ಕೋವಿಡ್ ನಿಂದ ಸಂಕಷ್ಟದಲ್ಲಿರುವವರ ಸಹಾಯಕ್ಕಾಗಿ ‘ಪಿಕಲ್ಡ್ ವಿತ್ ಲವ್’ : 87ರ ಅಜ್ಜಿಯ ಉದ್ಯಮ

ಅಡುಗೆ ಕಲಿಸಲು ನಾನ್ ರೆಡಿ : ಉಷಾ ಗುಪ್ತಾ

Team Udayavani, Aug 25, 2021, 11:25 AM IST

87-yr-old woman sells pickles to support Covid-affected families

87 ವರ್ಷದ ಉಷಾ ಗುಪ್ತಾ

ನಾನು ಕೋವಿಡ್ ಸೋಂಕಿಗೆ ಒಳಗಾಗಿದ್ದಾಗ ಅಲ್ಲಿ ಸೋಂಕಿತರು ಪಡುವ ಕಷ್ಟವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮನೆಯವರು ಹೊಟ್ಟೆಗಿಲ್ಲದೇ ತಮ್ಮ ಸಂಬಂಧಿಕರು ಶೀಘ್ರ ಗುಣಮುಖವಾಗಲಿ ಎಂದು ಕಷ್ಟ ಪಡುವುದನ್ನು ಕಂಡಿದ್ದೇನೆ. ನಾನು ಬಹಳಷ್ಟು ದುಃಖವನ್ನು ನೋಡಿದೆ. ಆಮ್ಲಜನಕದ ಕೊರತೆ ಯುದ್ಧದ ಮಧ್ಯದಲ್ಲಿ ನಿಂತಿದ್ದಂತೆ ಕಾಣಿಸಿತತು ನನಗೆ. ಎಲ್ಲರೂ ಭಯಭೀತರಾಗಿದ್ದರು. ನನ್ನ ಗಂಡನನ್ನು ಕಳೆದುಕೊಂಡ ನಂತರ, ನಾನು ನನ್ನನ್ನೂ ಕಳೆದುಕೊಂಡೆ. ನಾನು ತೀವ್ರವಾದ ನೋವು ಮತ್ತು ಆಘಾತದಲ್ಲಿದ್ದೆ. ಆ ದುಃಖದ ತೀವ್ರತೆಯ ಬಗ್ಗೆ ನನಗೆ ಅರಿವಿದೆ. ಹಾಗಾಗಿ ಆ ದುಃಖದಿಂದ ಹೊರಬರಲು ಹಾಗೂ ದುಃಖದಲ್ಲಿರುವವರಿಗೆ ಸ್ಪಂದಿಸಲು ನಾನು ಈ ಸಣ್ಣ ಉದ್ಯಮವನ್ನು ಆರಂಭಿಸಿ ಇದರಿಂದ ಬರುವ ಆದಾಯದಿಂದ ಕೋವಿಡ್ ನಿಂದ ಬಳಲುತ್ತಿರುವವರಿಗೆ ಸಣ್ಣ ಮಟ್ಟಿಗೆ ವಿನಯೋಗಿಸಲು ಬಯಸುತ್ತಿದ್ದೇನೆ ಎನ್ನುವುದು 87 ವರ್ಷದ ಉಷಾ ಗುಪ್ತಾ ಅವರ ಮಾತು.

ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 200 ಅಂಕ ಜಿಗಿತ: 16,700 ಅಂಕ ಸಮೀಪಿಸಿದ ನಿಫ್ಟಿ

ಹೌದು,  ಕೋವಿಡ್ 19 ಎರಡನೇ ಅಲೆ 87 ವರ್ಷದ ಉಷಾ ಗುಪ್ತಾಳ ದುಃಖ ಮತ್ತು ನೋವಿಗೆ ಕಾರಣವಾಗಿತ್ತು. ಆಕೆ ಮತ್ತು ಆಕೆಯ ಪತಿ ರಾಜ್ ಕುಮಾರ್ ಅವರಿಗೆ ಕೋವಿಡ್ ವೈರಸ್ ತಗುಲಿದ್ದು, ದೆಹಲಿಯ ಬಾತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದರು. ಆದಾಗ್ಯೂ, 27 ದಿನಗಳ ಸಾವು ಬದುಕಿನ ಹೋರಾಟದ ನಂತರ, ಉಷಾ ಅವರ ಪತಿ ನಿಧನರಾದರು. ಈ ಮೂಲಕ ಉಷಾ ಅವರೊಂದಿಗಿನ ರಾಜ್ ಕುಮಾರ್ ಅವರ ಆರು ದಶಕಗಳ ವೈವಾಹಿಕ ಜೀವನಕ್ಕೆ ಕೋವಿಡ್ ಅಂತಿಮ ಚುಕ್ಕಿ ಇಟ್ಟಿತ್ತು.

