ಸ್ಟೈಲಿಶ್ ಪ್ಯಾಂಟುಗಳು; ಯಾವ ಟಾಪ್ ದಿರಿಸಿಗೆ ಯಾವ ಬಗೆಯ ಪ್ಯಾಂಟು
Team Udayavani, Oct 2, 2020, 1:31 PM IST
ನಾವು ಧರಿಸುವ ಟಾಪ್ ದಿರಿಸುಗಳಿಗನುವಾಗಿ ಮತ್ತು ಇತ್ತೀಚೆಗೆ ಮಾರುಕಟ್ಟೆಯಲ್ಲಿರುವ ಪ್ಯಾಂಟುಗಳನ್ನು ಧರಿಸಬೇಕೆಂಬ ಆಸೆ ಸಹಜವಾದುದು. ಯಾವ ಟಾಪ್ ದಿರಿಸಿಗೆ ಯಾವ ಬಗೆಯ ಪ್ಯಾಂಟು ಸಮಂಜಸವಾದುದು ಎಂಬ ಬಗೆಗೆ ಸಣ್ಣ ಮಟ್ಟಿನ ಅರಿವಿದ್ದಾಗ ಸರಿಯಾದ ಪ್ಯಾಂಟುಗಳನ್ನು ಕೊಂಡು ಧರಿಸಬಹುದಾಗಿದೆ. ಇನ್ನೊಂದಿಷ್ಟು ಪ್ಯಾಂಟುಗಳ ಬಗೆಯನ್ನು ಇಲ್ಲಿ ಹೇಳಿರುತ್ತೇನೆ.
1ಸ್ಟ್ರೈಟ್ ಪ್ಯಾಂಟ್: ಇವುಗಳು ಸ್ಟ್ರೈಟ್ ಕಟ್ ಪ್ಯಾಂಟುಗಳು. ಸಿಂಪಲ್ ಲುಕ್ಕನ್ನು ಕೊಡುವ ಇವುಗಳು ಕ್ಯಾಷುವಲ… ವೇರುಗಳೊಂದಿಗೆ ಒಪ್ಪುತ್ತವೆ. ಇವುಗಳೊಂದಿಗೆ ಲಾಂಗ್ ಕುರ್ತಾಗಳು ಮತ್ತು ಟಾಪುಗಳು ಎಲಿಗ್ಯಾಂಟ್ ಲುಕ್ಕನ್ನು ಕೊಡುತ್ತವೆ.
2ಬೂಟ್ ಕಟ್ ಪ್ಯಾಂಟ್: ಇವುಗಳು ಆಗಿನ ಕಾಲದ ಬೆಲ್ ಬಾಟಮ್ ಪ್ಯಾಂಟುಗಳ ಮಾದರಿಯ ಪ್ಯಾಂಟುಗಳಾಗಿವೆ. ಮತ್ತೆ ಫ್ಯಾಷನ್ ಲೋಕಕ್ಕೆ ಲಗ್ಗೆ ಇಟ್ಟಿರುವ ಇವುಗಳು ಟಾಪುಗಳೊಂದಿಗೆ ಧರಿಸಲು ಹೇಳಿಮಾಡಿಸಿದಂತಿರುತ್ತವೆ.
3ಹಾರೆಮ್ ಪ್ಯಾಂಟ್ಸ್: ಸಡಿಲವಾದ ಸ್ಟ್ರಕ್ಚರ್ ಅನ್ನು ಹೊಂದಿರುವ ಇವುಗಳು ಧರಿಸಲು ಬಹಳ ಆರಾಮದಾಯಕವಾಗಿರುತ್ತವೆ ಮತ್ತು ಸ್ಟೈಲಿಶ್ ಆಗಿರುತ್ತವೆ. ವೈಸ್ಟ್ ಮತ್ತು ಆಂಕೆಲ್ಲುಗಳಲ್ಲಿ ಹರಡಿಕೊಂಡಿರುತ್ತವೆ. ಇವುಗಳು ಸಾಮಾನ್ಯವಾಗಿ ತೆಳುವಾದ ಬಟ್ಟೆಗಳಿಂದ ತಯಾರಿಸಲಾಗಿರುವುದರಿಂದ ಹೆಚ್ಚಿನ ಬಲ್ಕಿ ಲುಕ್ಕನ್ನು ನೀಡುವುದಿಲ್ಲ ಬದಲಾಗಿ ಫ್ಲೇರಿ ಲುಕ್ಕನ್ನು ನೀಡುತ್ತವೆ. ಫ್ಯೂಷನ್ ಪ್ಯಾಂಟುಗಳಾಗಿದ್ದು ಟಾಪುಗಳೊಂದಿಗೆ ಧರಿಸಿದಾಗ ಫ್ಯೂಶನ್ ಲುಕ್ಕನ್ನು ನೀಡುತ್ತವೆ.
