ಯಲ್ಲಾಪುರ ಆಸ್ಪತ್ರೆಗೆ ಇಸಿಜಿ ಯಂತ್ರ

•ಡಾ. ಪದ್ಮನಾಭ ಕಾಮತ್‌ ಹೃದಯರೋಗ ಕೈಂಕರ್ಯ ಯಲ್ಲಪುರಕ್ಕೆ ವಿಸ್ತರಣೆ

Team Udayavani, Aug 24, 2019, 4:31 PM IST

Udayavani Kannada Newspaper

ಯಲ್ಲಾಪುರ: ಮಂಗಳೂರು ಜ್ಯೋತಿಯಲ್ಲಿರುವ ಕೆಎಂಸಿ ಆಸ್ಪತ್ರೆ ಹೃದಯ ವಿಭಾಗದ ಮುಖ್ಯಸ್ಥ ಡಾ| ಪದ್ಮನಾಭ ಕಾಮತ್‌ರ ನೂತನ ಯೋಜನೆ ಹೃದಯ ಸಮಸ್ಯೆಗೆ ವಾಟ್ಸ್‌ಆ್ಯಪ್‌ ಸಲಹೆ ಜಾರಿ ತಂದಿದ್ದಾರೆ. ಈಗಾಗಲೆ ಇದರಡಿ ತುರ್ತು ಚಿಕಿತ್ಸೆ ಅಗತ್ಯವುಳ್ಳ ಇಳಿವಯಸ್ಸಿನ 20 ಜನರಿಗೆ ಉಪಯುಕ್ತವಾಗಿದೆ.

ಹಾವೇರಿ, ಚಿತ್ರದುರ್ಗ 2, ಕಡೂರು, ತೀರ್ಥಹಳ್ಳಿ, ದೇವನಹಳ್ಳಿ, ಮೈಸೂರು, ಸುಳ್ಯ, ಪುತ್ತೂರು, ಯಾದಗಿರಿ ತಲಾ 1, ಬೆಂಗಳೂರು 3, ಅತಿಹೆಚ್ಚು 8 ಉತ್ತರಕನ್ನಡದಿಂದ ಅದರಲ್ಲಿ ಕುಮಟಾದಿಂದ 4, ಇವುಗಳಲ್ಲಿ 3 ಒಮ್ಮೆ ಹೃದಯಾಘಾತವಾದ ಪ್ರಕರಣವಾಗಿದ್ದು ಅವರಿಗೆ ಕೂಡಲೇ ಮತ್ತು ಉಳಿದವರಿಗೆ ತಮಗೆ ಹತ್ತಿರದ ಊರಿನ ಹೃದಯ ತಜ್ಞರಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಲಾಗಿದೆ. ಹೃದಯದ ಸಮಸ್ಯೆ ಕುರಿತು ಗೊಂದಲದಲ್ಲಿದ್ದ ಇವರಿಗೆ ಸರಿಯಾಗಿ ಮಾರ್ಗದರ್ಶನ ನೀಡಲಾಗಿದೆ. ಇದು ಹೃದಯ ಕಾಯಿಲೆಯ ಗಂಭೀರತೆ ಮತ್ತು ಸೂಕ್ತ ಚಿಕಿತ್ಸೆಯ ಅಲಭ್ಯತೆಯನ್ನು ತೋರಿಸುತ್ತಿದ್ದು ರೋಟರಿ, ಲಯನ್‌ ಮೊದಲಾದ ಸೇವಾ ಸಂಸ್ಥೆಯಲ್ಲಿರುವ ವೈದ್ಯರು ‘ಸಿಎಡಿ’ ಎಂಬ ತಮ್ಮ ವೈದ್ಯ ಗ್ರೂಪ್‌ ಬಳಗ ರಚಿಸಿಕೊಂಡು ಇಂತಹ ಸಲಹೆ ನೀಡಿ, ಜೀವ ಉಳಿಸಬಹುದು ಎಂಬುದು ಡಾ. ಕಾಮತ್‌ರ ಆಲೋಚನೆ.

