ಮನೆಯಲ್ಲಿಯೇ ಮೇಕಪ್ ಟಿಪ್ಸ್ ಹೇಳಿದ ನಟಿ ಮಾಧುರಿ ದೀಕ್ಷಿತ್
Team Udayavani, Apr 1, 2021, 8:02 PM IST
ಹಿಂದಿ ಚಿತ್ರರಂಗದಲ್ಲಿ 90ರ ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ದೋಚಿದ್ದ ಚೆಲುವೆ ಮಾಧುರಿ ದೀಕ್ಷಿತ್ ಇಂದಿಗೂ ಅದೇ ಚಾರ್ಮ್ ಕಾಯ್ದುಕೊಂಡು ಬಂದಿದ್ದಾರೆ.
ಎರಡು ಮಕ್ಕಳ ತಾಯಿ ಆಗಿರುವ ಮಾಧುರಿ ಅವರಿಗೆ 50 ವರ್ಷ ವಯಸ್ಸು ಎಂದರೆ ಅಷ್ಟು ಬೇಗನೆ ನಂಬಲು ಕಷ್ಟವಾಗುತ್ತದೆ. ಕಾರಣ ಅವರ ಮುಖದಲ್ಲಿರುವ ಗ್ಲಾಮರ್.
‘ಧಕ್ ಧಕ್ ಕರ್ನೆ ಲಗಾ’ ಎನ್ನುವ ಹಾಡಿಗೆ ಸೊಂಟ ಬಳುಕಿಸಿ ಹಿಂದಿ ಚಿತ್ರರಂಗದಲ್ಲಿ ಮೋಡಿ ಮಾಡಿದ ಮಾಧುರಿ ದೀಕ್ಷಿತ್ ಅವರದು ಎಂದಿಗೂ ಕಳೆಗುಂದದ ಚೆಲುವು ಎಂದರೆ ತಪ್ಪಾಗಲಾರದು. ಮೇಕಪ್ ಹಾಕದಿದ್ದರೂ ಅವರ ಮುಖ ಫಳಫಳ ಹೊಳೆಯುತ್ತದೆ. ಅವರ ಈ ಸೌಂದರ್ಯದ ಗುಟ್ಟು ಏನು ?
ಮೋಹಕ ತಾರೆ ಮಾಧುರಿ ಅವರು ಆಗಾಗ ತಮ್ಮ ಫಿಟ್ನೆಸ್ ಹಾಗೂ ಆರೋಗ್ಯದ ಗುಟ್ಟು ಹೇಳುತ್ತಿರುತ್ತಾರೆ. ಅವರು ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಅಭಿಮಾನಿಗಳಿಗೆ ಆರೋಗ್ಯ ಹಾಗೂ ಸೌಂದರ್ಯದ ಕುರಿತು ಕೆಲವು ಸಲಹೆಗಳನ್ನು ನೀಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸೊಂಪಾದ ತಲೆ ಕೂದಲು ಬೆಳೆಸುವುದು ಹೇಗೆ ಎಂದು ಹೇಳಿದ್ದರು. ಇದೀಗ ಮನೆಯಲ್ಲಿಯೇ ಸಿಂಪಲ್ ಬ್ಯುಟಿ ಟಿಪ್ಸ್ ಬಗ್ಗೆ ವಿಡಿಯೋ ಮಾಡಿದ್ದಾರೆ. ಇದರಲ್ಲಿ ಮನೆಯಲ್ಲಿಯೇ ಮುಖಕ್ಕೆ ಸರಳವಾಗಿ ಮೇಕಪ್ ಮಾಡಿಕೊಳ್ಳುವುದರ ಬಗ್ಗೆ ವಿವರಣೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.