ಬ್ಲ್ಯಾಕ್ & ಬ್ಯೂಟಿಫುಲ್
ಬಬಲ್- ಈ ಸಲ ಕಪ್ಪು ನಿಮ್ದೇ!
Team Udayavani, Nov 4, 2020, 9:00 AM IST
ನಮ್ಮಲ್ಲಿ ಕಪ್ಪು ಎಂದರೆ ಅಶುಭ, ನಿಷಿದ್ಧ, ಪ್ರತಿಭಟನೆ ಮುಂತಾದ ಅರ್ಥಗಳಿರುವುದರಿಂದ ಅದನ್ನು ತೊಡಲು ಹಿಂದೆಮುಂದೆ ನೋಡುತ್ತಿದ್ದರು. ಆದರೆ, ಈಗ ಹಾಗಿಲ್ಲ. ಜನರ ಮನಸ್ಥಿತಿ, ನಂಬಿಕೆಗಳು ಬದಲಾಗುತ್ತಿವೆ.
ಹಿಂದೆಲ್ಲ ಜನರು, ಕಪ್ಪು ಬಣ್ಣದ ಉಡುಗೆಯನ್ನು ಹುಟ್ಟು ಹಬ್ಬ, ಪೂಜೆ, ಮದುವೆ – ಮುಂಜಿ, ಹಬ್ಬ ಮತ್ತು ಹರಿದಿನಗಳಲ್ಲಿ ಉಡುತ್ತಿರಲಿಲ್ಲ. ಆದರೆ ಈಗೀಗ ಆ ಭಾವನೆ ದೂರವಾಗುತ್ತಿದೆ. ಕಪ್ಪು ಬಣ್ಣದ ದಿರಿಸಿನ ಬಗೆಗಿನ ಅಭಿಪ್ರಾಯ ಬದಲಾಗುವುದಕ್ಕೆ ಕಪ್ಪು ಬಣ್ಣದ ಉಡುಗೆ ತೊಟ್ಟರೆ ಸಪೂರವಾಗಿ ಕಾಣಿಸುತ್ತೇವೆ ಎಂಬ ನಂಬಿಕೆಯೂ ಕಾರಣವಾಗಿದೆ.
ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು
ಕಪ್ಪು ಬಣ್ಣದ ಲಂಗ – ರವಿಕೆ – ದುಪಟ್ಟಾ, ಉದ್ದ ಲಂಗ, ಲಂಗ ದಾವಣಿ, ಸೀರೆ, ಘಾಗ್ರಾ ಚೋಲಿ, ಗೌನ್‌ಗಳು, ಅನಾರ್ಕಲಿ, ಚೂಡಿದಾರ, ಹೀಗೆ ಬಗೆಬಗೆಯ ಉಡುಪಿನಲ್ಲಿ ಹಿಂದಿ ಚಿತ್ರ ನಟಿಯರಾದ ಶ್ರದ್ಧಾ ಕಪೂರ್, ಡಯಾನಾ ಪೆಂಟಿ, ಕಿಯಾರ ಅಡ್ವಾಣಿ, ಕೃತಿ ಸನೋನ್, ಆಲಿಯಾ ಭಟ್, ಸಾರ ಅಲಿ ಖಾನ್, ಕರೀನಾ ಕಪೂರ್, ಕತ್ರಿನಾ ಕೈಫ್, ಕಾಜೋಲ…, ವಿಶ್ವ ಸುಂದರಿ ಮಾನುಷಿ ಶಿಲ್ಲರ್ ಸೇರಿದಂತೆ ಅನೇಕ ನಟಿಯರು, ಗಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳು ಕಾಣಿಸಿಕೊಂಡಿರುವುದನ್ನು ಅನೇಕರು ನೋಡಿರಬಹುದು.
