ಅಪ್ಪರ್ ಲಿಪ್‌ನ ಅಂದ ಹೆಚ್ಚಿಸಿ
ತುಟಿಯ ಮೇಲ್ಭಾಗದಲ್ಲಿ ಬರುವ ಕೂದಲುಗಳು ಹೆಣ್ಮಕ್ಕಳ ಸೌಂದರ್ಯವನ್ನು ಹಾಳು ಮಾಡುತ್ತದೆ.
Team Udayavani, Nov 26, 2020, 11:25 AM IST
ಬಹುತೇಕ ಹೆಣ್ಮಕ್ಕಳಿಗೆ ಅಪ್ಪರ್ ಲಿಪ್‌ನ ಸಮಸ್ಯೆ ತಲೆ ಕಾಡುತ್ತದೆ. ಇದಕ್ಕೆ ಪಾರ್ಲರ್, ಕೆಲವರು ಸಲೂನ್‌ಗಳಲ್ಲಿ ಬೇರೆ ದಾರಿ ಇಲ್ಲದೆ ಪರಿಹಾರ ಕಂಡುಕೊಳ್ಳುತ್ತಾರೆ. ಇನ್ನು ಕೆಲವರು ಅಲ್ಲಿಗೆ ಹೋಗುವಷ್ಟು ತಾಳ್ಮೆ ಇಲ್ಲದೆ ಪರದಾಡುತ್ತಾರೆ. ಅಂತವರಿಗಾಗಿ ಕೆಲವು ಸುಲಭ ಟಿಪ್ಸ್‌ಗಳು ಇಲ್ಲಿವೆ.
ತುಟಿಯ ಮೇಲ್ಭಾಗದಲ್ಲಿ ಬರುವ ಕೂದಲುಗಳು ಹೆಣ್ಮಕ್ಕಳ ಸೌಂದರ್ಯವನ್ನು ಹಾಳು ಮಾಡುತ್ತದೆ. ಸಮಾರಂಭಗಳಿಗೆ ಅಥವಾ ಇನ್ನಿತರ ಕೆಲಸಗಳಿಗೆ ಹೋಗುವಾಗ ಇದು ಮುಜುಗರಕ್ಕೀಡು ಮಾಡುತ್ತವೆ. ಇದನ್ನು ಪದೇ ಪದೇ ತೆಗೆಯುವ ಬದಲು ಮನೆಯಲ್ಲಿರುವ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಅದನ್ನು ನಿವಾರಿಸಿಕೊಳ್ಳಬಹುದು.
· ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಹಾರ್ಮೋನ್‌ಗಳ ಅಸಮತೋಲನದಿಂದ ಮೇಲ್‌ತುಟಿಯ ಮೇಲೆ ಕೂದಲು ಕಾಣಿಸಿಕೊಳ್ಳುತ್ತದೆ. ಅದಲ್ಲದೆ ಇದು ಆನುವಂಶಿಕವಾಗಿ ಕೂಡ ಅಥವಾ ಎರಡರ ಸಂಯೋಜನೆಯಿಂದ ಉಂಟಾಗುತ್ತದೆ. ಸುಮಾರು ಶೇ. 10 ರಷ್ಟು ಮಹಿಳೆಯರಿಗೆ ಹಿರ್ಸುಟಿಸಮ್ ಸಮಸ್ಯೆ ಇದೆ. ಈ ಸ್ಥಿತಿಗೆ ಯಾವುದೇ ಮುಖ್ಯ ಕಾರಣಗಳಿಲ್ಲ. ಅದಕ್ಕಾಗಿ ಕೆಲವು ಮನೆಮದ್ದುಗಳನ್ನು ಬಳಸಿಕೊಂಡು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
· ಅರಿಶಿನ ಸಾಮಾನ್ಯವಾಗಿ ಹೆಣ್ಮಕ್ಕಳ ಅಂದ ಇಮ್ಮಡಿಗೊಳಿಸುವ ಮನೆಮದ್ದಾಗಿದ್ದು ಇದನ್ನು ಒಂದು ಚಮಚ ನೀರು ಅಥವಾ ಹಾಲಿನೊಂದಿಗೆ ಚೆನ್ನಾಗಿ ಬೆರೆಸಿ ತುಟಿಯ ಮೇಲೆ ಹಚ್ಚಿರಿ. ಅನಂತರ ಅದನ್ನು ಅರ್ಧ ಗಂಟೆಯ ಬಳಿಕ ಗಟ್ಟಿಯಾದ ಮೇಲೆ ಚೆನ್ನಾಗಿ ಉಜ್ಜಿ ತೊಳೆಯಿರಿ. ಒಂದೆರಡು ವಾರ ಹೀಗೆ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆದುಕೊಳ್ಳಬಹದು.
· ಕಡಲೆ ಹಿಟ್ಟು ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿ ಬಳಸುತ್ತಾರೆ. ಇದನ್ನು ಒಂದು ಚಮಚ ಹಾಕಿ, ಚಿಟಿಕೆ ಅರಿಶಿನ ಜತೆ ಚೆನ್ನಾಗಿ ಬೆರೆಸಿ ಮಿಶ್ರಣ ಮಾಡಿಕೊಳ್ಳಿ.ಅನಂತರ ಅದನ್ನು ಕೂದಲಿನ ಬೆಳವಣಿಗೆಯ ದಿಕ್ಕಿನ ವಿರುದ್ಧ ಅದನ್ನು ಸðಬ್ ಮಾಡಿ, ವಾರಕ್ಕೆ ಎರಡು ಬಾರಿ ಮಾಡಿದಲ್ಲಿ ತುಟಿಯ ಮೇಲಿನ ಕೂದಲನ್ನು ಸುಲಭವಾಗಿ ತೆಗೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.