ಕೈ ಅಂದ ಇಮ್ಮಡಿಗೊಳಿಸುವ “ಕರಿಮಣಿ ಬ್ರಾಸ್ಲೈಟ್”
ವಿನ್ಯಾಸ ಮಾಡುವಾಗ ಕರಿಮಣಿ, ಕ್ರಿಸ್ಟಲ್ ಮಣಿ, ಹರಳಿನಿಂದ ತಯಾರಿಸಿದ ನಕ್ಷತ್ರ, ಹೃದಯ, ವಿವಿಧ ಆಕೃತಿಯ ಚಿಕ್ಕ ಚಿಕ್ಕ ಪೆಂಡೆಂಟ್ ಬಳಸಲಾಗುತ್ತದೆ.
Team Udayavani, Sep 14, 2020, 10:36 AM IST
ಸುಂದರ ನಕ್ಷತ್ರ, ಅಲ್ಲೊಂದು ಚಂದ್ರ, ಕಪ್ಪು ಮಣಿಗಳೇ ಸುತ್ತಿಕೊಂಡು ಕೈ ಗೆ ಮೆರಗು ನೀಡುತ್ತಿದೆ ಕರಿಮಣಿ ಬ್ರಾಸ್ಲೈಟ್. ಕರಿಮಣಿ ತಾಳಿಸರ, ಕಾಲುಂಗರ, ಕೈಬಳೆ, ಸಿಂಧೂರ ಇವುಗಳು ಮುತ್ತೈದೆ ಶೋಭೆಗೆ ಪ್ರತಿಕದಂತೆ ಎನ್ನುವ ಸಂಪ್ರದಾಯ ನಂಬಿಕೆ ನಮ್ಮಲ್ಲಿದೆ. ಇಂದು ಸಂಪ್ರದಾಯ ಮತ್ತು ಫ್ಯಾಷನ್ ಎರಡೂ ಪರಿಕಲ್ಪನೆ ಒಗ್ಗೂಡಿದೆ. ಈ ಕಾರಣದಲ್ಲಿ ನವನವೀನ ಫ್ಯಾಷನ್‌ಗಳು ಬಂದು ಹೋಗಿ ಮತ್ತದೆ ಹಳೇ ಫ್ಯಾಷನ್ ನೂತನ ರೂಪವಾಗಿ ಬಂದು ಬಿಟ್ಟಿದೆ. ಇಂತಹ ಫ್ಯಾಷನ್‌ಗಳಲ್ಲಿ ಕರಿಮಣಿ ಸರ ಕೂಡ ಒಂದೆನಿಸಿದೆ.
ಹಿಂದೆಲ್ಲ ಕರಿಮಣಿ ಎಂದರೆ ಕೊರಳಲ್ಲಿ ಸ್ಥಾನ ಪಡೆದಿತ್ತು ಆದರೆ ಇಂದು ಕಾಲ ಬದಲಾಗಿದೆ ಬದುಕಿನ ನೂತನ ಅರ್ಥ ದೊರಕಿಸುವ ಮಂಗಲ ಸೂತ್ರವು ಕೈಗೆ ಮೆರಗು ನೀಡುವ ನಿಟ್ಟಿನಲ್ಲಿ ಸಹ ಉಪಯೋಗಿಸುತ್ತಿದ್ದಾರೆ. ಕರಮಣಿ ಸರದ ಕುರಿತು ಪರವಿರೋಧಗಳು ಆಗಾಗ ಕೇಳಿ ಬರುತ್ತಿದ್ದು ಆಧುನಿಕತೆಯ ಮಂಪರಿನ ನಡುವೆ ಕರಿಮಣಿಯೆಂದರೆ ವಿನೂತನ ರೂಪ ಪಡೆದ ಬ್ರಾಸ್ಲೈಟ್ ಫ್ಯಾಷನ್ ಪ್ರಿಯರ ಮನಗೆದ್ದಿದೆ ಎನ್ನಬಹುದು.
ಕರಿಮಣಿ ಬಳೆ
ಕರಿಮಣಿ ಬಳೆ ಸ್ವಲ್ಪ ಹಳೆಯ ಫ್ಯಾಷನ್ ಆಗಿದ್ದು ಕರಿಮಣಿಯನ್ನು ಬಳೆಯ ನಡುವೆ ಇರಿಸಿ ಸಿದ್ಧಗೊಳಿಸುತ್ತಿದ್ದರು. ಹುಟ್ಟಿದ ಮಗುವಿನ ಪುಟ್ಟ ಕೈಗಳಿಗೆ ದೃಷ್ಟಿತಾಕದಂತೆ ಕರಿಮಣಿ ಬಳೆಯನ್ನು ಬಳಸುತ್ತಿದ್ದರು. ಸಾಮಾನ್ಯವಾಗಿ ಮೊದ ಮೊದಲು ಚಿನ್ನದಲ್ಲಿ ಈ ಫ್ಯಾಷನ್ ಪರಿಚಯಿಸಲ್ಪಟ್ಟು ಸಮಾಜದ ಶ್ರೀಮಂತವರ್ಗದ ಮಹಿಳೆಯರು ಮಾತ್ರ ಧರಿಸುತ್ತಿದ್ದ ಕಾರಣ ಮೊದಲು ಅಷ್ಟಾಗಿ ಜನಪ್ರಿಯವಾಗಿರಲಿಲ್ಲ.
