ವಿವಿಧ ಶೈಲಿಯ ಮನಸೂರೆಗೊಳಿಸುವ ವಿನ್ಯಾಸದ ಕಾಲುಂಗುರ…
ಕಾಲುಂಗುರಗಳ ವಿನ್ಯಾಸವು ಕೂಡ ಕ್ಲಾಸಿಕ್‌ನಿಂದ ಟ್ರೆಂಡಿಗೆ ಬದಲಾಗಿದೆ ಎಂದರೆ ತಪ್ಪಿಲ್ಲ.
Team Udayavani, Dec 17, 2020, 1:43 PM IST
Representative Image
ಕಾಲುಂಗುರ ಧರಿಸುವ ಪರಿಕಲ್ಪನೆ ಭಾರತೀಯ ಮೂಲದಿಂದ ಹುಟ್ಟಿಕೊಂಡಿದ್ದು, ಮದುವೆಯಾದ ಹೆಣ್ಣು ಕಾಲುಂಗುರವನ್ನು ಧರಿಸುವುದು ಪದ್ಧತಿ. ಸಾಮಾನ್ಯವಾಗಿ ಬೆಳ್ಳಿಯ ಕಾಲುಂಗುರ ಯಥೇತ್ಛವಾಗಿ ಬಳಸುತ್ತಿದ್ದನ್ನು ಕಾಣಬಹುದಿತ್ತು. ಇತ್ತೀಚೆಗೆ ವಿವಿಧ ಶೈಲಿಯ ಮನಸೂರೆಗೊಳಿಸುವಂತಹ ವಿನ್ಯಾಸಗಳು ಲಭ್ಯವಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂನಂತಹ ಉಂಗುರಗಳನ್ನು ಬಳಸುವುದು ಇತ್ತೀಚಿನ ಶೈಲಿಯಾಗಿದ್ದು, ಕಾಲುಂಗುರದ ಬೇಡಿಕೆ ಹೆಚ್ಚಿದೆ. ಕಾಲುಂಗುರಗಳ ವಿನ್ಯಾಸವು ಕೂಡ ಕ್ಲಾಸಿಕ್‌ನಿಂದ ಟ್ರೆಂಡಿಗೆ ಬದಲಾಗಿದೆ ಎಂದರೆ ತಪ್ಪಿಲ್ಲ.
ಸರಳ ವಿನ್ಯಾಸದ ಗೋಲ್ಡ್ ರಿಂಗ್
ಇದು ಚಿನ್ನದಿಂದ ಮಾಡಿದ ಸರಳ ಮಾದರಿಯ ಕಾಲುಂಗುರಗಳ. ನಾಲ್ಕು ಚಿನ್ನದ ಎಲೆಗಳಿಂದ ಮಾಡಲ್ಪಟ್ಟಿದ್ದು, ಇದು ಅತ್ಯಾಧುನಿಕ ನೋಟವನ್ನು ಬೀರುತ್ತದೆ.
ದೈನಂದಿನ ಉಡುಗೆಗಾಗಿ
ಅಲೆಯ ವಿನ್ಯಾಸದ ಕಾಲುಂಗುರಗಳು ಸಾಮಾನ್ಯ ಮಾದರಿಯ ವಿನ್ಯಾಸವನ್ನು ಹೊಂದಿದ ಈ ಉಂಗುರಕ್ಕೆ ಅಲೆಯ ಮಾದರಿಯ ಶೈಲಿಯನ್ನು ನೀಡಿರುವುದರಿಂದ ಇದು ಕಾಲಿನ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ. ವಜ್ರದೊಂದಿಗೆ ಬೆಳ್ಳಿ ಮಾದರಿಯ ಕಾಲುಂಗುರ ಬೆಳ್ಳಿ ಮತ್ತು ವಜ್ರದಿಂದ ಮಾಡಿದ ಕಾಲುಂಗುರ ವಿಶೇಷ ನೋಟವನ್ನು ನೀಡುತ್ತದೆ ಮತ್ತು ವಿವಿಧ ಸಮಾರಂಭಗಳಿಗೆ ವಿಶೇಷ ಮೆರುಗು ನೀಡುತ್ತದೆ. ವಿವಿಧ ವಿನ್ಯಾಸದಲ್ಲಿ ಇದನ್ನು ತಯಾರಿಸಲಾಗುತ್ತದೆ.
