ಉಸಿರಾಟದ ಮೇಲೂ ಗಮನವಿರಲಿ…ಬೆಳಗ್ಗೆದ್ದು ಓಡುವ ಮುನ್ನ ತಿಳಿದುಕೊಳ್ಳಿ
ಬೆಳಗ್ಗೆದ್ದು ಓಡುವವರು ದಿನದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ.
Team Udayavani, Dec 8, 2020, 10:42 AM IST
Representative Image
ಬೆಳಗ್ಗೆದ್ದು ಜಾಗಿಂಗ್, ರನ್ನಿಂಗ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು. ಆದರೆ ಸರಿಯಾದ ಕ್ರಮದಲ್ಲಿ ಇದನ್ನು ಮಾಡದೆ ಇದ್ದರೆ ಅದು ಆರೋಗ್ಯಕರವಲ್ಲ. ಮುಖ್ಯವಾಗಿ ದೇಹದ ತೂಕ ಇಳಿಸಿ, ಸದೃಢವಾಗಿರಲು ಬಯಸುವವರು ಬೆಳಗ್ಗೆದ್ದು ರನ್ನಿಂಗ್ ಮಾಡುತ್ತೀರಾದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಂಡಿರುವುದು ಅತೀ ಮುಖ್ಯ.
ಶೂಗಳು
ಓಟಕ್ಕೆ ಹೊಸಬರಾಗಿದ್ದರೆ ಗಾಯಗಳಾಗದಂತೆ ಶೂ ಧರಿಸುವುದು ಅತ್ಯಗತ್ಯ. ಹೀಗಾಗಿ ಉತ್ತಮ ಗುಣಮಟ್ಟದ ಮತ್ತು ನಿಮ್ಮ ಕಾಲಿಗೆ ಸೂಕ್ತವಾದ ಶೂಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು.
ವೇಗದ ಓಟ
ಆರಂಭದಲ್ಲೇ ವೇಗವಾಗಿ ಓಡುವುದರಿಂದ ಅಂತಿಮ ಸಮಯದಲ್ಲಿ ಸುಸ್ತು ಆವರಿಸುತ್ತದೆ. ಹೀಗಾಗಿ ಪ್ರಾರಂಭದಲ್ಲಿ ನಿಧಾನವಾಗಿ ಸಮಯ ಕಳೆದಂತೆ ವೇಗವನ್ನು
ಹೆಚ್ಚಿಸಿಕೊಂಡು ಓಡಬೇಕು. ಆಗ ಮಾತ್ರ ಉತ್ತಮ ಫಲಿತಾಂಶ ದೊರೆಯುವುದು. ವೇಗವಾಗಿ ಓಡುವಾಗ ಪಾದ ಸರಿಯಾಗಿ ನೆಲ ಮುಟ್ಟುವಂತೆ ಓಡಬೇಕು. ಕೇವಲ ಮುಮ್ಮಡಿಯನ್ನು ನೆಲಕ್ಕೆ ತಾಗಿಸಿ ಓಡಿದರೆ ಗಾಯಗಳಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಬಟ್ಟೆಗಳು
ಓಡುವಾಗ ಆರಾಮದಾಯಕ ಬಟ್ಟೆಗಳನ್ನು ಧರಿಸಬೇಕು. ಹೆಚ್ಚು ದಪ್ಪದ ಬಟ್ಟೆಗಳು ಓಡುವಾಗ ಸೆಖೆಯ ಅನುಭವ ಕೊಡುತ್ತವೆ. ಜತೆಗೆ ಹೆಚ್ಚು ತೆಳ್ಳಗಿನ ಬಟ್ಟೆಗಳು ಚಳಿಯಿಂದ ಮೈ ಕೊರೆಯುವಂತೆ ಮಾಡುತ್ತವೆ. ಹೀಗಾಗಿ ದೇಹದ ತಾಪಮಾನ ಕಾಪಾಡುವ ಬಟ್ಟೆಗಳ ಆಯ್ಕೆ ಉತ್ತಮ.
ಭಂಗಿ
ಓಡುವಾಗ ದೇಹದ ಭಂಗಿಯತ್ತಲ ಗಮನಹರಿಸಬೇಕು. ಮುಖ್ಯವಾಗಿ ತೋಳುಗಳು ಹಿಂದೆ, ಮುಂದೆ ಸುಲಭವಾಗಿ ಸ್ವಿಂಗ್ ಆಗಬೇಕು. ಈ ಬಗ್ಗೆ ತಜ್ಞರಿಂದ ಕೇಳಿ ತಿಳಿಯುವುದು ಉತ್ತಮ.
ಉಸಿರಾಟ
ಓಡುವಾಗ ಉಸಿರಾಟದ ಮೇಲೂ ಗಮನವಿರಲಿ. ಬಾಯಿ ಮತ್ತು ಮೂಗಿನ ಮೂಲಕ ಉಸಿರಾಟ ನಡೆಸುತ್ತಿರಬೇಕು. ಹೀಗೆ ಮಾಡಿದರೆ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ದೊರೆಯುತ್ತದೆ. ಇದರಿಂದ ಬೇಗನೆ ಸುಸ್ತಾಗುವುದಿಲ್ಲ.
ನೀರು ಸೇವನೆ
ಬೆಳಗ್ಗೆದ್ದು ಓಡುವವರು ದಿನದಲ್ಲಿ ಹೆಚ್ಚು ನೀರು ಕುಡಿಯುವುದು ಅತ್ಯಗತ್ಯ. ಇಲ್ಲವಾದರೆ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.