9743287599 ನಂಬರಿಗೆ ವಾಟ್ಸ್‌ಆ್ಯಪ್‌ ಸಂದೇಶ ಕಳಿಸುವವರು ಇಸಿಜಿ ಜೊತೆ ಸ್ಥಳೀಯ ವೈದ್ಯರ ವರದಿ ಇದ್ದರೆ ಅದನ್ನು ವಾಟ್ಸ್‌ಆ್ಯಪ್‌ ಮಾಡಿ ಹೆಸರು, ವಯಸ್ಸು, ಊರು ತಿಳಿಸಬೇಕು ಎಂದು ಮಾಹಿತಿ ನೀಡಿರುವ ಅವರು ಕೆಲವರು ಸುಮ್ಮಸುಮ್ಮನೆ ವಾಟ್ಸ್‌ಆ್ಯಪ್‌, ವೀಡಿಯೋ ಕಳಿಸಬಾರದು ಎಂದಿದ್ದಾರೆ.

ಈಗ ಎಲ್ಲೆಡೆ ವಾಟ್ಸ್‌ಆ್ಯಪ್‌ ಸಹಿತ ಮೊಬೈಲ್ ಇರುವುದರಿಂದ, ತುರ್ತು ಸೇವೆ ನೀಡುವ ಸ್ಥಳೀಯ ವೈದ್ಯರು ಇರುವುದರಿಂದ ಇವರಿಗೆ ಮತ್ತು ನೇರವಾಗಿ ಹೃದಯ ಸಮಸ್ಯೆಯುಳ್ಳವರೊಂದಿಗೆ ನೆರವಾಗಲು ಕಾಮತ್‌ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. 24ತಾಸುಗಳಲ್ಲಿ ಕೆಲವು ಜೀವಗಳು ಉಳಿದಿವೆ. ಬಹಳಷ್ಟು ಜೀವಗಳು ತಮಗೆ ಹೃದಯ ಸಮಸ್ಯೆ ಇಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ವಾಟ್ಸ್‌ಆ್ಯಪ್‌ ಜೀವ ರಕ್ಷಕವೂ ಆಗಬಲ್ಲದು. ಈ ಸರಳ ಉಪಕರಣವನ್ನು ಬಳಸಿದರೆ ವೈದ್ಯರು ಪ್ರತಿವರ್ಷ ಸಾವಿರಾರು ಹೃದಯಘಾತವಾದವರನ್ನು ಉಳಿಸಬಹುದಾಗಿದೆ. ಆದ್ದರಿಂದ ವೈದ್ಯರು ಟೊಂಕಕಟ್ಟಿ ಸುಲಭದಲ್ಲಿ ನರ ನಾರಾಯಣರಾಗುವುದು ಸಾಧ್ಯವಿದೆ ಎಂದು ಡಾ| ಕಾಮತ್‌ ಅಭಿಪ್ರಾಯಪಟ್ಟಿದ್ದಾರೆ.

ದೇಶದ ತುಂಬ ಹೃದಯ ವೈದ್ಯರಿದ್ದಾರೆ. ಆದರೆ ಉತ್ತರಕನ್ನಡ ಯಲ್ಲಾಪುರದಲ್ಲಿ ಎಂಜಿಯೋಗ್ರಾಂ, ಎಂಜಿಯೋಪ್ಲಾಸ್ಟ್‌ ಮಾಡಿಸಿ, ಜೀವ ಉಳಿಸಬಲ್ಲ ವೈದ್ಯರು ಇಲ್ಲ. ಈ ಹಿನ್ನೆಲೆಯಲ್ಲಿ ಅನುಕೂಲವಾಗಲೆಂದು ಆ.26 ರಂದು ಯಲ್ಲಾಪುರ ಆಸ್ಪತ್ರೆಗೆ ಇಸಿಜಿ ಯಂತ್ರ ವಿತರಣೆ ಮಾಡಲಿದ್ದಾರೆ.

