ಬಿಸಗೋಡ ಶಾಲೆಗೆ 75ರ ಸಂಭ್ರಮ

1994ರಲ್ಲಿ ಆರಂಭಗೊಂಡ ಶಾಲೆಸ್ಮಾರ್ಟ್‌ ಕೊಠಡಿ-ಪ್ರವೇಶ ದ್ವಾರ ನಿರ್ಮಾಣ

Team Udayavani, Dec 26, 2019, 5:33 PM IST

26-December-21

ನರಸಿಂಹ ಸಾತೊಡ್ಡಿ

ಯಲ್ಲಾಪುರ: ಗ್ರಾಮದ ಒಬ್ಬರ ಮನೆ ಜಗುಲಿಯಿಂದ 1944 ರಲ್ಲಿ ಆರಂಭವಾದ ಶಾಲೆ ನಂತರ ಸೋಗೆ ಜೋಪಡಿ ಮಣ್ಣಿನ ಗೋಡೆ ಹೊಂದಿ, ಕಾಲಕ್ರಮೇಣ ಕಟ್ಟಡ ಹೊಂದಿ ಈಗ ಅದೇ ಶಾಲೆ 75 ವಸಂತಗಳನ್ನು ಪೂರೈಸಿ ಹಳಬರನ್ನು ಸ್ಮರಿಸುವ ಹೊಸಬರಿಗೆ ಹೊಸತನ ಕೊಡುವತ್ತ ದಾಪುಗಾಲಿಟ್ಟ ಬಿಸಗೋಡಿನ ಸಹಿಪ್ರಾ ಶಾಲೆ ಅಮೃತಹೋತ್ಸವಕ್ಕೆ ಕಾಲಿಟ್ಟಿದೆ.

ಮನೆಯೊಂದರಲ್ಲಿದ್ದ ಶಾಲೆ ಸುತ್ತಲ ಗ್ರಾಮದವರಿಗೆ ಅನುಕೂಲವಾಗುವ ಬಿಸಗೋಡಿಗೆ ಸ್ಥಳಾಂತರಗೊಂಡಿತು. 1946 ರ ಸುಮಾರಿಗೆ ಮಣ್ಣಿನ ಗೋಡೆ ಹಾಕಿ, ಸೋಗೆ ಮುಚ್ಚಿಗೆಯೊಂದಿಗೆ ಶಾಲಾ ನಿರ್ಮಾಣವಾಯಿತು. ಈ ಮೂಲಕ ಮಕ್ಕಳ ಭವಿಷ್ಯಕ್ಕೆ ಅಕ್ಷರದ ಬೀಜ ಬಿತ್ತುವ ಕಾರ್ಯಕ್ಕೆ ವೇಗ ಬಂದಿತು. ಹಲವು ವರ್ಷಗಳ ಕಾಲ ಹೀಗೇಯೇ ಶಾಲೆ ಮುಂದುವರಿಯಿತು. 10-15
ಮಕ್ಕಳು ಶಾಲೆಗೆ ಬರತೊಡಗಿದರು. ಊರವರ ಆಶ್ರಯದಲ್ಲಿ ಮಾಸ್ತರರು ಇದ್ದು ಶಾಲೆಗೆ ಬಂದು ಮಕ್ಕಳಿಗೆ ಕಲಿಸುತ್ತಿದ್ದರು.

ನಾಲ್ಕನೇ ತರಗತಿವರೆಗೆ ಶಿಕ್ಷಣದ ವ್ಯವಸ್ಥೆ ಇತ್ತು. ಕುಳಕುಂಡೆ ಮಾಸ್ತರರು, ನಂತರ ರಾಮಚಂದ್ರ ನಾರಾಯಣ ಭಟ್ಟ ಬೆತ್ತಗೇರಿ ಎಂಬ ಮಾಸ್ತರರು, ಕೊಟ್ಟೆ ಚಿದಂಬರ ಭಟ್ಟ, ಬಾರೆ ಮಾಸ್ತರರು ಹೀಗೆ ಶಿಕ್ಷಕರಾಗಿ ಶಾಲೆ ನಡೆಸುತ್ತಾ ಬಂದರು. 1946ರಲ್ಲಿ ಸ್ಕೂಲ್‌ ಬೋರ್ಡ್‌ ವ್ಯವಸ್ಥೆಗೆ ಶಾಲೆ ಸೇರಿ ಊರವರೆಲ್ಲ ಸೇರಿ ಕಟ್ಟಡ ಸಾಮಗ್ರಿ ಸಂಗ್ರಹಿಸಿ ಶಾಲೆಗೊಂದು ಗಟ್ಟಿಯಾದ ಕಟ್ಟಡವೊಂದು ದೊರಕುವಲ್ಲಿ ಶ್ರಮಿಸಿದರು.

ಜೂನ್‌ 1, 1946ರಲ್ಲಿ ಸರಕಾರದಿಂದ ಅಧಿಕೃತವಾಗಿ ಶಾಲೆ ಆರಂಭವಾಯಿತು. 1948 ರಿಂದ 1976ರ ವರೆಗೆ ಊರವರು ಶ್ರಮದಾನದ ಮೂಲಕ ಕಟ್ಟಿದ್ದ ಕಟ್ಟಡದಲ್ಲಿಯೇ ಶಾಲೆ ನಡೆಯುತ್ತ ಬಂದಿತು. ಮಕ್ಕಳ ಸಂಖ್ಯೆ ಹೆಚ್ಚಾಗಿ ಕಟ್ಟಡ ಸಾಲುತ್ತಿರಲಿಲ್ಲ.

