ಒಲ್ಡ್ ಇಸ್ ಗೋಲ್ಡ್… ಲಂಗ ದಾವಣಿ
ಸಾಂಪ್ರದಾಯುಕ ಉಡುಪಿಗೆ ಮಾಡರ್ನ್ ಟಚ್
Team Udayavani, Nov 3, 2020, 11:45 AM IST
ಫ್ಯಾಷನ್ ಲೋಕದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಯ ಗಾಳಿ ಬೀಸುತ್ತಲೇ ಇರುತ್ತದೆ. ಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫ್ಯಾಷನ್‌ಗಳು ಬರುತ್ತಿವೆ. ಮಹಿಳೆಯರ ಡ್ರೆಸ್‌ಗಳಲ್ಲಂತೂ ಹೊಸತನ ಹೆಚ್ಚು ಎಂದು ಹೇಳಿದರೂ ತಪ್ಪಾಗಲಾರದು.
ಒಲ್ಡ್ ಇಸ್ ಗೋಲ್ಡ್ ಎನ್ನುವ ಮಾದರಿಯಲ್ಲಿ ಫ್ಯಾಷನ್ ಲೋಕದಲ್ಲಿ ಹಳೆಯ ಫ್ಯಾಷನ್ ಮತ್ತೆ ಮರುಕಳಿಸುವುದು ಸಾಮಾನ್ಯ ಮತ್ತು ಅದು ಹೆಚ್ಚು ಜನಮೆಚ್ಚುಗೆಯನ್ನು ಕೂಡ ಪಡೆಯುತ್ತದೆ. ಹಿಂದೆ ಹೆಚ್ಚು ಜನಪ್ರಿಯವಾಗಿದ್ದ ಫ್ಯಾಷನ್ ವಸ್ತಗಳು ಸ್ವಲ್ಪ ಬದಲಾವಣೆಯೊಂದಿಗೆ ಅಚಾನಕ್ ಆಗಿ ಮತ್ತೆ ಫ್ಯಾಷನ್ ಲೋಕಕ್ಕೆ ಕಾಲಿಡುತ್ತವೆ.
ಉದ್ದ ಲಂಗ ರವಿಕೆ ಹಿಂದಿನ ಸಿನೆಮಾಗಳಲ್ಲಿ ಹೆಚ್ಚು ಕಮಾಲ್ ಮಾಡಿದ ಉಡುಗೆ. ಅದೀಗ ಮತ್ತೆ ಫ್ಯಾಷನ್ ಲೋಕದಲ್ಲಿ ಮಿಂಚುತ್ತಿದೆ. ಆದರೆ ಲಂಗ ರವಿಕೆಗೆ ಮಾಡರ್ನ್ ಟಚ್ ದೊರೆತಿದೆ.
ಮಾಡರ್ನ್ ಟಚ್
ಈಗ ಫ್ಯಾಶನ್ ಲೋಕದಲ್ಲಿರುವ ಮಿಂಚುತ್ತಿರುವ ಲಂಗ ದಾವಣಿಯು ಸಾಂಪ್ರದಾಯಿಕ ನೋಟ ನೀಡುತ್ತದೆ. ಜತೆಗೆ ಹೆಚ್ಚು ಪ್ರಚಲಿತವಾಗಿರುವ ಇದು ಸಾಂಪ್ರದಾಯಿಕ ಲುಕ್ ನೀಡುವ ಜತೆಗೆ ಮಾಡರ್ನ್ ಟಚ್ ನೀಡುತ್ತದೆ. ಮಾಡರ್ನ್ ಟಚ್ ಇರುವ ಈ ಉಡುಪು ಸಾಂಪ್ರದಾಯಿಕ, ಆಧುನಿಕ ನೋಟವನ್ನು ನೀಡುತ್ತದೆ.
1 ಪ್ಲೆ„ನ್ ಸ್ಕರ್ಟ್ ಮತ್ತು ವರ್ಕೆಡ್ ಬ್ಲೌಸ್
ಸಾಮಾನ್ಯವಾಗಿ ಇದರಲ್ಲಿ ಲಂಗ ಸರಳವಾಗಿದ್ದಲ್ಲಿ ಬ್ಲೌಸ್ ಹೆಚ್ಚು ಆಕರ್ಷಕವಾಗಿ ಇರುವಂತಿರುತ್ತದೆ. ಇದು ಸರಳತೆ ಇಷ್ಟಪಡುವವರ ಆಯ್ಕೆಯಾಗಿದೆ.
2 ಕಸೂತಿ ಮತ್ತು ಪ್ರಿಂಟೆಡ್ ಡಿಸೈನ್
ಲಂಗ ದಾವಣಿಯಲ್ಲಿ ಕಸೂತಿ ಮತ್ತು ಪ್ರಿಂಟೆಡ್ ಉಡುಪುಗಳು ಹೆಚ್ಚಾಗಿ ಇರುತ್ತದೆ. ಇದು ಸಾಂಪ್ರದಾಯಿಕ ಲುಕ್ ನೀಡುತ್ತದೆ. ಬ್ಲೌಸ್‌ನಲ್ಲೂ ಹಲವು ಮಾದರಿಯಿದ್ದು, ಉದ್ದ ತೋಳಿನ ಬ್ಲೌಸ್ ಮತ್ತು ಸಣ್ಣ ತೋಳಿನ ಬ್ಲೌಸ್ ಇದೆ. ಜತೆಗೆ ಡಿಸೈಲ್‌ಗಳಲ್ಲೂ ಹಲವು ವಿಧಗಳಿವೆ.
ಹಬ್ಬ ಹರಿದಿನಗಳಿಗೆ ಸೂಕ್ತ ಉಡುಪು
ಲಂಗ ದಾವಣಿಯು ಹಬ್ಬ ಹರಿದಿನಗಳಿಗೆ ಹೆಚ್ಚು ಸೂಕ್ತವಾದ ಉಡುಪು. ಮದುವೆ, ಹಬ್ಬಗಳ ಸಮಯದಲ್ಲಿ ಇದು ಗ್ರ್ಯಾಂಡ್ ಲುಕ್ ನೀಡುವ ಸಾಂಪ್ರದಾಯಿಕ ಉಡುಪು ಇದಾಗಿದೆ. ಕಾಲೇಜು ಕಾರ್ಯಕ್ರಮಗಳಿಗೆ, ಪಾರ್ಟಿಗಳಿಗೂ ಈ ಉಡುಪು ಹೊಂದಿಕೊಳ್ಳುತ್ತದೆ. ಆದ್ದರಿಂದ ಇಂದು ಹೆಚ್ಚಿಗೆ ಬೇಡಿಕೆ ಪಡೆಯುತ್ತಿರುವ ಉಡುಪಾಗಿ ಮಾರ್ಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.