, ಶಿಕ್ಷಕಿಯರಿಗೆ ತೀವ್ರ ತೊಂದರೆ ಇದೆ. ಬಿಸಿಲು ಮತ್ತು ಮಳೆಗೆ ರಕ್ಷಣೆ ಪಡೆಯಲು ಜೀವ ಕೈಯಲ್ಲಿ ಹಿಡಿದುಕೊಂಡೇ ನಿಲ್ಲಬೇಕಾದಂಥ ಪರಿಸ್ಥಿತಿ ಇಲ್ಲಿದೆ.
•ನಿಂಗಣ್ಣ ದೊಡಮನಿ ಸಿಂದಗಿ,
ಶಿಕ್ಷಕ, ಗಾಂಧಿನಗರ, ಮಳ್ಳಿ ಪ್ರಾಥಮಿಕ ಶಾಲೆ
ಜಿಪಂ ಅನುದಾನದಲ್ಲಿ ಬಸ್ ತಂಗುದಾಣ ನಿರ್ಮಿಸಬೇಕು ಎಂದು ಬಹಳ ದಿನದಿಂದಲೇ ಯೋಚಿಸಿದ್ದೇವೆ. ಆದರೆ ಅಲ್ಲಿ ಜಾಗದ ಸಮಸ್ಯೆ ಇದೆ. ಕ್ರಾಸ್‌ನ ಅಕ್ಕಪಕ್ಕದಲ್ಲಿ ಅಂಗಡಿಗಳಿವೆ. ಒಂದಿಷ್ಟು ಸ್ಥಳ ನೀಡಿದರೆ ನೂತನ ತಂಗುದಾಣ ನಿರ್ಮಿಸಬಹುದು. ಇದಕ್ಕೆ ಯಾರೂ ಸಹಕರಿಸುತ್ತಿಲ್ಲ.
•ದಂಡಪ್ಪ ಸಾಹು ಕುರುಳಗೇರಾ,
ಜಿಪಂ ಸದಸ್ಯ, ಯಡ್ರಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.