1962ರಲ್ಲಿ ಕರ್ನಾಟಕ ಸರಕಾರದ ಅಂಗ ಸಂಸ್ಥೆಯಾದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಮ್ಯಾಂಗನೀಸ್‌ ಅದಿರು ತೆಗೆಯಲು ಬಿಸಗೋಡಿಗೆ ಪ್ರವೇಶಮಾಡಿತು. ಕಾರ್ಮಿಕರ ಮಕ್ಕಳೆಲ್ಲ ಇದೇ ಶಾಲೆಗೆ ಸೇರತೊಡಗಿದರು. 1977-78 ರಲ್ಲಿ ಆರು ಏಳನೇ ತರಗತಿ
ಆರಂಭಗೊಂಡಿದ್ದು ಈ ಭಾಗದ ಮಕ್ಕಳಿಗೆ ಅನುಕೂಲವಾಯಿತು. ಮೈಸೂರು ಮಿನರಲ್ಸ್‌ ಲಿಮಿಟೆಡ್‌ ಕಂಪೆನಿಗೆ ಶಾಲೆಗೆ ಕೊಠಡಿ ಅವಶ್ಯಕತೆ ತೀವ್ರವಾಗಿ ಕಂಡು ಬಂದು ಮೂರು ಕೊಠಡಿಗಳನ್ನು ತಾನೇ ನಿರ್ಮಿಸಿಕೊಟ್ಟಿತು. ದಿನೇ ದಿನೇ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸುವ ಕಾಯಕ ಈ ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತ ಸಾಗಿತು.

ಈ ಹಿನ್ನೆಲೆಯಲ್ಲಿ ಎಂಎಂಎಲ್‌ ಸಂಸ್ಥೆ ಹಿರಿಯ ಅಧಿಕಾರಿಗಳಾಗಿದ್ದ ದಿ| ಎ.ಎಸ್‌. ಗಿರಿರಾವ್‌ ಶಿಕ್ಷಣಕ್ಕಾಗಿ ನೀಡಿದ ಕೊಡುಗೆಗಳನ್ನು ಈ ಭಾಗದ ಜನ ಮರೆಯುವಂತಿಲ್ಲ. ಈವರೆಗೆ ಈ ಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಉದ್ಯೋಗಗಳಲ್ಲಿ ತೊಡಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತ ಸಾಗಿದ್ದಾರೆ. ಈ ಶಾಲೆಯಲ್ಲಿ ಸೇವೆ ಸಲ್ಲಿಸಿರುವ, ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರನ್ನು, ಮಕ್ಕಳನ್ನು, ಶಾಲೆಗಾಗಿ ಹೆಗಲುಕೊಟ್ಟು ದುಡಿದವರನ್ನು ಸ್ಮರಿಸಲು ಅಮೃತಮಹೋತ್ಸವ ಹಮ್ಮಿಕೊಂಡಿದೆ.

ಅಮೃತ ಮಹೋತ್ಸವದಲ್ಲಿ ಹತ್ತಾರು ದಾನಿಗಳ ಕೊಡುಗೆ ಪಡೆದು ಸ್ಮಾರ್‌r ಕೊಠಡಿ, ಪ್ರವೇಶದ್ವಾರ, ಶಾಲೆಗೆ ಸುಣ್ಣಬಣ್ಣ ಅಲಂಕಾರ, ಆವರಣಗೋಡೆ, ಶೌಚಾಲಯ, ನೂತನ ಕಟ್ಟಡ, ಕಟ್ಟಡದ ಜೀಣೋದ್ಧಾರ ಹೀಗೆ ಒಂದಿಷ್ಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಂಡಿದೆ.

ಡಿ.27 ಮತ್ತು 28ರಂದು ವಿವಿಧ ಕಾರ್ಯಕ್ರಮದ ಮೂಲಕ ಅಮೃತಮಹೋತ್ಸವ ಆಚರಿಸಿಕೊಳ್ಳುತ್ತಿದೆ. ವಿಧಾನಸಭಾದ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿಕ್ಷಣ ಸಚಿವ ಸುರೇಶಕುಮಾರ್‌,
ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದರು, ಶಾಸಕರು ವಿವಿಧ ಸ್ಥರದ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವ ಮೂಲಕ ಮಹೋತ್ಸವ ವಿಶೇಷ ಮೆರಗನ್ನು ಪಡೆದುಕೊಳ್ಳುತ್ತಿದೆ.

ಯಕ್ಷಗಾನ ಪ್ರದರ್ಶನ, ಕುಂಚ ನರ್ತನ, ಯಕ್ಷದೃಶ್ಯ ಮಕ್ಕಳ ಮನರಂಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಎರಡು ದಿನ ಹಬ್ಬವನ್ನು ಬಿಸಗೋಡ ಭಾಗದ ಜನತೆಗೆ ಈ ಅಮೃತ ಮಹೋತ್ಸವ ಉಣಬಡಿಸುತ್ತಿದೆ.

ಟಾಪ್ ನ್ಯೂಸ್

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು

Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು

20

Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

Dandeli: ವಕ್ಫ್‌ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

10

Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

01236

Bantwal: ತುಂಬೆ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ

SALMAN-KHAN

Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

ಅಂಗಡಿಯಲ್ಲಿ‌ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ 

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.