ಡೈನಮಿಕ್‌ ಡೆನಿಮ್‌

ಹಳೆಯದೂ ಈಗ ಹೊಸತೇ...

Team Udayavani, Nov 7, 2020, 1:05 PM IST

s-5

ಹಳೆ ಕಾಲದ ಫ್ಯಾಷನ್‌ಗಳು ರೆಟ್ರೋ ಹೆಸರಿನಲ್ಲಿ, ಅಲ್ಲಲ್ಲಿ ಚೂರು ಮೇಕ್‌ ಓವರ್‌ ಪಡೆದು ಮತ್ತೂಮ್ಮೆ ಟ್ರೆಂಡ್‌ ಆಗುವುದು ಗೊತ್ತೇ ಇದೆ. ಅಂಥ ಉಡುಗೆಗಳಲ್ಲಿ ಡೆನಿಮ್‌ ಸ್ಕರ್ಟ್‌, ಅಂದರೆ ಜೀನ್ಸ್ ಲಂಗ ಕೂಡ ಒಂದು. ಕಪ್ಪು-ಬಿಳುಪು ಸಿನಿಮಾದಿಂದ ಹಿಡಿದು, ಇಂದಿನ ಬಣ್ಣದ ಸಿನಿಮಾದವರೆಗೂ ನಟಿಯರ ಮೆಚ್ಚಿನ ಉಡುಗೆಗಳಲ್ಲಿ ಮಿನಿ ಡೆನಿಮ್‌ ಸ್ಕರ್ಟ್‌ಗೆ ಜಾಗವಿದೆ.

90ರ ದಶಕದಲ್ಲಿ ಹದಿಹರೆಯದ ಹುಡುಗಿಯರೆಲ್ಲಾ ಮುಗಿ ಬಿದ್ದು ಖರೀದಿಸುತ್ತಿದ್ದ ಬಟ್ಟೆಯೊಂದಿತ್ತು. ಅದುವೇ, ಡೆನಿಮ್‌ ಸ್ಕರ್ಟ್‌. ಈ ಸ್ಕರ್ಟ್‌ ಮತ್ತೆ ಟ್ರೆಂಡ್‌ ಆಗಿ, ಇಂದಿನ ಯುವತಿಯರ ವಾರ್ಡ್‌ರೋಬ್‌ ಸೇರಿದೆ. ನೋಡಲು ಫ್ಯಾಷನೆಬಲ್‌ ಅನ್ನುವುದಷ್ಟೇ ಅಲ್ಲದೆ, ಧರಿಸಲು ಬಹಳ ಆರಾಮ ಅನ್ನುವುದು ಕೂಡಾ ಈ ಉಡುಗೆ ಟ್ರೆಂಡ್‌ ಆಗಲು ಕಾರಣ.

ಹಳೆ ಸ್ಟೈಲು, ಹೊಸ ಮೆರುಗು
ಡೆನಿಮ್‌ ಸ್ಕರ್ಟ್‌ಗಳ ಮೇಲೆ ದೊಡ್ಡ ಗಾತ್ರದ ಜೇಬು, ಆ ಜೇಬಿನ ಮೇಲೆ ದೊಡ್ಡ ಬಟನ್‌ (ಗುಂಡಿ) ಅಥವಾ ಜೇಬಿನ ಸುತ್ತ ಔಟ್‌ ಲೈನ್‌ನಂತೆ ಹೊಲಿದ ಕಸೂತಿ, ರಿಬ್ಬನ್‌ ಮತ್ತು ಇತರ ಅಲಂಕಾರ…ಹೀಗೆ ಹಳೆಯ ಸ್ಟೈಲ್‌ಗೆ ಹೊಸ ಮೆರಗು ನೀಡಬಹುದು.