ಅದ್ಧೂರಿ ಕಾರ್ಯಕ್ರಮಗಳಿಗೆ ಬೆಸ್ಟು
ರೆಡ್ ಕಾರ್ಪೆಟ್ ಇವೆಂಟ್, ಅವಾರ್ಡ್ ಫಂಕ್ಷನ್, ಪಾರ್ಟಿ, ಸಿನಿಮಾ ಪ್ರಮೋಷನ್, ಫ್ಯಾಷನ್ ಶೋ, ರಾಂಪ್ ವಾಕ್, ಹೀಗೆ ಎಲ್ಲೆಲ್ಲೂ ಬ್ಲಾಕ್ ಬ್ಯೂಟಿಗಳು ರಾರಾಜಿಸುತ್ತಿದ್ದಾರೆ. ತೊಟ್ಟ ಉಡುಗೆಯೇ ಇಷ್ಟು ಗ್ರಾಂಡ್ ಆಗಿದ್ದ ಮೇಲೆ ಪ್ರತ್ಯೇಕವಾಗಿ ಜಗಮಗಿಸುವ ಆಭರಣಗಳು, ಆಕ್ಸೆಸರೀಸ್ ಮತ್ತು ಬ್ರೈಟ್ ಮೇಕಪ್ ಮಾಡಬೇಕಾಗಿಲ್ಲ. ಸರಳವಾದ ಕೇಶ ವಿನ್ಯಾಸ, ಕಡಿಮೆ ಆಕ್ಸೆಸರೀಸ್, ಲೈಟ್ ಮೇಕಪ್ ಮತ್ತು ಸಿಂಪಲ್ ಆಭರಣಗಳನ್ನು ತೊಟ್ಟರೆ ಸಾಕು.
ಇವುಗಳಲ್ಲಿ ಸ್ಲಿವ್‌ಲೆಸ್ (ತೋಳುಗಳು ಇಲ್ಲದ), ಕ್ರಾಪ್ ಟಾಪ್ (ಹೊಟ್ಟೆ ಕಾಣುವಂತಹ), ಅಥವಾ ಬ್ಯಾಕ್‌ಲೆಸ್ (ಬೆನ್ನು ಕಾಣುವಂತಹ) ರವಿಕೆಗಳ ಆಯ್ಕೆಗಳೂ ಇವೆ. ಲಂಗಗಳಲ್ಲಿ ಸೈಡ್ ಸ್ಲಿಟ…, ಸೆಮಿ ಟ್ರಾನ್ಸ್‌ಪರೆಂಟ್ (ತುಸು ಪಾರದರ್ಶಕವಾಗಿರುವ), ಫಿಶ್ ಕಟ್ (ಮೀನಿನ ಮೈ ಆಕಾರದ), ಡಬಲ್ ಲೇಯರ್ಡ್ (ಒಂದರ ಮೇಲೊಂದು ಲಂಗದಂತೆ ಕಾಣುವ), ಹೀಗೆ ವೈವಿಧ್ಯಮಯ ಆಯ್ಕೆಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಕಪ್ಪೆಂದರೆ ಪೂರ್ತಿ ಕಪ್ಪಲ್ಲ
ಕಪ್ಪು ಎಂದಾಕ್ಷಣ, ಈ ಬ್ಲಾಕ್ ಬ್ಯೂಟಿಗಳು ತಲೆಯಿಂದ ಕಾಲವರೆಗೆ ಬರೀ ಕಪ್ಪು ಬಣ್ಣದ ಒನ್ ಪೀಸ್ ಅಥವಾ ಟೂ ಪೀಸ್ ಡ್ರೆಸ್ ತೊಟ್ಟಿರುತ್ತಾರೆ ಎಂದು ಯೋಚಿಸಬೇಡಿ. ಸಂಪೂರ್ಣವಾಗಿ ಕಪ್ಪು ಬಣ್ಣದ ಬಟ್ಟೆಯಿಂದ ಉಡುಗೆ ಹೊಲಿದಿದ್ದರೂ ಅದರಲ್ಲಿ ಸ್ವರ್ಣದ ಬಣ್ಣದ ಕಸೂತಿ, ಮುತ್ತು-ರತ್ನ-ಗಾಜು-ಕನ್ನಡಿ ಅಥವಾ ಇನ್ನಿತರ ಹೊಳೆಯುವಂಥ ವಸ್ತುಗಳು, ಬಣ್ಣಗಳ ಚಿತ್ತಾರ, ಪಟ್ಟಿ ಅಥವಾ ಚಿಕ್ಕ-ಪುಟ್ಟ ಚಿಹ್ನೆಗಳು, ಮುಂತಾದವುಗಳನ್ನು ಮೂಡಿಸಿರುವ ಉಡುಗೆಯಾಗಿರುತ್ತದೆ.
-ಅದಿತಿಮಾನಸ. ಟಿ. ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.