ಫ್ಯಾಷನ್ ಲೋಕ…ಹೆಂಗಳೆಯರ ಮನಸೂರೆಗೊಳ್ಳುವ ವೈವಿಧ್ಯಮಯ ಹೇರ್ ಕ್ಲಿಪ್
ಕ್ಲಿಪ್‌ಗ್ಳ ಜಮಾನಾ ಅಲ್ಲಿಗೇ ಮುಗಿಯಿತು ಅಂತ ಹಲವರು ಭಾವಿಸಿರಬಹುದು.
Team Udayavani, Dec 10, 2020, 12:35 PM IST
Representative Image
ಹೈಸ್ಕೂಲಿಗೆ ಹೋಗುವಾಗ ನೀಟಾಗಿ ಎರಡು ಜಡೆ ಹಾಕಿಕೊಂಡು, ಮೇಲೆರಡು ಹೇರ್ ಕ್ಲಿಪ್ ಸಿಕ್ಕಿಸಿಕೊಂಡು ಹೋಗಿದ್ದು, ಜಾತ್ರೆಯಲ್ಲಿ ಬಣ್ಣ ಬಣ್ಣದ ಕ್ಲಿಪ್‌ಗ್ಳನ್ನು ಕಂಡಾಗ ಅದು ಬೇಕೇಬೇಕೆಂದು ಹಠ ಹಿಡಿದಿದ್ದು, ಫ್ರೆಂಡ್ ಹತ್ರ ಎಕ್ಸ್‌ಟ್ರಾ ಕ್ಲಿಪ್ ಇದ್ರೆ ನನಗೊಂದು ಕೊಡು ಅಂತ ಸಂಕೋಚ ಬಿಟ್ಟು ಕೇಳಿದ್ದು… ಈ ರೀತಿ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾ, ಕ್ಲಿಪ್‌ಗ್ಳ ಜಮಾನಾ ಅಲ್ಲಿಗೇ ಮುಗಿಯಿತು ಅಂತ ಹಲವರು ಭಾವಿಸಿರಬಹುದು. ಆದರೆ, ಹೇರ್ ಆಕ್ಸೆಸರೀಸ್ ಈಗ ಮಕ್ಕಳಿಗಷ್ಟೇ ಎಂದು ಹೇಳುವಂತಿಲ್ಲ. ಅದೀಗ ಇಡೀ ಫ್ಯಾಷನ್ ಲೋಕವನ್ನೇ ಆಳುತ್ತಿದೆ. ಫ್ಯಾಷನ್ ಪ್ರಿಯ ಆಧುನಿಕ ಮಹಿಳೆಯರ ತಲೆಯಲ್ಲೂ ವಿರಾಜಮಾನವಾಗಿದೆ. ಮಾರುಕಟ್ಟೆಯಲ್ಲೀಗ ವಿವಿಧ ಬಗೆಯ ಹೇರ್ ಕ್ಲಿಪ್‌ಗ್ಳು ಹೆಂಗಳೆಯರ ಮನಸೂರೆ ಮಾಡುತ್ತಿವೆ. ಅಂಥ ಟ್ರೆಂಡಿ ಕ್ಲಿಪ್‌ಗ್ಳ ಬಗ್ಗೆ ಇಲ್ಲಿದೆ ಮಾಹಿತಿ.
