ಮಕಳಿಗೆ ನೈಜ ಅನುಭವ ಆಧಾರಿತ ಶಿಕಣ

ಗುಂಬಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಭಿನ್ನ ಪ್ರಯೋಗ, ಪಠ್ಯ ವಿಷಯ ಅರ್ಥೈಸಿಕೊಳ್ಳಲು ಸುಲಭ

Team Udayavani, Nov 21, 2019, 5:36 PM IST

21-November-22

ಫೈರೋಜ್‌ ಖಾನ್‌
ಯಳಂದೂರು:
ಶ್ವಾಸನಾಳಗಳ ಒಳಗೆ ಮಕ್ಕಳು ಇಣುಕಿದರೆ ಹೇಗಿರುತ್ತದೆ? ನಮ್ಮ ಹೃದಯ ಬಡಿತವನ್ನು ಸ್ವತಃ ಕಣ್ಣುಗಳಿಂದಲೇ ನೋಡುವುದಾದರೆ, ಗಾಳಿ ಚೀಲಗಳು ಹೇಗಿರುತ್ತವೆ? ರಕ್ತ ಹೇಗೆ ಪರಿಚಲನೆಯಾಗುತ್ತದೆ? ಇದನ್ನು ಕಣ್ತುಂಬಿಕೊಂಡರೆ, ಎತ್ತರದ ಹಿಮಾಲಯ, ಜಲಪಾತದ ತುದಿಯಲ್ಲಿ ನಿಂತು ಕೆಳಗಿನ ಪ್ರಪಾತವನ್ನು ನೋಡಿ ನಾನು ಇಲ್ಲಿದ್ದೇನೆ ಎಂಬುದನ್ನು ಕಣ್ಣಿಗೆ ಹಾಕುವ ವಿಶಿಷ್ಟ ಸಾಧನ ಬಳಸಿಕೊಂಡು ಸುತ್ತಲೂ ತಿರುಗಿ ಅನುಭವಿಸಿ ನೋಡುವುದಾದರೆ ಹೇಗೆ? ಇಂತಹ ವಿಶಿಷ್ಟ ವಿಭಿನ್ನ ಪ್ರಯೋಗವನ್ನು ರಾಜ್ಯದಲ್ಲೇ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅತ್ಯಂತ ರಿಯಾಯಿತಿ ದರದಲ್ಲಿ ತೋರಿಸುವ ಕೆಲಸ ನಡೆಯುತ್ತಿದೆ. ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಚಾಮರಾಜನಗರದ ವಿಆರ್‌ ಟೆಕ್ನಾಲಜಿಸ್‌ ಕಂಪೆನಿ ಮಕ್ಕಳಿಗೆ ನೈಜ ಅನುಭವ ಆಧಾರಿತ ಶಿಕ್ಷಣ (ವರ್ಚುವಲ್‌ ರಿಯಾಲಿಟಿ ಎಜುಕೇಷನ್‌) ನೀಡಲಾಗುತ್ತಿದೆ.

ಅನುಭವದ ಶಿಕ್ಷಣ: ಇದು ಮಕ್ಕಳಿಗೆ ವಿಭಿನ್ನ ಅನುಭವ ಒದಗಿಸುವ ಶಿಕ್ಷಣ ಕ್ರಮವಾಗಿದೆ. ಇದನ್ನು ಮೊಬೈಲ್‌ ಅಥವಾ ಐಪಾಡ್‌ನ‌ ಸಹಾಯದೊಂದಿಗೆ ಕಣ್ಣಿಗೆ ಹಾಕುವ ವಿಆರ್‌ ಸಾಧನ ಬಳಸಿ 360 ಡಿಗ್ರಿ ಆಯಾಮದಲ್ಲಿ ಶಾಲೆ ಪಠ್ಯದಲ್ಲಿರುವ ಎನ್‌ಸಿಆರ್‌ಟಿ ಆಧಾರಿತ ಶಿಕ್ಷಣದಲ್ಲಿರುವ ಪಠ್ಯ ವಿಷಯಗಳಲ್ಲಿ ಬರುವ ವಿಷಯ ವಸ್ತುಗಳನ್ನು ದೃಶ್ಯ ರೂಪದಲ್ಲಿ ತೋರಿಸುವ ಶಿಕ್ಷಣವಾಗಿದೆ. ಇದರಿಂದ ಲಾಭವೇನು: ಈ ಕ್ರಮದಿಂದ ಮಕ್ಕಳಿಗೆ ಬೋಧಿಸಿದರೆ ಮಕ್ಕಳು ಪಠ್ಯದಲ್ಲಿನ ವಸ್ತು ವಿಷಯ ಅನುಭವಿಸುವುದರಿಂದ ಮಕ್ಕಳಿಗೆ ವಿಷಯವನ್ನು ಸುಲಭವಾಗಿ ಅರ್ಥೈಸುವಿಕೆಯಾಗುತ್ತದೆ. ಓದಿ ನೆನಪಿನಲ್ಲಿಟ್ಟು ಕೊಳ್ಳುವುದಕ್ಕಿಂತ ದೃಶ್ಯಗಳ ರೂಪದಲ್ಲಿ, ಕಂಡು ಅನುಭವಿಸಿ ಬರೆಯುವುದು ಸುಲಭವಾಗಲಿದೆ.