4ಜೋದು³ರ್ ಪ್ಯಾಂಟ್ಸ್: ರಾಜಸ್ಥಾನಿ ಮೂಲವಾದ ಈ ಪ್ಯಾಂಟುಗಳು ಜೋದು³ರ್ ಪ್ಯಾಂಟುಗಳೆಂದೇ ಕರೆಸಿಕೊಳ್ಳಲ್ಪಡುತ್ತವೆ. ಇವುಗಳು ಲಾಂಗ್ ಪ್ಯಾಂಟುಗಳಾಗಿದ್ದು ವೈಸ್ಟ್ನಿಂದ ಗಂಟಿನವರೆಗೆ ಸಡಿಲವಾಗಿದ್ದು ಗಂಟಿನಿಂದ ಆಂಕೆಲ್ವರೆಗೆ ಟೈಟ್ ಫಿಟೆ°ಸ್ಸನ್ನು ಹೊಂದಿರುತ್ತವೆ.
5ಸ್ಟಿರಪ್ಸ್ ಪ್ಯಾಂಟ್ಸ್: ಇವುಗಳು ಲೆಗ್ಗಿಂಗುಗಳಿಗೆ ಹೋಲುವಂತಹ ಪ್ಯಾಂಟುಗಳಾಗಿದ್ದು ಆಂಕೆಲ್ಲಿನ ಕೆಳಗೆ ಹಿಮ್ಮಡಿಯ ಅಡಿಯವರೆಗೆ ಎಕ್ಸೆrಂಡ್ ಆಗಿರುತ್ತವೆ. (ಸ್ಟ್ರಾಪ್ ಇರುತ್ತವೆ). ಮೊದಲಿಗೆ ಇವುಗಳು ನ್ಪೋರ್ಟ್ಸ್ ಮತ್ತು ಹಾರ್ಸ್ ರೈಡಿಂಗುಗಳಿಗೆ ಮಾತ್ರ ಬಳಸಲಾಗುತ್ತಿತ್ತು ಆದರೆ ಈಗ ಇವುಗಳೂ ಕೂಡ ಫ್ಯಾಷನೇಬಲ್ ದಿರಿಸುಗಳೆನಿಸಿವೆ.
6ಸೈಲರ್ ಪ್ಯಾಂಟ್ಸ್: ಸೈಲರ್ ಪ್ಯಾಂಟುಗಳ ಆರಂಭಗೊಂಡದ್ದು ನೌಕಾಪಡೆಯಲ್ಲಿರುವವರ ಯುನಿಫಾರ್ಮ್ ಆಗಿ. ಇವುಗಳು ಬೆಲ್ ಬಾಟಮ್ ಪ್ಯಾಂಟುಗಳಾಗಿದ್ದು ಮುಂಭಾಗದಲ್ಲಿ ಸ್ಟ್ರಾಪ್‌ಗ್ಳಿದ್ದು ಬಟನ್ನುಗಳನ್ನು ಹೊಂದಿರುತ್ತವೆ. ಧರಿಸಲು ಆರಾಮದಾಯಕವೂ ಮತ್ತು ಫ್ಯಾಷನೇಬಲ್ ಲುಕ್ಕನ್ನು ಕೊಡುವಂತಹ ಪ್ಯಾಂಟುಗಳಿವಾಗಿವೆ.
7ಪೆಗ್ಗಡ್ (pegged) ಪ್ಯಾಂಟ್ಸ್: 50 ಮತ್ತು 80ನೇ ದಶಕಗಳಲ್ಲಿದ್ದ ಪಾಪ್ಯುಲರ್ ಪ್ಯಾಂಟುಗಳಿವಾಗಿದ್ದು ಮತ್ತೆ ಟ್ರೆಂಡಿಗೆ ಬಂದಿವೆ. ಆಂಕೆಲ್ ಲೆನ್ತ್ ಇರುವ ಪ್ಯಾಂಟುಗಳಿವಾಗಿದ್ದು ಹಲವು ಬಣ್ಣಗಳಲ್ಲಿ ದೊರೆಯತ್ತವೆ.
