ಪುಟ್ಟ ಕಾರುಗಳತ್ತ ಹೆಚ್ಚುತ್ತಿರುವ ಒಲವು
Team Udayavani, Sep 7, 2020, 5:55 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಹೊಸ ಕಾರು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಜನರು ಸಾರ್ವಜನಿಕ ಸಾರಿಗೆಗಿಂತ ಸ್ವಂತ ವಾಹನಗಳಲ್ಲಿ ಪ್ರಯಾಣಿಸಲು ಹೆಚ್ಚಿನ ಒಲವು ತೋರುತ್ತಿರುವುದು ಇತ್ತೀಚಿನ ಕಾರು ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಅವಲೋಕಿಸಿದಾಗ ಸಾಬೀತಾಗುತ್ತದೆ.
2019-20ರ ನಾಲ್ಕನೇ ತ್ತೈಮಾಸಿಕಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಕಾರು ಖರೀದಿದಾರರ ಸಂಖ್ಯೆ ಶೇ. 5.5ರಷ್ಟು ಏರಿಕೆಯಾಗಿದೆ. ಈ ಮೂಲಕ ಒಟ್ಟು ಶೇ. 51-53ರಷ್ಟು ಏರಿಕೆಯಾಗಿದೆ. ಇದರಲ್ಲಿ ಭಾರತದ ಅತೀ ದೊಡ್ಡ ಅಟೋಮೊಬೈಲ್ ತಯಾರಿಕ ಕಂಪೆನಿಯಾಗಿರುವ ಮಾರುತಿಯ ವಿಚಾರಣ ಪ್ರಮಾಣವು ಶೇ. 85-90ಕ್ಕೆ ತಲುಪಿದೆ. ಮಿನಿ ಮತ್ತು ಕಾಂಪ್ಯಾಕ್ಟ್ ವಿಭಾಗಗಳಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿದೆ. ಇದು ಈ ಹಿಂದೆ ಶೇ. 55ರಷ್ಟಿತ್ತು.
ಪೆಟ್ರೋಲ್ ಕಾರುಗಳತ್ತ ಆಸಕ್ತಿ
ಕೋವಿಡ್‌ನ ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಖರ್ಚು ಕಡಿಮೆ ಮಾಡಲು ಮುಂದಾಗಿರುವ ಗ್ರಾಹಕರು ಸಣ್ಣ ಕಾರುಗಳತ್ತ ಗಮನ ಹರಿಸಿದ್ದಾರೆ. ಇದಕ್ಕಾಗಿ ಡೀಸೆಲ್ ಬದಲಿಗೆ ಪೆಟ್ರೋಲ್ ಕಾರುಗಳತ್ತ ಆಸಕ್ತಿ ತೋರುತ್ತಿದ್ದಾರೆ. ಮಾರುತಿ ಸುಜುಕಿ ಪ್ರಕಾರ, ಸಣ್ಣ ಕಾರುಗಳು/ಹ್ಯಾಚ್‌ಬ್ಯಾಕ್ಸ್ ಕುರಿತು ಹೆಚ್ಚಿನ ಗ್ರಾಹಕರು ವಿಚಾರಿಸುತ್ತಿದ್ದಾರೆ. ಈ ವಿಭಾಗಗಳಲ್ಲಿ ಬುಕಿಂಗ್‌ಗಳ ಸಂಖ್ಯೆಯೂ ಹೆಚ್ಚಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ವಿಚಾರಣೆ ಮತ್ತು ಬುಕಿಂಗ್‌ನಲ್ಲಿ ಶೇ.10ರಷ್ಟು ವೃದ್ಧಿಯಾಗಿದೆ.
ಮಾರುಕಟ್ಟೆಯಲ್ಲೂ ಬದಲಾವಣೆ
ಕಡಿಮೆ ಬೆಲೆಗೆ ಕಾರು ಬೇಕು ಎನ್ನುವ ಮನಃಸ್ಥಿತಿ ಗ್ರಾಹಕರಲ್ಲಿ ಹೆಚ್ಚಾದಂತೆ ಕಾಣಿಸುತ್ತಿದೆ. ದೊಡ್ಡ ಕಾರಿಗಾಗಿ ಹೆಚ್ಚಿನ ಹಣ ವ್ಯಯಿಸಲು ಬಹುತೇಕ ಗ್ರಾಹಕರು ಸಿದ್ಧರಿಲ್ಲ. ಇದು ನಿಸಾನ್, ಮಹೀಂದ್ರಾ, ಹುಂಡೈ ಕಾರುಗಳಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ. ಡೀಸೆಲ್‌ನಿಂದ ಪೆಟ್ರೋಲ್ ಕಾರುಗಳಿಗೆ ಬೇಡಿಕೆ ವರ್ಗವಣೆಯಾಗಿರುವುದನ್ನು ಬಹುತೇಕ ಕಾರು ತಯಾರಿಕ ಕಂಪೆನಿಗಳೂ ಒಪ್ಪಿಕೊಳ್ಳುತ್ತಿವೆ. ಪೆಟ್ರೋಲ್ ವಾಹನಗಳ ಪಾಲು 2019ರಲ್ಲಿ ಶೇ.73ರಷ್ಟಿದ್ದರೆ, 2020ರಲ್ಲಿ ಶೇ.75ಕ್ಕೆ ಏರಿಕೆಯಾಗಿದೆ.
ಮಾರಾಟ ಹೆಚ್ಚಳ
ವ್ಯಾಗನರ್, ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಾಲೆನೊ ಮತ್ತು ಡಿಸೈರ್‌ಗೆ ಬೇಡಿಕೆ ಶೇ. 10.4ರಷ್ಟು ಕುಸಿದು 51,529 ಯುನಿಟ್‌ಗೆ ತಲುಪಿದ್ದು, ಹಿಂದಿನ ವರ್ಷ 57,512 ಯುನಿಟ್ ಮಾರಾಟವಾಗಿತ್ತು. ಆದರೆ ಆಲ್ಟೋ ಮತ್ತು ಎಸ್-ಪ್ರಸೊ ಕಾರುಗಳ ಬೇಡಿಕೆ 49.1ರಷ್ಟು ಏರಿಕೆಯಾಗಿದ್ದು, 17,258 ಯುನಿಟ್ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 11,577ನಷ್ಟಿತ್ತು.
ಸರಣಿ ಹಬ್ಬಗಳ ಸಮಯ
ಹಬ್ಬಗಳ ತಿಂಗಳು ಇದಾಗಿ ರುವು ದರಿಂದ ಗ್ರಾಹಕರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹಬ್ಬದ ಸಮಯದಲ್ಲಿ ಕಾರು ಖರೀದಿಯು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಏಕೆಂದರೆ ಗ್ರಾಹಕರು ಹಣವನ್ನು ಖರ್ಚು ಮಾಡುವ ಮನಸ್ಸನ್ನು ಹೊಂದಿರುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.