ಪ್ರತಿ ಮಗುವಿಗೆ ವರ್ಷಕ್ಕೆ 50 ರೂ. ಚಾರ್ಜ್‌: ಇಂತಹ ಶಿಕ್ಷಣವನ್ನು ಮಕ್ಕಳಿಗೆ ನೀಡುವಲ್ಲಿ ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯನ್ನು ಪ್ರಥಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮೀಣ ಸರ್ಕಾರಿ ಶಾಲೆಗಳ ಮಕ್ಕಳನ್ನೇ ಮುಖ್ಯವಾಗಿ ಇಟ್ಟುಕೊಳ್ಳಲಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿ ಪ್ರಥಮವಾಗಿ ಈ ಪ್ರಯೋಗ ನಡೆದಿತ್ತು. ಈಗ ಯಳಂದೂರು ತಾಲೂಕಿನ ಗುಂಬಳ್ಳಿ ಪ್ರೌಢಶಾಲೆಯಲ್ಲಿ ಪ್ರಯೋಗ ಮಾಡಲಾಗಿದೆ. ಸಂಸ್ಥೆ ಪ್ರತಿ ಮಗುವಿಗೆ ವರ್ಷಕ್ಕೆ 50 ರೂ. ಚಾರ್ಜ್‌
ಮಾಡಲಾಗುತ್ತದೆ. ಈಗಾಗಲೇ ಗುಂಡ್ಲುಪೇಟೆ ಶಾಸಕ ನಿರಂಜನ್‌ ಹಾಗೂ ಚಾಮರಾಜನಗರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಜೊತೆ ಸಂಸ್ಥೆ ಮಾತುಕತೆ ನಡೆಸಿದೆ. ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಈ ವೆಚ್ಚ ಭರಿಸಲು ಅವರು ಆಸಕ್ತಿ ತೋರಿದ್ದಾರೆ. ಮುಂದಿನ ದಿನಗಳಲ್ಲಿ ಇತರೆ ಸ್ಥಳಗಳಿಗೂ, ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆ ಸಂಯೋಜಕ ಮಂಜು, ಮಹೇಶ, ರಮೇಶ್‌ ಮಾಹಿತಿ ನೀಡಿದರು.

ಮಕ್ಕಳಿಗೆ ಕಲಿಸುವುದು ಸುಲಭ
ಶಿಕ್ಷಣ ಪದ್ಧತಿಯಲ್ಲಿ 8ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಸಮಾಜ, ವಿಜ್ಞಾನ ಹಾಗೂ ಐತಿಹಾಸಿಕ ವಿಷಯಗಳ ಬಗ್ಗೆ ಪಠ್ಯದಲ್ಲಿರುವ ವಿಷಯಗಳನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸುವುದರಿಂದ ಬೋಧನೆಗಿಂತ ವಿಷಯ ಕಲಿಕೆ ಸುಲಭವಾಗಲಿದೆ. ವಿದ್ಯಾರ್ಥಿಗಳ ತಂಡವನ್ನು ಮಾಡಿಕೊಂಡು ಈ ತರಗತಿ ನಡೆಸಲಾಗುತ್ತದೆ. ಇದರಿಂದ ಶಾಲಾ ಫ‌ಲಿತಾಂಶದಲ್ಲಿ ಗಣನೀಯ ಬದಲಾವಣೆಯಾಗುವ ನಿರೀಕ್ಷೆಯಿದೆ. ನಮ್ಮ ಶಾಲೆಯಲ್ಲಿ ಈ ಪ್ರಯೋಗ ನಡೆದಿರುವುದು ಖುಷಿ ತಂದಿದೆ ಎಂದು ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಎಂ.ಸಿ. ಮಹಾದೇವ ಸ್ವಾಮಿ, ಶಿಕ್ಷಕ ಎಂ.ವೀರಭದ್ರಸ್ವಾಮಿ, ಮಧುಕರ್‌, ಜಗದೀಶ್‌, ಬಿ.ವಿ.ನಾಗರತ್ನ ಹಾಗೂ ವೈ.ಸಿ.ಕುಮಾರಸ್ವಾಮಿ ಸಂತಸ ಹಂಚಿಕೊಂಡರು.

ಟಾಪ್ ನ್ಯೂಸ್

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tiger

Gundlupet: ಬಂಡೆ ಮೇಲೆ ಹುಲಿ; ಆತಂಕ

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.