8ಕಾರ್ಗೊ ಪ್ಯಾಂಟ್ಸ್: ಖಾಕಿ ಬಣ್ಣಗಳಲ್ಲಿ ಹಲವು ಶೇಡುಗಳಲ್ಲಿ ದೊರೆಯುವ ಇವುಗಳು ಬೋಲ್ಡ್ ಲುಕ್ಕನ್ನು ನೀಡುತ್ತವೆ. ಇವುಗಳಲ್ಲಿ ಶಾರ್ಪ್ ಎಂಡ್ ಪ್ಯಾಂಟುಗಳು, ತ್ರಿಫೋರ್ತುಗಳು ಮತ್ತು ಸ್ಟ್ರೈಟ್ ಕಟ್ ಪ್ಯಾಂಟುಗಳು ದೊರೆಯುತ್ತವೆ. ಮಹಿಳೆಯರಿಗೆ ಹೆಚ್ಚು ಸ್ಟೈಲಿಶ್ ಲುಕ್ಕನ್ನು ನೀಡುವಂತಹದು ಶಾರ್ಪ್ ಎಂಡ್ ಕಾರ್ಗೊ ಪ್ಯಾಂಟುಗಳು.
9ಬೋಲ್ಡ್ ಪ್ಯಾಂಟ್ಸ್: ಇವುಗಳು ವೈಬ್ರಂಟ್ ಬಣ್ಣಗಳಲ್ಲಿ ದೊರೆಯುವ ಕಲರ್ಡ್ ಪ್ಯಾಂಟುಗಳಾಗಿದ್ದು ಬಹಳ ಆಕರ್ಷಕವಾದ ಲುಕ್ಕನ್ನು ನೀಡುತ್ತವೆ. ಇವುಗಳೊಂದಿಗೆ ಲೈಟ್ ಬಣ್ಣಗಳ ಟಾಪುಗಳನ್ನು ಧರಿಸುವುದು ಸದ್ಯದ ಟ್ರೆಂಡ್ ಎನಿಸಿವೆ. ಇವುಗಳಲ್ಲಿ ನಿಮ್ಮ ಸ್ಕಿನ್ ಟೋನಿಗೆ ಸರಿಹೊಂದುವ ಬಣ್ಣಗಳ ಪ್ಯಾಂಟುಗಳ ಆಯ್ಕೆ ಬಹಳ ಮುಖ್ಯವಾದುದು.
10ಜಂಪ್ ಸ್ಯೂಟ್ಸ್: ಇವುಗಳು ಕೇವಲ ಪ್ಯಾಂಟಷ್ಟೇ ಅಲ್ಲದೆ ಟಾಪನ್ನು ಕೂಡಿಕೊಂಡಿರುವ ಬಗೆಯ ದಿರಿಸಾಗಿದೆ. ಬಹಳ ಸ್ಟೈಲಶ್ ಮತ್ತು ಸದ್ಯದ ರನ್ನಿಂಗ್ ಟ್ರೆಂಡುಗಳಲ್ಲೊಂದಾಗಿದೆ. ಹಲವು ಬಗೆಯ ಬಟ್ಟೆಗಳಲ್ಲಿ ಮತ್ತು ಹಲವು ಮಾದರಿಗಳಲ್ಲಿ ದೊರೆಯುವ ಇವುಗಳಲ್ಲಿ ಆಯ್ಕೆಗೆ ವಿಫುಲವಾದ ಅವಕಾಶಗಳಿರುತ್ತವೆ. ಕ್ಯಾಷುವಲ್ವೇರಾಗಿ ಬಳಸಲು ಹೆಚ್ಚು ಸೂಕ್ತವಾದುದು. ಪ್ರಿಂಟೆಡ್ ಮತ್ತು ಪ್ಲೆ„ನ್ ಎರಡೂ ಬಗೆಗಳಲ್ಲಿ ದೊರೆಯುತ್ತವೆ.
11ಸ್ವೀಟ್ ಪ್ಯಾಂಟ್ಸ್: ಇವುಗಳನ್ನು ಜಾಗಿಂಗ್ ಪ್ಯಾಂಟೂಗಳೆಂದೂ ಕರೆಯಲಾಗುತ್ತದೆ. ಇವುಗಳು ಮೃದುವಾದ ಬಟ್ಟೆಯಿಂದ ತಯಾರಿಸಲ್ಪಟ್ಟಿದ್ದು ಧರಿಸಲು ಬಹಳ ಆರಾಮದಾಯಕ ವಾಗಿರುತ್ತವೆ. ವ್ಯಾಯಾಮಗಳು ಅಥವಾ ಜಾಗಿಂಗುಗಳಿಗೆ ಇವುಗಳನ್ನು ಬಳಸುವುದು ಸೂಕ್ತವಾದುದು ಅಷ್ಟೇ ಅಲ್ಲದೆ ಪ್ರಯಾಣಗಳಿಗೂ ಧರಿಸಬಹುದು.