ತನ್ನ ಪತಿಯ ಸಾವಿನಿಂದ ಅಪಾರ ನೋವು ಅನುಭವಿಸಿದ ಉಷಾ ಗುಪ್ತಾ,  ಮನೆಯಲ್ಲಿ ತಯಾರಿಸಿದ ಉಪ್ಪಿನ ಕಾಯಿ ಮಾರಾಟವನ್ನು ಆರಂಭಿಸಿದ್ದಾರೆ. ಜುಲೈ 2021 ರಲ್ಲಿ ‘ಪಿಕಲ್ಡ್ ವಿತ್ ಲವ್’ ಸಣ್ಣ ಉದ್ಯಮವನ್ನು ಆರಂಭಿಸಿದರು. ಇದರಿಂದ ಬರುವ ಆದಾಯದಿಂದ ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವವರಿಗೆ ಹಾಗೂ ಅವರ ಕುಟುಂಬದವರಿಗೆ ಆಹಾರವನ್ನು ಒದಗಿಸಲು ಬಳಸಲಾಗುತ್ತದೆ ಎಂದು ತೃಪ್ತ ಮನಸ್ಸಿನಿಂದ ಹೇಳುತ್ತಾರೆ ಉಷಾ.

ಉಪ್ಪಿನಕಾಯಿ ಉದ್ಯಮಕ್ಕೆ ಮೊಮ್ಮಗಳೇ ಸ್ಫೂರ್ತಿ :

ಈ ಸಣ್ಣ ಉಪ್ಪಿನಕಾಯಿ ಉದ್ಯಮವನ್ನು ಆರಂಭಿಸಲು ನನ್ನ ಮೊಮ್ಮಗಳು, ಮಕ್ಕಳ ವೈದ್ಯರಾದ ರಾಧಿಕಾ ಬಾತ್ರಾ ಸ್ಫೂರ್ತಿ ಎನ್ನುತ್ತಾರೆ 87ರ ಅಜ್ಜಿ. ಆಕೆ ಸ್ವತಃ ವೈದ್ಯಳಾಗಿ ಈ ಎಲ್ಲಾ ವೇದನೆಗಳ ಬಗ್ಗೆ ಅರಿತಿದ್ದಾಳೆ. ಕೋವಿಡ್ ಸೋಂಕಿತರು ಪಡುವ ಯಾತನೆಯನ್ನು ಹತ್ತಿರದಿಂದ ಕಂಡು ಮರುಗಿದ್ದಾಳೆ. ಹೊಟ್ಟೆಗೆ ತುತ್ತಿಲ್ಲದೇ ಪರಿತಪಿಸುವುದನ್ನು ಕಂಡು ಆಕೆ ನೊಂದಿದ್ದಾಳೆ. ಅವರಿಗೆ ಹೇಗಾದರೂ ಮಾಡಿ ಊಟಕ್ಕೆ ಸಹಾಯ ಮಾಡಬೇಕು ಎಂಬ ಆಲೋಚನೆ ಬಂದಾಗ ನನ್ನಲ್ಲಿ ಈ ವಿಷಯ ಪ್ರಸ್ತಾಪಿಸಿದಳು. ನಾನು ಒಪ್ಪಿಗೆ ನೀಡಿದೆ. ಈ ಉಪ್ಪಿನ ಕಾಯಿ ಹಾಗೂ ಚಟ್ನಿ ಮಾಡುವುದಕ್ಕೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಪೂರೈಸುವುದು ನನ್ನ ಮೊಮ್ಮಗಳೇ, ಅದಾದ ಮೇಲೆ ಉಪ್ಪಿನ ಕಾಯಿ ಹಾಕುವುದಕ್ಕೆ  ಬಾಟಲಿಗಳು, ಲೇಬಲ್ ಪ್ರಿಂಟರ್‌ ಗಳು ಎಲ್ಲದಕ್ಕೂ ಆಕೆಯದ್ದೇ ಖರ್ಚು ವೆಚ್ಚ. ಅದರಿಂದ ಬರುವ ಆದಾಯವನ್ನು ಕೋವಿಡ್ ಸೆಂಟರ್ ಗಳಲ್ಲಿ ಊಟಕ್ಕಾಗಿ ಪರದಾಡುವ ಸೋಂಕಿತರಿಗೆ ಹಾಗೂ ಸೋಂಕಿತರ ಮನೆಯವರಿಗೆ ನೀಡಲು ಆಕೆ ಮನಸ್ಸು ಮಾಡಿರುವುದು ನನಗೆ ತುಂಬಾ ಸಂತಸದ ಸಂಗತಿ ಎನ್ನುತ್ತಾರೆ ಉಷಾ ಗುಪ್ತಾ.

