ಕೊಪ್ಪಳ: 3 ದಿನದಲ್ಲಿ 300 ಜನರ ಮೇಲೆ ಕೇಸ್53 ಪ್ರಕರಣ -4.75 ಲಕ್ಷ ರೂ. ವಶ
ಜೂಜಾಟದಲ್ಲಿ ತೊಡಗಿದ್ದವರಿಗೆ ಜಿಲ್ಲಾ ಪೊಲೀಸ್ ಬರೊಬ್ಬರಿ ಶಾಕ್ ನೀಡಿದ್ದಾರೆ.
Team Udayavani, Nov 4, 2024, 3:38 PM IST
ಉದಯವಾಣಿ ಸಮಾಚಾರ
ಕೊಪ್ಪಳ: ದೀಪಾವಳಿಯ ಹಬ್ಬದಲ್ಲಿ ಜೂಜುಕೋರರಿಗೆ ಬಿಸಿ ಮುಟ್ಟಿಸಿರುವ ಜಿಲ್ಲಾ ಪೊಲೀಸ್ ಕೇವಲ ಮೂರು ದಿನದಲ್ಲಿ 300 ಜನರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇರಿದಂತೆ 53 ಪ್ರಕರಣ ದಾಖಲಾಗಿವೆ. ಬಂಧಿತರಿಂದ 4.75 ಲಕ್ಷ ರೂ.ವಶಕ್ಕೆ ಪಡೆದ ಅಂದರ್-ಬಾಹರ್ ಆಟವಾಡಿದ ಜನರನ್ನು ಒಳಗೆ ಹಾಕಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ವರ್ಷ ದೀಪಾವಳಿ ವೇಳೆ ಎಗ್ಗಿಲ್ಲದೇ ಇಸ್ಪೀಟ್ ಜೂಜಾಟವು ಜೋರಾಗಿ ನಡೆಯುತ್ತದೆ. ಅಂದರ್ ಬಾಹರ್ ಆಟದಲ್ಲಿ ಹಣ ಕಳೆದುಕೊಂಡು ದಿವಾಳಿಯಾದ ಜನರು ಅದೆಷ್ಟೋ ಮನೆ, ಆಸ್ತಿ, ಆಭರಣ ಮಾರಿಕೊಂಡು ಊರು ತೊರೆದ ಹಲವು ಪ್ರಕರಣಗಳು ನಗರ ಸೇರಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಡೆದಿವೆ.
ಈಗಲೂ ಇಸ್ಪೀಟ್‌ನ ಜೂಜಾಟದಲ್ಲಿ ಹಣ ಗಳಿಕೆಯ ದುರಾಸೆಗೆ ಬಿದ್ದು ತಮ್ಮಲ್ಲಿದ್ದ ಹಣವನ್ನೆಲ್ಲಾ ಕಳೆದುಕೊಂಡಿರುವುದು ಬೆಳಕಿಗೆ ಬರುತ್ತಿದೆ. ಜಿಲ್ಲೆಯಲ್ಲಿ ಈ ವರ್ಷದ ದೀಪಾವಳಿ ಹಬ್ಬವು ಜೋರಾಗಿ ನಡೆಯಿತು. ನಾರಿಮಣಿಗಳು ಹಬ್ಬದ ಸಡಗರದಲ್ಲಿ
ತೊಡಗಿದ್ದರೆ ಮಕ್ಕಳು, ಯುವಕರು, ವೃದ್ಧರೂ ಇಸ್ಪೀಟ್ ಮೋಜು ಮಸ್ತಿಗೆ ಬಿದ್ದು ಜೂಜಾಟದಲ್ಲಿ ತೊಡಗಿದ್ದವರಿಗೆ ಜಿಲ್ಲಾ ಪೊಲೀಸ್ ಬರೊಬ್ಬರಿ ಶಾಕ್ ನೀಡಿದ್ದಾರೆ.
ಜಿಲ್ಲೆಯಲ್ಲಿ ದೀಪಾವಳಿಯ ಮೂರೇ ದಿನದಲ್ಲಿ ವಿವಿಧಡೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸ್ ಪಡೆಯು 300 ಜನರ ಮೇಲೆ ಕೇಸ್ ದಾಖಲಾಗಿದ್ದು, ಒಟ್ಟಾರೆ 53 ಪ್ರಕರಣಗಳು ವಿವಿಧ ಠಾಣೆಯಲ್ಲಿ ದಾಖಲಾಗಿದ್ದು, ದಾಳಿಯ ವೇಳೆ ಬಂ
ಧಿತರಿಂದ 4.75 ಲಕ್ಷ ರೂ. ನಗದು ಹಣ ಹಾಗೂ ಸ್ಥಳದಲ್ಲಿ ವಿವಿಧ ವಸ್ತುಗಳನ್ನು ಜಪ್ತಿ ಮಾಡಿ ಜೂಜೂಕೋರರಿಗೆ ಹಣ ಗಳಿಕೆಯ
ಕನವರಿಕೆಯಲ್ಲಿದ್ದ ಜನರಿಗೆ ಬರೊಬ್ಬರಿ ಬಿಸಿ ಮುಟ್ಟಿಸಿದ್ದಾರೆ.