ತಿಳಿ ಅಥವಾ ಗಾಢ ನೀಲಿ ಬಣ್ಣದ ಡೆನಿಮ್‌ ಸ್ಕರ್ಟ್‌ನಲ್ಲೂ ಫ್ರಿಲ್‌, ಮೆಟಾಲಿಕ್‌ ಪ್ರಿಂಟ್‌, ಪೋಲ್ಕಾ ಡಾಟ್ಸ್‌, ಅನಿಮಲ್‌ ಪ್ರಿಂಟ್‌, ಚೆಕ್ಸ್, ಆ್ಯಸಿಡ್‌ ವಾಶ್ಡ್, ಸೈಡ್‌ ಸ್ಲಿಟ್‌, ನ್ಪೋರ್ಟ್ಸ್, ನಿಯಾನ್‌ ಬಣ್ಣ, ಲೆದರ್‌ (ಚರ್ಮ) ಪ್ಯಾಚ್‌ಗಳು, ಸ್ಟ್ರೈಪ…, ಬಟರ್‌ಫ್ಲೈ ಪ್ರಿಂಟ್‌, ಜಾಮೆಟ್ರಿಕ್‌ ಪ್ರಿಂಟ್‌, ಫ್ಲೋರಲ್‌ ಪ್ರಿಂಟ್‌, ರೇನ್‌ಬೋ, ಲೇಯರ್‌, ಡಿವೈಡೆಡ್‌, ಕಾರ್ಗೋ, ರಿಫ್ಡ್, ಲೇಸ್‌ ವರ್ಕ್‌, ಕ್ರೋಶಾ, ವುಲನ್‌ (ಉಣ್ಣೆಯ) ಡಿಸೈನ್‌, ಸಿಲ್ಕ್ ಪಾಕೆಟ್‌, ಟೈ- ಡೈ ಪ್ರಿಂಟ್‌… ಹೀಗೆ ಊಹೆಗಿಂತಲೂ ಹೆಚ್ಚು ಆಯ್ಕೆಗಳು ಲಭ್ಯ. ಬಟ್ಟೆ ಅಂಗಡಿಗಳಲ್ಲಿ ಸಿಗುವುದಕ್ಕಿಂತ ಹೆಚ್ಚೆಚ್ಚು ಆಯ್ಕೆಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ.

ಎಲ್ಲ ಕಡೆಗೂ ಸಲ್ಲದು
ಡೆನಿಮ್‌ನಲ್ಲಿ ಚಂದ ಕಾಣಿಸುತ್ತೇನೆ ಅಂತ, ಎಲ್ಲ ಕಡೆಗೂ ಅದನ್ನು ತೊಟ್ಟುಕೊಂಡು ಹೋಗಲು ಸಾಧ್ಯವಾಗದು. ಹಬ್ಬ ಹರಿದಿನಗಳು, ಮದುವೆ ಮುಂಜಿಯಂಥ ಕಾರ್ಯಕ್ರಮಗಳಿಗೆ ಡೆನಿಮ್‌ ಸ್ಕರ್ಟ್‌ ತೊಡಲು ಸಾಧ್ಯವಿಲ್ಲ. ಪಾರ್ಟಿ, ಶಾಪಿಂಗ್‌, ಮಾಲ…, ಮೂವಿ, ವೆಕೇಶನ್‌, ಕಾಲೇಜು ಫೆಸ್ಟ್ ನಂಥ ಇತರ ಕ್ಯಾಶುವಲ್‌ ಇವೆಂಟ್‌ಗಳಿಗೆ ಕೂಲಾಗಿ ಧರಿಸಬಹುದು.

ಸ್ಕರ್ಟ್‌-ಸ್ನೀಕರ್ಸ್‌ ಜೋಡಿ
ಡೆನಿಮ್‌ ಸ್ಕರ್ಟ್‌ ಜೊತೆ ಸ್ನೀಕರ್ಸ್‌ (ಶೂಗಳನ್ನು) ಮ್ಯಾಚ್‌ ಮಾಡಿ. ಗಾಢ ಬಣ್ಣದ ಸ್ಕರ್ಟ್‌ ಜೊತೆ ತಿಳಿ ಬಣ್ಣದ ಸ್ನೀಕರ್ಸ್‌, ತಿಳಿ ಬಣ್ಣದ ಲಂಗದ ಜೊತೆ ತಿಳಿ ಅಥವಾ ಗಾಢ ಬಣ್ಣದ ಸ್ನೀಕರ್ಸ್‌ ಎರಡನ್ನೂ ತೊಡಬಹುದು. ಹತ್ತಿಯಿಂದ ಮಾಡಲ್ಪಟ್ಟ ಈ ಉಡುಗೆ ಸೆಖೆಗಾಲದಲ್ಲಿ ತಂಪಾಗಿ, ಚಳಿಗಾಲದಲ್ಲಿ ನಮ್ಮನ್ನು ಸ್ವಲ್ಪ ಮಟ್ಟಿಗೆ ಬೆಚ್ಚಗೆ ಇರಿಸುತ್ತದೆ. ಹಾಗಾಗಿ, ನಿಮ್ಮ ಕಪಾಟಿನಲ್ಲಿ ಡೆನಿಮ್‌ ಸ್ಕರ್ಟ್‌ಗೆ ಜಾಗ ಮಾಡಲು ಮರೆಯಬೇಡಿ.