ಬಟರ್‌ಫ್ಲೈ ಕ್ಲಿಪ್
ಚಿಟ್ಟೆಯೊಂದು ಹಾರಿ ಬಂದು ಕೇಶರಾಶಿಯ ಮೇಲೆ ಕುಳಿತರೆ ಹೇಗಿರುತ್ತದೋ, ಅಂಥದ್ದೇ ಸೊಬಗು ನೀಡುವ ಕ್ಲಿಪ್ ಇದು. ಬಣ್ಣ ಬಣ್ಣದ ಚಿಟ್ಟೆಗಳ ಆಕಾರದಲ್ಲೇ ಇರುವ ಈ ಕ್ಲಿಪ್‌ಗ್ಳು ಭಿನ್ನ ಭಿನ್ನ ಆಕಾರದಲ್ಲೂ ದೊರಕುತ್ತವೆ. ಶಾರ್ಟ್ ಹೇರ್‌ನವರು ಸ್ವಲ್ಪವೇ ಕೂದಲನ್ನು ಗೊಂಚಲಂತೆ ಮಾಡಿ ಮಧ್ಯಕ್ಕೆ ಕ್ಲಿಪ್ ಹಾಕಿ, ಉಳಿದ ಕೂದಲನ್ನು ಹಾಗೇ ಬಿಟ್ಟರೆ ಡಿಫರೆಂಟ್ ಲುಕ್ ಸಿಗುತ್ತದೆ. ಸೈಡ್ ಕ್ಲಿಪ್‌ನಂತೆ ಒಂದೇ ಬಟರ್‌ಫ್ಲೈ ಕ್ಲಿಪ್ ಸಿಕ್ಕಿಸಿಕೊಂಡರೂ ವಿಶೇಷವಾಗಿ ಕಾಣಬಹುದು.
ಇದನ್ನೂ ಓದಿ:ಯುವತಿಯರ ಫ್ಯಾಶನ್ ಲೋಕದಲ್ಲಿನ ಬದಲಾವಣೆ… ಪ್ಯಾಂಟ್ ಸಾರಿ
ಟಾರ್ಟೆಸ್ ಶೆಲ್ ಬ್ಯಾರೆಟ್ಸ್
ಇದು ಸಾಂಪ್ರದಾಯಿಕ ಕ್ಲಿಪ್. ಹಿಂದಿನಿಂದಲೂ ಹೆಂಗಳೆಯರ ತಲೆಯಲ್ಲಿ ಇಲಾಸ್ಟಿಕ್ ರಬ್ಬರ್ ಬ್ಯಾಂಡ್ ಜೊತೆಗೆ ಕಂಡುಬರುತ್ತಿದ್ದುದು ಇಂಥ ಕ್ಲಿಪ್‌ಗ್ಳು. ಇವುಗಳು ಈಗ ಫ್ಯಾಷನೆಬಲ್ ಆಕ್ಸೆಸರೀಸ್ ಆಗಿಬಿಟ್ಟಿವೆ. ಹೇರ್ ಸ್ಟೈಲ್ ಮಾಡಲು ಸಮಯವಿಲ್ಲ ಎಂದಾಗ ಪಟ್ಟನೆ ಒಂದು ಟಾರ್ಟೆçಸ್ ಶೆಲ್ ಬ್ಯಾರೆಟ್ಸ್ ಅನ್ನು ಸಿಕ್ಕಿಸಿಕೊಂಡು, ಕೂದಲನ್ನು ಹಿಂಭಾಗಕ್ಕೆ ಮಡಿಚಿಕೊಂಡರೆ ಸೂಪರ್ ಲುಕ್ ನೀಡುತ್ತದೆ.
ಕ್ರೊಕಡೈಲ್ ಕ್ಲಿಪ್
ಮೊಸಳೆ ಬಾಯಿ ತೆರೆದರೆ ಹೇಗಿರುತ್ತದೋ ಪಕ್ಕಾ ಅದೇ ರೀತಿ ಕಾಣುವುದರಿಂದ ಇದಕ್ಕೆ ಕ್ರೊಕಡೈಲ್ ಕ್ಲಿಪ್ ಎಂದು ಹೆಸರು. ಈ ಕ್ಲಿಪ್ ಮಧ್ಯೆ ಹಲ್ಲುಗಳಿರುವ ಕಾರಣ ಕೂದಲು ಹೆಚ್ಚಿದ್ದರೂ, ಕಡಿಮೆಯಿದ್ದರೂ ಅದನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇರುತ್ತದೆ. ಎರಡೂ ಬದಿಯಿಂದ; ಅಂದರೆ ಬಲ ಹಾಗೂ ಎಡ ಕಿವಿಯ ಬದಿಯಿಂದ ಕೂದಲನ್ನು ನೆತ್ತಿಯ ಭಾಗಕ್ಕೆ ತಂದು ಈ ಕ್ಲಿಪ್ ಸಿಕ್ಕಿಸಿದರೆ, ಹೆಚ್ಚು ಆಕರ್ಷಣೀಯವಾಗಿ ಕಾಣುತ್ತದೆ. ಸ್ಟೆಪ್ ಕಟ್ ಮಾಡಿಸಿದವರಿಗೆ ಕ್ರೊಕಡೈಲ್ ಕ್ಲಿಪ್ ಸರಿಯಾಗಿ ಸೂಟ್ ಆಗುತ್ತದೆ.
