ಫ್ಯಾಶನ್ ಜಮಾನಾದ ಮಾಡೆಲ್ ನೀವಾಗಿ
Team Udayavani, Sep 21, 2020, 1:04 PM IST
ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ ಹೇಳಿ?, ಸೌಂದರ್ಯ ಎನ್ನುವುದು ಹುಟ್ಟುವಾಗಲೇ ಪಡೆದುಕೊಂಡು ಬಂದವರ ಎನ್ನುವವರೂ ಇದ್ದಾರೆ. ಈಗಿನ ಫ್ಯಾಶನ್ ಜಮಾನದಲ್ಲಿ ಸೌಂದರ್ಯಕ್ಕೆ ಪ್ರತ್ಯೇಕ ಮನ್ನಣೆ ಹಾಗೂ ಅವಕಾಶಗಳು ಸಾಕಷ್ಟಿವೆ. ಹೌದು, ಈ ಸೌಂದರ್ಯವನ್ನು ಬಿಚ್ಚಿಡುವ ಒಂದು ಕಲೆ ಅಥವಾ ವೃತ್ತಿ ಎಂದರೆ ಅದು ಮಾಡೆಲಿಂಗ್.
ದೇಹ ಸೌಂದರ್ಯದ ಜತೆಗೆ ಬಾಡಿಲ್ಯಾಂಗ್ವೇಜ್, ಫಿಸಿಕಲ್ ಫಿಟ್‌ನೆಸ್, ಹಾವ-ಭಾವ, ನವರಸಗಳ ನಟನೆ, ರ್‍ಯಾಂಪ್‌ವಾಕ್, ಫೋಟೊಜೆನಿಕ್ ಫೇಸ್ ಮೂಲಕ ಫೋಟೋ ಅಥವಾ ಕೆಮರಾಗಳ ಮುಖಾಂತರ ಭಾವನೆಗಳಿಂದ ಇನ್ವಾಲ್ವ್ ಆಗಿ ಕಾನ್ಸೆಪ್ಟ್ಗಳಿಗೆ ಜೀವ ತುಂಬುವ ಕೆಲಸ ಮಾಡೆಲಿಂಗ್.
ಮೊದಲು ಸಣ್ಣ ಸಣ್ಣ ಆ್ಯಡ್‌ಗಳಲ್ಲಿ ತಮ್ಮ ಮುಖ ಪರಿಚಯದಿಂದ ಜನರಿಗೆ ಹತ್ತಿರವಾಗಿ, ಕ್ರಮೇಣ ದೊಡ್ಡ ಆ್ಯಡ್ ಏಜೆನ್ಸಿಗಳಲ್ಲಿ ಕೆಲಸವನ್ನು ಮಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದ ಮಾಡೆಲಿಂಗ್ ಸಂಪ್ರದಾಯ. ಮಾಡೆಲ್‌ಗೆ ಭಾಷೆ, ಸೌಂದರ್ಯ, ನಟನೆ, ವೈಯ್ನಾರ, ಸ್ಟೈಲಿಶ್ ಲುಕ್ ಆ್ಯಂಡ್ ವಾಕ್‌ಗಳ ಅರಿವು ಅತ್ಯಗತ್ಯ. ತನ್ನ ದೇಹ ಸೌಂದರ್ಯದ ಮುಖೇನ ನೋಡುಗರ ಮನಸ್ಸನ್ನು ಕದಿಯುವುದು ಇವರ ಮುಖ್ಯ ಉದ್ದೇಶವಾಗಿರುತ್ತದೆ. ಇದರ ಜತೆಗೆ ಆ ಆ್ಯಡ್‌ನ ಹೆಸರು ಅಚ್ಚಳಿಯದೆ ಉಳಿಯುವುದು ಸಹಾ ಇದೇ ರೀತಿ.
ಇಲ್ಲಿ ಸಹಜ ಸೌಂದ ರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಹಾಗಾಗಿ ದೊಡ್ಡ ಆ್ಯಡ್ ಏಜೆನ್ಸಿ, ಫ್ಯಾಷನ್ ಹೌಸ್, ಡಿಸೈನರ್, ಫ್ಯಾಶನ್ ಶೋಗಳಲ್ಲಿ, ಡ್ರೆಸ್ ಮೆಟೀರಿಯಲ್ಸ್, ಜುವೆಲ್ಲರಿಸ್ ಆ್ಯಡ್‌ಗಳಲ್ಲಿ ಅಭಿನಯಿಸುವ ಅವಕಾಶಗಳು ಸಾಕಷ್ಟಿವೆ. ಹೀಗೆ ಮುಂದೆ ಕಂಪೆನಿಗಳ ಬ್ರ್ಯಾಂಡ್ ಅಂಬಾಸಿಡರ್‌ಗಳೂ ಆಗಬಹುದು. ಇದಕ್ಕೆ ಫ್ಯಾಶನ್ ಹೌಸ್‌ಗಳಲ್ಲಿ ಕೆಲವು ಪ್ರ್ಯಾಕ್ಟೀಸ್‌ಗಳನ್ನು ನೀಡುತ್ತಾರೆ. ಮಾತ್ರವಲ್ಲದೆ ಆಸಕ್ತಿ ಇಲ್ಲಿ ಬಹು ಮುಖ್ಯ. ಇಲ್ಲಿ ಗಂಡು ಹೆಣ್ಣು ಇಬ್ಬರಿಗೂ ಮಾರ್ಕೆಟ್ ಇದೆ.
ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರುವವರು ವಿದ್ಯಾರ್ಥಿ ಜೀವನದಲ್ಲೇ ಇದಕ್ಕೆ ಸೂಕ್ತ ತಯಾರಿ ನಡೆಸುವುದು ಅತೀ ಅಗತ್ಯ. ಸ್ಥಳೀಯ ಸಂಸ್ಥೆಗಳು ನಡೆಸುವ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಳ್ಳಬಹುದು. ಇದನ್ನೇ ಮುಂದೆ ಪಾರ್ಟ್ ಟೈಮ್, ಫುಲ್ ಟೈಮ್ ವೃತ್ತಿಯನ್ನಾಗಿಯೂ ಮಾಡಬಹುದು.
ಫ್ಯಾಶನ್ ಜಗತ್ತು ಎಲ್ಲವನ್ನೂ ತೆರೆದಿಡುವಂತಹದ್ದು. ಇದರಿಂದ ಆ್ಯಡ್‌ಗಳೇ ಅಥವಾ ಮಾರ್ಕೆಟಿಂಗ್ ಸೆಕ್ಟರ್ ಗಳು ಹೆಚ್ಚು ವಿಸ್ತರಿಸುತ್ತಿರುವುದರಿಂದ ಇದೊಂದು ಕಾರ್ಪೊರೇಟ್ ರೂಪವನ್ನು ಪಡೆದಿದೆ. ಹಾಗಾಗಿ ಉತ್ತಮ ಸಂಭಾವನೆಯನ್ನು ಇಲ್ಲಿ ಪಡೆಯಬಹುದು.
ಚಿತ್ರರಂಗಗಳಲ್ಲಿ ಅವಕಾಶ
ಫ್ಯಾಶನ್ ಶೋಗಳು, ಆ್ಯಡ್‌ಗಳಲ್ಲಿ, ಟಿ.ವಿ. ಜಾಹೀರಾತುಗಳಲ್ಲಿ ಸುಂದರ ಮಹಿಳೆಯರು, ಪುರುಷರನ್ನು ವಿಭಿನ್ನ ಕಾನ್ಸೆಪ್ಟ್ಗಳಿಂದ ಪರದೆ ಮುಂದೆ ಬರುತ್ತಾರೆ. ಇದರಿಂದ ಮುಂದೆ ಒಳ್ಳೆಯ ಹೆಸರುಗಳಿಸುತ್ತಾರೆ. ಹೀಗೆ ಅನೇಕ ಮಂದಿ ಮಾಡೆಲಿಂಗ್ ಆಗಿ ಮುಂದೆ ಬಾಲಿವುಡ್, ಹಾಲಿವುಡ್ ಹಾಗೂ ಚಿತ್ರರಂಗಕ್ಕೆ ಹೊಕ್ಕವರು ಸಾಕಷ್ಟು ಮಂದಿ ಇದ್ದಾರೆ. ಅಲ್ಲದೆ ಮ್ಯಾಗಜಿನ್, ನ್ಯೂಸ್ ಪೇಪರ್ ಎಲ್ಲದರ ಮುಖಪುಟದಲ್ಲೂ ಬರುವ ಅವಕಾಶಗಳಿವೆ.
ಮಾಡಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಇರುವವರು ವಿದ್ಯಾರ್ಥಿ ಜೀವನದಲ್ಲೇ ಇದಕ್ಕೆ ಸೂಕ್ತ ತಯಾರಿ ನಡೆಸುವುದು ಅತೀ ಅಗತ್ಯ. ಸ್ಥಳೀಯ ಸಂಸ್ಥೆಗಳು ನಡೆಸುವ ಫ್ಯಾಶನ್ ಶೋಗಳಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಳ್ಳಬಹುದು. ಇದನ್ನೇ ಮುಂದೆ ಪಾರ್ಟ್ ಟೈಮ್, ಫುಲ್ ಟೈಮ್ ವೃತ್ತಿಯನ್ನಾಗಿಯೂ ಮಾಡಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.