ಕೊಚ್ಚಿ ಹೋದ ಸೇತುವೆಗಳು
ಪೋಲಾಗುತ್ತಿದೆ ಸರಕಾರದ ಹಣ ನಿರ್ಮಾಣದ ನಂತರ ನೋಡದ ರಾ.ಹೆ. ಇಲಾಖೆ
Team Udayavani, Dec 19, 2019, 4:54 PM IST
ನರಸಿಂಹ ಸಾತೊಡ್ಡಿ.
ಯಲ್ಲಾಪುರ: ಕಳೆದ ಮಳೆಗಾಲದ ಮಹಾಪುರ ಏನೆಲ್ಲಾ ಹಾನಿ ಮಾಡಿದೆ ಎಂಬುದು ಈಗಾಗಲೇ ಗೋಚರಿಸಿದೆ. ಎಷ್ಟೋ ಹಾನಿಯಾದ ರಸ್ತೆಗಳಿಗೆ ಈಗಾಗಲೇ ತೇಪೆ ಹಚ್ಚಲಾಗಿದೆ. ಸರಕಾರದ ಒಂದಿಷ್ಟು ಹಣ ಖರ್ಚು ಕಾಣಿಸಿ ಹೇಗೋ ಏನೆಲ್ಲಾ ಕಸರತ್ತು ಮಾಡಿದ್ದಾರೆ.
ಶಿರಸಿ ಯಲ್ಲಾಪುರ ರಾಜ್ಯ ಹೆದ್ದಾರಿಯ ಬೇಡ್ತಿ ಹಳೆ ಸೇತುವೆ ದುರಸ್ತಿಗೇ ಅವಕಾಶವಿಲ್ಲ ಎಂದ ಇಲಾಖೆ ಮಳೆಗಾಲದಲ್ಲಿ ಹಾನಿಯಾದಾಗ ಲಕ್ಷಾಂತರ ರೂ.ಗಳನ್ನು ಹಳೆ ಸೇತುವೆಗೆ ವ್ಯಯಿಸಿದ ಸಂಗತಿ ನಮ್ಮ ಕಣ್ಮುಂದೆ ಇದೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಸೇತುವೆಗೆ ಇದಕ್ಕೂ ಪೂರ್ವದಲ್ಲಿ ವ್ಯಯಿಸಿದ್ದರೆ ಹಳೆ ಸೇತುವೆಗೆ ತೇಪೆ ಹಚ್ಚಿ ಸರಕಾರದ ಹಣ ಪೋಲು ಮಾಡುವ ಪ್ರಸಂಗ ಬರುತ್ತಿರಲಿಲ್ಲ. ಇಂತಹುದು ಒಂದು ಕಡೆಯಾದರೆ ಕನಿಷ್ಠ ಸಾವಿರಾರು ರೂ. ವ್ಯಯಿಸಿ ಮುಂದಾಗುವ ಅಪಘಾತ ಪ್ರಾಣಹಾನಿ ತಡೆಯುವಂತಹ ಸಾಮಾನ್ಯ ಕೆಲಸಕ್ಕೇಕೆ ಇಲಾಖೆಗಳು ಮುಂದಾಗುತ್ತಿಲ್ಲ? ಜನಪ್ರತಿನಿಧಿಗಳಿಗೇಕೆ ಕಾಣುತ್ತಿಲ್ಲ ಎಂಬುದು ಗುಳ್ಳಾಪುರದ ಸೇತುವೆಯ ಸ್ಥಿತಿ ನೋಡಿದಾಗ ಖೇದವಾಗುತ್ತದೆ.
ಗುಳ್ಳಾಪುರ ಹಾಗೂ ಪುನರ್ವಸತಿ, ಹೆಗ್ಗಾರ ಹಲವಳ್ಳಿ, ಕಲ್ಲೇಶ್ವರ ಶೇವಾRರ ದೋರಣಗಿರಿ ಶಿರಸಿ ಸಂಪರ್ಕ ಕಲ್ಪಿಸುವ ಅತ್ಯಂತ ದೊಡ್ಡದಾದ ಪ್ರತಿನಿತ್ಯ ನೂರಾರು ವಾಹನಗಳು, ನೂರಾರು ಪಾದಚಾರಿಗಳು ಅದರಲ್ಲೂ ಪ್ರಾಥಮಿಕ, ಪ್ರೌಢಶಾಲೆ ಮಕ್ಕಳು, ದನಕರುಗಳು ಸಂಚರಿಸುವ ಸೇತುವೆ ಇದಾಗಿದ್ದು ಇದರ ಒಂದು ಭಾಗದಲ್ಲಿ 30 ಅಡಿಯಷ್ಟು ಉದ್ದ ರೇಲ್ ತುಂಡಾಗಿ ಬಿದ್ದಿದೆ. ಇದು ಅತ್ಯಂತ ಅಪಾಯಕ್ಕೆ ದಾರಿಯಾಗಿದ್ದು, ಎಲ್ಲೋ ಕತ್ತಲೆಯಲ್ಲಿ ಪಾದಚಾರಿಗಳು ನಡೆದು ಬರುವಾಗಲೋ ವಾಹನ ಸವಾರರು ಬೇರೆ ವಾಹನಕ್ಕೆ ದಾರಿ ಕೊಡುವಾಗಲೋ ಸ್ವಲ್ಪ ಲಕ್ಷಕ್ಷ್ಯ ತಪ್ಪಿದರೂ ಆತನ ಒಂದು ಎಲುವಿನ ಚೂರು ಸಿಗದು.