ರಾಜಸ್ಥಾನಿ ಶೈಲಿಯ ಕಾಲುಂಗುರ
ಈ ಮಾದರಿಯ ಕಾಲುಂಗುರಗಳು ರಾಯಲ್ ನೋಟವನ್ನು ನೀಡುತ್ತದೆ. ಸರಳ ಮಾದರಿಯ ಬಂಗಾರದಿಂದ ಮಾಡಲ್ಪಟ್ಟ ಈ ಉಂಗುರದಲ್ಲಿ ಹೂವಿನ ಮಾದರಿಯನ್ನು ಕಾಣಬಹುದು. ಇದು ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಮತ್ತು ಲೆಹೆಂಗಾ ಧರಿಸಿದಾಗ ಇನ್ನಷ್ಟು ಆಕರ್ಷಕವಾಗಿ ಕಾಣುತ್ತದೆ.
ಕಪ್ಪು ಕಲ್ಲಿನ ಬೆಳ್ಳಿಯ ಕಾಲುಂಗುರ
ಬೆಳ್ಳಿಯ ಉಂಗುರದೊಂದಿಗೆ ಕಪ್ಪು ಬಣ್ಣದ ಕಲ್ಲಿನ ಮಾದಿರಿ ತುಂಬಾ ಆಕರ್ಷಕವಾಗಿರುತ್ತದೆ.
ಬೆಳ್ಳಿಯ ತ್ರಿವಳಿ ಕಾಲುಂಗುರ
ವಧುವಿಗೆ ವಿಭಿನ್ನ ಮತ್ತು ಆಕರ್ಷಕ ನೋಟವನ್ನು ಈ ವಿನ್ಯಾಸದ ಉಂಗುರಗಳು ನೀಡುತ್ತದೆ. ಇವುಗಳು ಮೂರು ಬೆರಳುಗಳನ್ನು ಅಲಂಕರಿಸುವುದರಿಂದ ಇನ್ನಷ್ಟು ಚಂದವಾಗುವಂತೆ ಮಾಡುತ್ತದೆ.
ಸಾಂಪ್ರದಾಯಿಕ ದಕ್ಷಿಣ ಭಾರತದ ಕಾಲುಂಗುರ: ಬೆಳ್ಳಿಯಿಂದ ಮಾಡಿದ ಸಾಂಪ್ರದಾಯಿಕ ಮಾದರಿಯ ಕಾಲುಂಗುರ ಹೆಣ್ಣಿಗೆ ಇನ್ನಷ್ಟು ಅಂದವನ್ನು ನೀಡುತ್ತದೆ.
ಆಕರ್ಷಕವಾದ ಮುತ್ತಿನಂಥ ಕಾಲುಂಗುರ: ಇದನ್ನು ವಿನೂತನ ಶೈಲಿಯ ಬಿಳಿ ಮತ್ತುಗಳಿಂದ ತಯಾರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kottigehara:ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ನೆಲಸಮ,ಕೆಲಸಕ್ಕೆ ಹೋಗಿದ್ದರಿಂದ ಮನೆಮಂದಿ ಪಾರು
TestTeam; ಆಸ್ಟ್ರೇಲಿಯಾ ಪ್ರಕಟಿಸಿದ ವರ್ಷದ ಟೆಸ್ಟ್ ತಂಡಕ್ಕೆ ಭಾರತೀಯ ನಾಯಕ; ರೋಹಿತ್ ಅಲ್ಲ
Koratagere: ರಸ್ತೆಯಲ್ಲಿ ಚರಂಡಿ ನೀರು; ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಸಂಸ್ಕೃತ ಕಾಲೇಜಿನ 120ರ ಸಂಭ್ರಮದಲ್ಲಿ ಹಳೆ ವಿದ್ಯಾರ್ಥಿಗಳು ಒಟ್ಟಾಗಲಿ: ವಿ| ಪ್ರಸನ್ನಾಚಾರ್ಯ
Rabakavi: ಬ್ರಹ್ಮಾನಂದ ಉತ್ಸವ; ಗಮನ ಸೆಳೆದ ರೊಟ್ಟಿ ಜಾತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.