ಇದನ್ನೂ ಓದಿ: ಜೀವಯಾನ: ಭಾವನೆಗಳನ್ನು ಅರ್ಥಮಾಡಿಕೊಂಡರೆ ಬದುಕು ಬಲು ಸುಂದರ
ಕಾಲಕ್ರಮೇಣ ಬೆಳ್ಳಿ ಮತ್ತು ಮೆಟಲ್‌ನಲ್ಲಿ ಸಾಮಾನ್ಯವರ್ಗದವರನ್ನು ಸಹ ತಲುಪಿ ಜನಪ್ರಿಯವಾಯಿತು. ಮದುವೆಯಾದವರು, ಯುವತಿಯರು ಸಹ ಈ ಬಳೆ ಧರಿಸುತ್ತಿಸುತ್ತಿದ್ದು ಆಗಾಗ ಪರವಿರೋಧಗಳು ಸಾಮಾನ್ಯವಾಗಿತ್ತು. ಆದರೆ ಕಾಲಕ್ಕನುಗುಣವಾಗಿ ವಿನೂತನ ವಿನ್ಯಾಸ ಪಡೆಯುವುದು ಸಾಮಾನ್ಯವಾಗಿದ್ದು ಇದೀಗ ಕರಿಮಣಿ ಬ್ರಾಸ್ಲೆ„ಟ್ ಈ ನಿಟ್ಟಿನಲ್ಲಿ ಮುಂಚುಣಿಯಲ್ಲಿದೆ ಎನ್ನಬಹುದು.
ಕರಿಮಣಿ ಬ್ರಾಸ್ಲೈಟ್
ಬಾಲಿವುಡ್‌ನ ಸ್ಟಾರ್ ನಟಿಯರಾದ ಶಿಲ್ಪಾ ಶೆಟ್ಟಿ, ಸೋನಮ್ ಕಪೂರ್ ಈ ಕರಿಮಣಿಯ ಬ್ರಾಸ್ಲೈಟ್ ಧರಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪ ಮಟ್ಟಿಗೆ ಸದ್ದಾಗಿದ್ದರೂ. ಆ ಬಳಿಕ ಫ್ಯಾಷನ್ ನೆಲೆಯಲ್ಲಿ ಇಂದು ಎಲ್ಲೆಡೆ ಈ ರೀತಿ ಬ್ರಾಸ್ಲೈಟ್ ಬಳಕೆ ಮಾಡುತ್ತಿದ್ದು ಕೆಲವರು ಕತ್ತಿಗೆ ಕರಿಮಣಿ ಹಾಕುವ ಪರ್ಯಾಯವಾಗಿ ಬ್ರಾಸ್ಲೈಟ್ ಮಾಡಿ ಧರಿಸುತ್ತಿದ್ದರೆ ಇನ್ನೂ ಕೆಲವರು ಕತ್ತು ಮತ್ತು ಕೈ ಎರಡಕ್ಕೂ ಪ್ರತ್ಯೇಕವೆಂಬಂತೆ ಆಯ್ಕೆ ಮಾಡಲಾಗಿರುವುದನ್ನು ಕಾಣಬಹುದು.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಕನ್ನಡಿಗರ ಒಡೆತನದ ಕ್ಯಾಸಿನೋ?
ಡಿಸೈನ್ ಹೇಗೆ:
ಚಿನ್ನದ ಈ ಮಾದರಿಯ ಬ್ರಾಸ್ಲೈಟ್ ವಿನ್ಯಾಸದಲ್ಲಿ ಚಿನ್ನದ ಮಣಿ ಮತ್ತು ಕರಿಮಣಿಯನ್ನು ಮಿಶ್ರವಾಗಿಸಿ ಅಲಲ್ಲಿ ಸರವನ್ನು ಮತ್ತು ವಿವಿಧ ಬಣ್ಣದ ಹರಳನ್ನು ಸಹ ಬಳಸಿ ಮಾಡುತ್ತಾರೆ. ವಿನ್ಯಾಸ ಮಾಡುವಾಗ ಕರಿಮಣಿ, ಕ್ರಿಸ್ಟಲ್ ಮಣಿ, ಹರಳಿನಿಂದ ತಯಾರಿಸಿದ ನಕ್ಷತ್ರ, ಹೃದಯ, ವಿವಿಧ ಆಕೃತಿಯ ಚಿಕ್ಕ ಚಿಕ್ಕ ಪೆಂಡೆಂಟ್ ಬಳಸಲಾಗುತ್ತದೆ.
ಯಾವ ಡ್ರೇಸ್‌ಗೆ ಸೂಕ್ತ:
ದಿನನಿತ್ಯ ಬಳಕೆಗೂ ಈ ರೀತಿ ಬ್ರಾಸ್ಲೈಟ್ಉತ್ತಮವಾಗಿದ್ದರೂ ಆಯ್ಕೆ ಮಾಡುವಾಗ ಹರಳು ರಹಿತ ಕರಿಮಣಿ ಬ್ರಾಸೈಟ್ ಖರೀದಿಸುವುದು ಉತ್ತಮ. ಜೀನ್ಸ್, ಕುರ್ತಿ, ಸೀರೆ ಬಹುತೇಕ ಎಲ್ಲಾ ಬಟ್ಟೆಗೂ ಈ ಬ್ರಾಸ್ಲೈಟ್ ತೊಡಬಹುದಾಗಿದೆ. ಒಟ್ಟಾರೆ ಸಂಪ್ರದಾಯಕ್ಕೂ ಸೈ ಎನ್ನುವ ಫ್ಯಾಷನ್ ಪರಿಚಯಿಸಿದ್ದು ಮೆಚ್ಚುವ ಸಂಗತಿಯಾಗಿದೆ.
*ರಾಧಿಕಾ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.