ಪ್ರತಿ ಹಳ್ಳಿಯಲ್ಲೂ ಜಾಗೃತಿ ಪಡೆ ಕಟ್ಟಲಿ: ನಿರಂತರ ದಾಳಿಯ ಜೊತೆಗೆ ಜಿಲ್ಲೆಯ ಪ್ರತಿ ಹಳ್ಳಿಗಳಲ್ಲಿ ಪೊಲೀಸ್ ಇಲಾಖೆಯು ?ಜಾಗೃತಿ ಪಡೆ? ಕಟ್ಟಿ ಅಕ್ರಮ ಚಟುವಟಿಕೆಗಳ ಬಗ್ಗೆ ಹಾಗೂ ಇಸ್ಪೇಟ್ ಜೂಜಾಟದ ಮೇಲೆ ನಿಗಾ ಇಡಲಿ. ಇದರಿಂದ ಹಳ್ಳಿಗಳಲ್ಲಿ ಯುವಕರ ಬದುಕು ದಿವಾಳಿಯಾಗುವ ಬದಲು ಸರಿದಾರಿಗೆ ಬರಲು ಸಾಧ್ಯವಾಗಲಿದೆ. ಇತ್ತೀಚೆಗಿನ ದಿನಗಳಲ್ಲಿ ಹಳ್ಳಿಗಳಲ್ಲೂ ಗಾಂಜಾ ವಾಸನೆ ಸದ್ದು ಮಾಡುತ್ತಿದೆ ಎಂಬ ಆಪಾದನೆ ಕೇಳಿ ಬರುತ್ತಿದ್ದು, ಯುವಕರು ಮಾಧಕ ವ್ಯಸನಕ್ಕೆ ಬಲಿ ಆಗುವ ಮೊದಲು ಆರಕ್ಷಕ ಪಡೆ ಕಾಳಜಿ ವಹಿಸಲಿ ಎಂಬ ಒತ್ತಾಯ ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.
ದಾಳಿ ನಿತ್ಯ ನಿರಂತರ ನಡೆಯಲಿ
ಕೇವಲ ದೀಪಾವಳಿಯ ಸಂದರ್ಭಗಳಲ್ಲಿ ಮಾತ್ರ ದಾಳಿಗಳು ನೆಪಮಾತ್ರಕ್ಕೆ ನೆಡೆಯದೇ ನಿತ್ಯ ನಿರಂತರವೂ ನಡೆಯಲಿ. ಪೊಲೀಸ್ ಇಲಾಖೆಗೆ ಯಾವ ಸ್ಥಳದಲ್ಲಿ ? ಯಾವ ಸಮಯದಲ್ಲಿ ಯಾವೆಲ್ಲಾ ವ್ಯಕ್ತಿಗಳು ಇಸ್ಪೀಟ್ ಜೂಜಾಟ ಆಟವಾಡುತ್ತಾರೆ ಎಂದೆನ್ನುವ ಮಾಹಿತಿ ಪಕ್ಕಾ ಇರುತ್ತದೆ. ಅಲ್ಲದೇ ಅವರಿಗಾಗಿಯೇ ಬಾತ್ಮೀದಾರರು ಸದಾ ಮಾಹಿತಿ ರವಾನೆ ಮಾಡುತ್ತಲೇ ಇರುತ್ತಾರೆ. ಅಂಥಹ ಮಾಹಿತಿ ಆಧರಿಸಿ ನಿತ್ಯವೂ ಹತ್ತಾರು ಕಡೆ ಪೊಲೀಸರು ದಾಳಿ ನಡೆಸಿ ಇಸ್ಪೀಟ್ ಜೂಜಾಟದ ದಂಧೆಗೆ ಕಡಿವಾಣ ಹಾಕಬೇಕಿದೆ ಎನ್ನುತ್ತಾರೆ ಜನರು.
ಜಿಲ್ಲೆಯಲ್ಲಿ ದೀಪಾವಳಿಯ ಮೂರು ದಿನಗಳ ಅವ ಧಿಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿ ಒಟ್ಟು 300 ಜನರು ಸೇರಿ 53 ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಳಿಯ ವೇಳೆ 4.75 ಲಕ್ಷ ರೂ.ನಗದು ವಶಕ್ಕೆ ಪಡೆಯಲಾಗಿದೆ.
ಡಾ| ರಾಮ್ ಅರಸಿದ್ದಿ, ಕೊಪ್ಪಳ ಎಸಿ
*ದತ್ತು ಕಮ್ಮಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasganj: ವಿವಾಹಿತನಿಗೆ ಪೊಲೀಸ್ ಠಾಣೆಯಲ್ಲಿ ಬಲವಂತದಿಂದ ಮತ್ತೊಂದು ವಿವಾಹ!SPಗೆ ದೂರು!
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
ಕಾಶ್ಮೀರದಲ್ಲಿ ಮಾದಕ ಜಾಲ: 8,000 ಕೆ.ಜಿ. ಡ್ರಗ್ಸ್ ವಶ- 5ವರ್ಷದಲ್ಲಿ 6,500 ಪ್ರಕರಣ
Varanasi:ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂದು ಕತ್ತು ಸೀಳಿಕೊಂಡು ಸಾ*ವಿಗೆ ಶರಣಾದ ಅರ್ಚಕ!
ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಬರ್ಬರ ಹ*ತ್ಯೆ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Udupi: ಆಟೋರಿಕ್ಷಾ ಢಿಕ್ಕಿ; ವೃದ್ಧನಿಗೆ ಗಾಯ
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Kota: ಕೋಟಾದಲ್ಲಿ ಮತ್ತೂಬ್ಬ ವಿದ್ಯಾರ್ಥಿ ಆತ್ಮಹತ್ಯೆ: ವರ್ಷದ 17ನೇ ಪ್ರಕರಣ
Allu Arjun; ತಪ್ಪು ಮಾಹಿತಿ, ಚಾರಿತ್ರ್ಯ ಹರಣಕ್ಕೆ ಯತ್ನ: ರೇವಂತ್ ರೆಡ್ಡಿಗೆ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.