ಆಯತಪ್ಪಿ ಕೆಳಗೆ ಬಿದ್ದರೆ ನೂರಡಿಯಷ್ಟು ಆಳದಲ್ಲಿ ಕಲ್ಲಿನ ಮೇಲೆ. ಇಲ್ಲವೇ ಹರಿಯುತ್ತಿರುವ ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಬೇಕಾದ ಸ್ಥಿತಿಯಿದೆ. ಅಲ್ಲದೇ ಇದರ ವಾಲ್ ಪ್ಲೇಟ್ ಗಳು ಅಪಾಯದ ಸ್ಥಿತಿಯಲ್ಲಿದೆ. ಪಾದಚಾರಿಗಳನ್ನು ಅಪಾಯಕ್ಕೆ ತಳ್ಳುವ ಸಂಭವವಿದೆ. ಇಂತಹ ಅಪಾಯದ ಭಯಾನಕ ಸ್ಥಿತಿಯೊಂದು ನಿರ್ಮಾಣವಾಗಿ ನಾಲ್ಕು ತಿಂಗಳು ಕಳೆಯಿತು. ಇದೇ
ಸೇತುವೆ ಮೆಲೆ ಜಿಲ್ಲಾಧಿಕಾರಿಗಳು, ಶಾಸಕರು, ಸಂಸದರು ಇನ್ನು ಸ್ಥಳೀಯ ಜನಪ್ರತಿನಿಧಿಗಳು ಸಂಚರಿಸಿದ್ದಾರೆ. ಕೋಟಿ, ಲಕ್ಷ ರೂ. ನೆರೆ ಪರಿಹಾರದ ಬಗ್ಗೆ ಮಾತನಾಡುವವರು ಇಂತಹ ಅಪಾಯದ ಎಲ್ಲೋ ಸಾವಿರಾರು ರೂ ಖರ್ಚು ಮಾಡಿ ಮುಂದಾಗುವ ಅಪಾಯವನ್ನು ತಾತ್ಕಾಲಿಕವಾಗಿ ತಪ್ಪಿಸುವಷ್ಟು ಕೆಲಸಮಾಡಿ ಅವಘಡ ತಪ್ಪಿಸುವ ಶಕ್ತಿ ಸಂಬಂಧಪಟ್ಟ ಇಲಾಖೆಗಳಿಗಿಲ್ಲ ಎನ್ನುವುದು ದುರ್ದೈವದ ಸಂಗತಿ.
ಅಪಾಯ ಘಟಿಸಿದ ಬಳಿಕ ಎಚ್ಚೆತ್ತುಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅಪಾಯ ತಪ್ಪಿಸಲು ಕನಿಷ್ಠವಾದ ಕೆಲಸವನ್ನು ಮಾಡುವ ಯೋಜನೆಗಳು ಇಲಾಖೆ ಮತ್ತು ಅದರ ಅಧಿಕಾರಿಗಳ ಬಳಿ ಇಲ್ಲವೇ ಎಂಬುದು ಎಲ್ಲರ ಪ್ರಶ್ನೆಯಾಗಿದೆ. ವಾಸ್ತವವಾಗಿ ಈ ಸೇತುವೆ ಯಾವ ಇಲಾಖೆಯದು ಎಂಬುದೇ ಯಕ್ಷಪ್ರಶ್ನೆಯಾಗಿದೆ.
1996 ರಲ್ಲಿ ದೇಶಪಾಂಡೆಯವರು ಸಚಿವರಿದ್ದಾಗ ಉದ್ಘಾಟನೆಯಾದ ಸೇತುವೆಯಾಗಿದ್ದು ಆ ಬಳಿಕ ಈ ಸೇತುವೆ ಸಾಮಾನ್ಯ ದುರಸ್ತಿ ಬದಿಗಿರಲಿ ಕನಿಷ್ಠ ಅಪರೂಪಕ್ಕೆ ಸುಣ್ಣ ಬಣ್ಣವನ್ನೂ ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ಮಿಸಿದೆ ಎನ್ನಲಾದ ಈ ಸೇತುವೆ ಆದ ಬಳಿಕ ಈ ಇಲಾಖೆ ಕಣ್ಣೆತ್ತಿಯೂ ನೋಡಿಲ್ಲ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಈ ಸೇತುವೆ ನಿರ್ಮಿಸಿ ಬಳಿಕ ಇತ್ತ ನೋಡಿಲ್ಲ. ವಾಲ್ ಪ್ಲೇಟ್‌ಗಳು ಸರಿಯಿಲ್ಲ. ಈಗ ರೇಲ್‌ಗಳು ತುಂಡಾಗಿ ಬಿದ್ದಿದೆ. ಸಾವು ನೋವು ಸಂಭವಿಸಬಹುದು. ಕನಿಷ್ಠ ಅಪಾಯತಪ್ಪಿಸಬಹುದಾದ ಕ್ರಮವನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ನಾನೇ ನಾಲ್ಕಾರು ಬಾರಿ ಇಲಾಖೆ ಗಮನಕ್ಕೆ ತಂದಿದ್ದೇನೆ. ಪ್ರಯೋಜನವಾಗಿಲ್ಲ.
. ವೆಂಕಣ್ಣ ವೈದ್ಯ,
ಸಾಮಾಜಿಕ ಹೋರಾಟಗಾರರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.