12ಡಂಗ್ರಿ (ಕಾಪ್ಪೆಂಟರ್) ಪ್ಯಾಂಟ್ಸ್: ಹೆಸರಿಗೆ ತಕ್ಕಂತೆ ಇವುಗಳು ಕಾಪ್ಪೆಂಟರ್ಸ್ ಧರಿಸುವ ಪ್ಯಾಂಟುಗಳಿಗೆ ಹೋಲುತ್ತವೆ.
ಪ್ಯಾಂಟುಗಳಿಗೆ ವೆಸ್ಟ್ ಪಾರ್ಟ್ ಮತ್ತು ಪೆಡಲ್ಗಳಿಂದ ತಯಾರಿಸಲಾಗಿರುತ್ತದೆ. ಹೆಚ್ಚಾಗಿ ಡೆನಿಮ್ ಬಟ್ಟೆಗಳಲ್ಲಿ ತಯಾರಿಸಲಾಗುವ ಉಡುಪುಗಳಿವಾಗಿದ್ದು ತೆಳು ಬಣ್ಣಗಳ ಟೀಶರ್ಟುಗಳನ್ನು ಮ್ಯಾಚ್ ಮಾಡಿಕೊಂಡು ಧರಿಸಬಹುದು.
13ವೈಡ್ ಲೆಗ್: ಇವುಗಳು ಫುಲ್ ಲೆನ್ತ್ ಪ್ಯಾಂಟುಗಳಾಗಿದ್ದು ಕೆಳಭಾಗದಲ್ಲಿ ಅಗಲವಾಗಿರುತ್ತವೆ. ಆದ್ದರಿಂದಲೇ ವೈಡ್ ಲೆಗ್ ಪ್ಯಾಂಟುಗಳೆಂದು ಕರೆಯಲಾಗುತ್ತದೆ.
14ಬುಶ್ ಪ್ಯಾಂಟ್: ಇವುಗಳು ಸ್ಟ್ರೈಟ್ ಲೆಗ್ ಪ್ಯಾಂಟುಗಳಾಗಿದ್ದು ಹಲವು ಜೇಬುಗಳನ್ನು ಹೊಂದಿರುವ ಬಗೆಯಾಗಿದೆ. ಧರಿಸಲು ಕೂಡ ಆರಾಮದಾಯಕವಾಗಿರುತ್ತದೆ. ಹೆಚ್ಚಾಗಿ ಹಂಟಿಂಗ್‌ಗೋಸ್ಕರ ಬಳಸಲಾಗುತ್ತಿತ್ತು ಎನ್ನಲಾಗಿದೆ.
15ಫ್ಲೇರ್ ಪ್ಯಾಂಟ್: ಪಲಾಝೋ ಪ್ಯಾಂಟುಗಳಂತೆ ಇದ್ದು ಕೆಳಾಭಾಗದಲ್ಲಿ ಸ್ಕರ್ಟುಗಳಂತೆ ಫ್ಲೇರ್ಡ್ ಲುಕ್ಕನ್ನು ಹೊಂದಿರುತ್ತವೆ.
ಹೀಗೆ ಅಸಂಖ್ಯವಾಗಿ ದಿನವೂ ಮಾರುಕಟ್ಟೆಗೆ ಬೇರೆ ಬೇರೆ ಬಗೆಯ ಪ್ಯಾಂಟುಗಳು ಹಾಗೂ ಹಳೆಯ ಪ್ಯಾಷನ್ನುಗಳೇ ಹೊಸ ವಿಧದಲ್ಲಿ ಬಂದು ಹೋಗುತ್ತಿರುತ್ತವೆ. ಆಯಾ ಸಮಯದಲ್ಲಿ ಬಂದ ಪ್ಯಾಂಟಗಳನ್ನು ಧರಿಸಿ ಸಂತಸ ಪಡುವುದು ಎಲ್ಲರಿಗೂ ಇಷ್ಟವೇ. ಸರಿಯಾದ ಸಂದರ್ಭದಲ್ಲಿ ಧರಿಸಿರುವ ಟಾಪಿಗನುಗುಣವಾಗಿ ನಮಗೆ ಬೇಕಾದ ಪ್ಯಾಂಟುಗಳನ್ನು ಆಯ್ದುಕೊಂಡು ಹಾಕಿ ಸಂಭ್ರಮಿಸಿದರೆ ನೋಡುಗರ ಕಣ್ಣಿಗೂ, ಸ್ವತಃ ಧರಿಸಿದವರಿಗೂ ಆನಂದ ಸಿಗುವುದರಲ್ಲಿ ಅನುಮಾನವಿಲ್ಲ,
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.