ನೀವೇ ಡಿಸೈನರ್‌ ಆಗಿ
ನಿಮ್ಮ ಜೀನ್ಸ್‌ ಪ್ಯಾಂಟ್‌ನ ಹೊಲಿಗೆ ಬಿಚ್ಚಿ, ನಿಮ್ಮಿಷ್ಟದಂತೆ ಡೆನಿಮ್‌ ಸ್ಕರ್ಟ್‌ ಅನ್ನು ಹೊಲಿಯಬಹುದು. ಯೂಟ್ಯೂಬ್‌ನಲ್ಲಿ ಈ ಕುರಿತು ಹಲವಾರು ವಿಡಿಯೋಗಳಿವೆ. ಹೊಲಿಗೆ ಯಂತ್ರ ಅಥವಾ ಸೂಪರ್‌ ಗ್ಲೂ (ಗೋಂದು) ಬಳಸಿ ನೀವೇ ಡಿಸೈನರ್‌ಗಳಾಗಿ. ಫ್ಯಾಬ್ರಿಕ್‌ ಗ್ಲೂ ಬಳಸುವುದರಿಂದ ಬಟ್ಟೆಗೆ, ಅದರ ಬಣ್ಣಕ್ಕೆ, ಡಿಸೈನ್‌ ಅಥವಾ ಅದರ ಮೇಲಿರುವ ಕಸೂತಿಗೆ ಏನೂ ಹಾನಿ ಆಗುವುದಿಲ್ಲ. ಡೆನಿಮ್‌ ಸ್ಕರ್ಟ್‌ ಅನ್ನು ಒಗೆದರೂ ಗೋಂದು ಬಿಡುವುದಿಲ್ಲ. ಡೆನಿಮ್‌ ಲಂಗದ ಮೇಲೆ ಬೇಕಾದಂತೆ ಅಲಂಕಾರ ಕೂಡಾ ಮಾಡಬಹುದು.

ಡೆನಿಮ್‌ ವೈವಿಧ್ಯ
ಡೆನಿಮ್‌ ಲಂಗ ಅಂದ್ರೆ ಕೇವಲ ಮಿನಿ ಸ್ಕರ್ಟ್‌ ಅಷ್ಟೇ ಅಲ್ಲ. ಪ್ಯಾಂಟ್‌, ಮುಕ್ಕಾಲು ಪ್ಯಾಂಟ್‌ನಷ್ಟು ಉದ್ದದ ಲಂಗವೂ ಆಗಿರಬಹುದು ಅಥವಾ ಶಾರ್ಟ್ಸ್ನಂತೆ ಕಾಣುವ ಲಂಗವೂ ಆಗಿರಬಹುದು. ಇದರಲ್ಲೂ ಏ-ಲೈನ್‌, ಪೆನ್ಸಿಲ್‌ ಸ್ಕರ್ಟ್‌, ಫಿಶ್‌ ಕಟ್‌, ಬೆಲ್‌ ಬಾಟಮ್‌, ಪ್ಲೀಟೆಡ್‌, ಲೋ ವೇಸ್ಟ್, ಹೈ ವೇಸ್ಟ್, ಫ್ರಂಟ್‌ ಸ್ಲಿಟ್‌, ಲಾಂಗ್‌ ಬಾಟಮ… ಹೀಗೆ ನಾನಾ ಆಯ್ಕೆಗಳಿವೆ. ದೇಹದ ಆಕಾರ, ಎತ್ತರಕ್ಕೆ ತಕ್ಕಂತೆ ಇವುಗಳನ್ನು ಆಯ್ಕೆ ಮಾಡಿಕೊಳ್ಳಿ. ಡೆನಿಮ್‌ ಲಂಗದ ಜೊತೆ ಡೆನಿಮ್‌ ಅಂಗಿ, ಬಿಳಿ ಅಂಗಿ ತೊಟ್ಟರೆ ಸ್ಟೈಲಿಶ್‌ ಲುಕ್‌ ಸಿಗುತ್ತದೆ. ಈ ಲಂಗದ ಅಂದ ಹೆಚ್ಚಿಸಲು ಸ್ಟೈಲಿಶ್‌ ಬೆಲ್ಟ… (ಸೊಂಟ ಪಟ್ಟಿ) ಧರಿಸಿ!

– ಅದಿತಿಮಾನಸ ಟಿ. ಎಸ್‌.

ಟಾಪ್ ನ್ಯೂಸ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.