ಇದನ್ನೂ ಓದಿ:ಫ್ಯಾಶನ್ ಲೋಕದಲ್ಲಿ ರಾರಾಜಿಸುತ್ತಿರುವ ಜಾಕೆಟ್ ಸಾರಿ…
ಫೆದರ್ ಕ್ಲಿಪ್
ಕಿವಿಯೋಲೆಗಳಂತೆಯೇ ಈಗೀಗ ಕ್ಲಿಪ್‌ಗ್ಳಿಗೂ ಫೆದರ್ ಟಚ್ ಸಿಕ್ಕಿದೆ. ಹೇರ್ ಕ್ಲಿಪ್‌ಗ್ಳ ಮೇಲ್ಭಾಗದಲ್ಲಿ ನವಿಲುಗರಿ, ರೆಕ್ಕೆ ಪುಕ್ಕಗಳನ್ನು ಅಳವಡಿಸಿರಲಾಗುತ್ತದೆ. ತಲೆಯ ಒಂದು ಬದಿಗೆ ಫೆದರ್ ಕ್ಲಿಪ್ ಸಿಕ್ಕಿಸಿಕೊಂಡು, ಕೂದಲನ್ನು ಫ್ರೀಯಾಗಿ ಬಿಟ್ಟರೆ ಆಕರ್ಷಕವಾಗಿ ಕಾಣುತ್ತದೆ. ಉಡುಗೆಗೆ ಮ್ಯಾಚ್ ಆಗುವ ಬಣ್ಣದ ಫೆದರ್ ಅನ್ನೇ ಆಯ್ಕೆ ಮಾಡಿದ್ರೆ ಇನ್ನೂ ಉತ್ತಮ.
ಝಿಗ್ ಝಾಗ್
ಮದುವೆ ಸಮಾರಂಭಕ್ಕೋ, ಪಾರ್ಟಿಗೋ ಹೋಗುವಾಗ; ಅಯ್ಯೋ, ಕೂದಲು ನುಣುಪಾಗಿಲ್ಲ, ನೀಳವಾಗಿಲ್ಲ ಎನ್ನುವ ಚಿಂತೆಯನ್ನೆಲ್ಲ ಮರೆತೇಬಿಡುವಂತೆ, ಕೂದಲ ಶೈಲಿ ಹೇಗಿದ್ದರೂ, ಅದರಲ್ಲಿ ವಿಶಿಷ್ಟ ಸೊಬಗನ್ನು ಮೂಡಿಸಬಲ್ಲಂಥ ಹೇರ್ ಬ್ಯಾಂಡ್ ಇದು. ಕೂದಲನ್ನು ಹಾಗೇ ಬಾಚಿಕೊಂಡು ಝಿಗ್ ಝಾಗ್ ಹೇರ್ ಬ್ಯಾಂಡ್ ಹಾಕಿ, ಪಫ್ ಮಾಡಿಕೊಂಡರೆ, ಕ್ಷಣ ಮಾತ್ರದಲ್ಲಿ ಹೇರ್ ಸ್ಟೈಲ್ ರೆಡಿ. ನೋಡಲೂ ಇದು ಟ್ರೆಂಡಿ ಲುಕ್.
ಹಲೀಮತ್ ಸ ಅದಿಯಾ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.