ಮನೆ ಬಾಗಿಲಿಗೆ ಹೃದಯ ತಜ್ಞರು: ಆರೋಗ್ಯ ಪೂರ್ಣ ಯೋಜನೆ
ಬಿಡುವಿಲ್ಲದೇ ದುಡಿಯುತ್ತಿರುವ ಹೃದಯ ತಜ್ಞ ಡಾ| ಪದ್ಮನಾಭ ಕಾಮತ್‌ ಭಾವಜೀವಿ, ಯಕ್ಷಗಾನ ಪ್ರೇಮಿ. ಹಳ್ಳಿಗಳಿಗೆ ಆಟಕ್ಕೆ ಹೋದಾಗ ಅಲ್ಲಿ ಕೆಲವರಿಗೆ ಹೃದಯಾಘಾತವಾಗಿರುವುದು ಅರಿಯದೆ, ವಿಳಂಬವಾಗಿ ಆಸ್ಪತ್ರೆಗೆ ಒಯ್ಯುವಾಗ ಮಧ್ಯದಲ್ಲಿ ಸಾವನ್ನಪ್ಪುವ ಪ್ರಕರಣಗಳನ್ನು ನೋಡಿ ಮನಕರಗಿದ ಕಾಮತರು ವಿಳಂಬ ತಪ್ಪಿಸಲು ಗ್ರಾಮೀಣ ಆಸ್ಪತ್ರೆಗಳಿಗೆ ಇಸಿಜಿ ಯಂತ್ರವನ್ನು ದಾನಿಗಳಿಂದ ಕೊಡಿಸಿ, ವಾಟ್ಸ್‌ಆ್ಯಪ್‌ ಮುಖಾಂತರ ವರದಿ ತರಿಸಿಕೊಂಡು ಸಲಹೆ ನೀಡುವುದನ್ನು ಸ್ನೇಹಿತರೊಂದಿಗೆ ಆರಂಭಿಸಿದರು. ಇದಕ್ಕೆ ಕಾರ್ಡಿಯಾಕ್‌ ಎಟ್ ಡೋರ್‌ ಸ್ಟೆಪ್‌ (ಮನೆ ಬಾಗಿಲಿಗೆ ಹೃದಯ ವೈದ್ಯರು) ಎಂದು ಹೆಸರಿಟ್ಟರು. ಇದು ಯಶಸ್ವಿಯಾಗಲು ಆರಂಭಿಸಿದಾಗ ಜನೌಷಧಿ ಕೇಂದ್ರ ಸಹಿತ ಸರ್ಕಾರಿ ಮತ್ತು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಉಪಕರಣ ಪೂರೈಸಿದರು. 10 ಜಿಲ್ಲೆಗಳಿಗೆ ಉಪಕರಣ ನೀಡಿದರು. ಉತ್ತಮ ಜನಸ್ಪಂದನೆ ಕೆಲವೆಡೆ, ಇನ್ನೂ ಕೆಲವೆಡೆ ನಿರ್ಲಕ್ಷ್ಯ. 175 ಉಪಕರಣ ವಿತರಿಸಿ ಆದ ಮೇಲೆ ಇದರ ಸಾಫಲ್ಯ ಸ್ಪಷ್ಟವಾಗಲಿಲ್ಲ. ಮಾರ್ಗ ಮಧ್ಯೆ ಸಾಯುವವರ ಸಂಖ್ಯೆ ನಿರೀಕ್ಷಿಸಿದಷ್ಟು ಕಡಿಮೆಯಾಗಲಿಲ್ಲ.

ಟಾಪ್ ನ್ಯೂಸ್

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

siddanna-2

NABARD ಕಡಿತ ರೈತರಿಗೆ ಮಾಡಿದ ಅನ್ಯಾಯ: ಸಿದ್ದರಾಮಯ್ಯ ಆಕ್ರೋಶ

vidhana-soudha

Karnataka; 5,949 ಗ್ರಾಮ ಪಂಚಾಯತ್‌ಗಳಿಗೆ 448 ಕೋಟಿ ರೂ. ಅನುದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

1-dp

Datta peeta; ಸರಕಾರ ನೇಮಕ ಮಾಡಿದ್ದ ಅರ್ಚಕ ರಾಜೀನಾಮೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

money

Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು

ಅದಾನಿ ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್‌?

1-tb

Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್‌ ಹೊರತೆಗೆದ ವೈದ್ಯರು!

1-kalinga

Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್‌ ಕಾಳಿಂಗ’:ಅಧಿಕೃತವಾಗಿ ಘೋಷಣೆ

1-kannada

Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.