ಪ್ರತಿ ಪೈಸೆಯೂ ಮುಖ್ಯವಾಗಿದೆ. ಸಣ್ಣ ಪ್ರಮಾಣದಲ್ಲಿ ಆದರೂ ನಾನು ವಿಭಿನ್ನವಾಗಿ ಏನನ್ನಾದರೂ ಮಾಡಲು ಸಾಧ್ಯವಾಯಿತು ಎಂದು ನನಗೆ ಖುಷಿಯಾಗಿದೆ. 200 ಗ್ರಾಂ ಉಪ್ಪಿನಕಾಯಿ ಅಥವಾ ಚಟ್ನಿ ಬಾಟಲಿಯ ಬೆಲೆ 150 ರೂ. ಮಾರಾಟದಿಂದ ಸಂಗ್ರಹಿಸಿದ ಈ ಹಣವನ್ನು ಕೋವಿಡ್‌ನಿಂದ ಬಳಲುತ್ತಿರುವ 65,000 ಕ್ಕೂ ಹೆಚ್ಚು ನಿರ್ಗತಿಕರಿಗೆ ಆಹಾರ ಒದಗಿಸಲು ಬಳಸಿದ್ದಾರೆ ಎನ್ನುವುದು ಶ್ಲಾಘನೀಯ.

ಅಡುಗೆ ಕಲಿಸಲು ನಾನ್ ರೆಡಿ : ಉಷಾ ಗುಪ್ತಾ

ಇನ್ನು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ತಮ್ಮದೇ ಆದ ಸಣ್ಣ ಉದ್ಯಮಗಳನ್ನು ಆರಂಭಿಸಲು ತರಬೇತಿ ನೀಡಲು  ನಾನು ಸಿದ್ಧಳಿದ್ದೇನೆ. ಅಂತಹ ಮಹಿಳೆಯರಿಗೆ ತರಬೇತಿ ನೀಡಲು ಮತ್ತು ಜೀವನೋಪಾಯವನ್ನು ಸುಲಭವಾಗಿ ಗಳಿಸಲು ಅಡುಗೆ ಒಂದು ಒಳ್ಳೆಯ ಉಪಾಯ. ಅಡುಗೆ ಮಾಡಲು ತಿಳಿಯದವರಿಗೆ ಅಡುಗೆ  ಮಾಡಲು ಕಲಿಸಲು ತಾನು ಸಿದ್ಧ ಎಂದು ನಗು ನಗುತ್ತಾ ಹೇಳುತ್ತಾರೆ ಉಷಾ ಗುಪ್ತಾ.

ಮತ್ತೊಂದು ವಿಶೇಷ ಏನೆಂದರೇ, ಅಡುಗೆಗೆ ಸಂಬಂಧಿಸಿದ ಭಾರತೀಯ ಸಸ್ಯಾಹಾರಿ ತಿನಿಸು (Indian Vegetarian Cuisine) ಎಂಬ ಪುಸ್ತಕವನ್ನುಕೂಡ ಪ್ರಕಟಿಸಿದ್ದಾರೆ.

ಒಟ್ಟಿನಲ್ಲಿ, ಈ ಇಳಿ ವಯಸ್ಸಿನಲ್ಲೂ ಪರೋಪಕಾರದ ಗುಣ ಇಟ್ಟುಕೊಂಡು ಮೊಮ್ಮಗಳ ಆರ್ಥಿಕ ಸಹಾಯದೊಂದಿಗೆ ಉಪ್ಪಿನ ಕಾಯಿ ಉದ್ಯಮ ಆರಂಭಿಸಿದ ಉಷಾ ಗುಪ್ತಾ ಅವರ ನಡೆ ನಿಜಕ್ಕೂ ಶ್ಲಾಘನೀಯ.

ಇದನ್ನೂ ಓದಿ : ಎಚ್ಚರಿಕೆ…ದೇಶ ಬಿಟ್ಟು ತೆರಳಬೇಡಿ: ತಾಲಿಬಾನ್ ಬೆದರಿಕೆಗೆ ಅಫ್ಘಾನ್ ನಾಗರಿಕರು ಕಂಗಾಲು

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Education: ಕನ್ನಡ ಅನ್ನ ನೀಡುವ ಭಾಷೆಯಾಗಿ ಬೆಳೆಯಬೇಕು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.