![Sunitha](https://www.udayavani.com/wp-content/uploads/2025/02/Sunitha-415x249.jpg)
![Sunitha](https://www.udayavani.com/wp-content/uploads/2025/02/Sunitha-415x249.jpg)
Team Udayavani, Sep 15, 2021, 2:56 PM IST
ನ್ಯೂಯಾರ್ಕ್: ಈ ವರ್ಷ ನಡೆದ ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋ ಮೆಟ್ ಗಾಲಾ (Met Gala)ದಲ್ಲಿ ಪಾಲ್ಗೊಂಡಿದ್ದ ಏಕೈಕ ಭಾರತೀಯ ಮಹಿಳೆ ಸುಧಾ ರೆಡ್ಡಿಯವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಉಡುಗೆ ಫ್ಯಾಶನ್ ಪ್ರಿಯರ ಕಣ್ಣುಗಳನ್ನು ಕುಕ್ಕಿದ್ದರೆ, ಅವರ ಕೈಯಲ್ಲಿದ್ದ ಗಣೇಶನ ವಿಗ್ರಹ ಭಾರತೀಯರ ಮನಸು ಗೆದ್ದಿದೆ.
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಡೆಯದ ಮೆಟ್ ಗಾಲಾ ಈ ಬಾರಿ ಭಾನುವಾರ ಆರಂಭವಾಗಿದೆ. ಜಗದ್ವಿಖ್ಯಾತ ಮಾಡೆಲ್‌ಗಳು, ಸಿನಿಮಾ ತಾರೆಯರು ವಿಭಿನ್ನ ಗೆಟಪ್ ಗಳ ಮೂಲಕ ಈ ಫ್ಯಾಶನ್ ಶೋದಲ್ಲಿ ಬೆಡಗು ಬಿನ್ನಾಣಗಳಿಂದ ಕಂಗೊಳಿಸುತ್ತಿದ್ದಾರೆ. ಇಂತಹ ಪ್ರಸಿದ್ಧ ಜಾಗತಿಕ ಶೋನಲ್ಲಿ ಸುಧಾ ರೆಡ್ಡಿ ಅವರು ಪಾಲ್ಗೊಂಡಿದ್ದರು.
View this post on Instagram
ಅಮೆರಿಕದಲ್ಲಿರುವ ಬಿಲಿಯನೇರ್ ಹಾಗೂ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟಕ್ರ್ಚರ್‌ನ ಎಂಡಿ ಮೇಘ ಕೃಷ್ಣ ರೆಡ್ಡಿ ಅವರ ಪತ್ನಿ ಸುಧಾ ರೆಡ್ಡಿ ಫಲ್ಗುಣಿ ಹಾಗೂ ಶೇನ್ ಪಿಕಾಕ್ ಅವರು ಸಿದ್ದಪಡಿಸಿದ ಅದ್ಭುತ ವಿನ್ಯಾಸದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ತಮ್ಮ ಕೈಯಲ್ಲಿ ಗಣೇಶನ ಮೂರ್ತಿಯನ್ನು ಹಿಡಿದುಕೊಂಡಿದ್ದಾರೆ. ಈ ಫೋಟೊಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಇನ್ನು 1948 ರಿಂದ ಅಮೆರಿಕದ ನ್ಯೂಯಾರ್ಕ್ ಮೆಟ್ರೊಪಾಲಿಟಿನ್ ಕಲಾ ವಸ್ತುಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ಮೆಟ್ ಗಾಲಾ ಫ್ಯಾಶನ್ ಶೋ ನಡೆಯುತ್ತದೆ. ಇಲ್ಲಿ ಭಾಗವಹಿಸಲು ಕೋಟ್ಯಧಿಪತಿಗಳಿಗೆ ಮಾತ್ರ ಸಾಧ್ಯ. ಇಲ್ಲಿ ಒಂದು ಟಿಕೆಟ್‌ಗೆ 30 ಸಾವಿರ ಯುಸ್ ಡಾಲರ್ ಇದೆ.
Space Station: ಸುನೀತಾ ವಿಲಿಯಮ್ಸ್ ವಾಪಸ್ ವಿಳಂಬ: ಶುಭಾಂಶು ಯಾತ್ರೆಗೂ ತೊಡಕು
Slams: ಮಸೂದೆಗೆ ಗವರ್ನರ್ ಸಹಿ ಹಾಕದಿದ್ದರೆ ಸರಕಾರಕ್ಕೆ ತಿಳಿಸಬೇಕಲ್ಲ?: ಸುಪ್ರೀಂ ಕೋರ್ಟ್
Mahakumbha: 25 ದಿನದಲ್ಲಿ 40 ಕೋಟಿ ಭಕ್ತರಿಂದ ಪುಣ್ಯಸ್ನಾನ
Buy Food: ವಂದೇ ಭಾರತ್ನಲ್ಲಿನ್ನು ಬುಕ್ಕಿಂಗ್ ಇಲ್ಲದೆಯೂ ಆಹಾರ ಖರೀದಿ ಸಾಧ್ಯ
Dantewada: ಕೊಡಲಿಯಿಂದ ಕೊಚ್ಚಿ ಮತ್ತೊಬ್ಬ ನಾಗರಿಕನ ಹತ್ಯೆಗೈದ ನಕ್ಸಲರು!
You seem to have an Ad Blocker on.
To continue reading, please turn it off or whitelist Udayavani.