ಸುಖಕರ ಪ್ರವಾಸಕ್ಕೆ ‘ಟ್ರಾವೆಲ್ ಬ್ಯಾಗ್’
Team Udayavani, Mar 28, 2021, 2:33 PM IST
ನೀವು ವೀಕೆಂಡ್ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಿರಾ ? ಮನೆಯಿಂದ ಹೊರಡುವ ಮುನ್ನ ಹಳೆಯ ಸೂಟ್‍ಕೇಸ್‍ನಲ್ಲಿ ಬಟ್ಟೆ ತುಂಬಲು ಕಷ್ಟ ಪಡುತ್ತಿದ್ದಿರಾ? ಹಾಗಾದರೆ ಇಲ್ಲೊಂದು ಕ್ಷಣ ಗಮನ ನೀಡಿ. ನಿಮ್ಮ ಪ್ರವಾಸ ಆರಾಮದಾಯಕ ಹಾಗೂ ಸುಖಕರವಾಗಬೇಕಾದರೆ ನೀವು ತೆಗೆದುಕೊಂಡು ಹೋಗುವ ಲಗೇಜ್ ಬ್ಯಾಗ್ ಕೂಡ ಒಂದು ಕಾರಣವಾಗುತ್ತದೆ.
ಸ್ನೇಹಿತರ ಜತೆ ದೀರ್ಘಕಾಲಿಕ ಪ್ರವಾಸ ಇಲ್ಲವೆ ಒಂದೆರಡು ದಿನಗಳ ಟ್ರಿಪ್ ಕೈಗೊಳ್ಳಲು ನೀವು ಪ್ಲ್ಯಾನ್ ಮಾಡಿದ್ದರೆ, ಮೊದಲು ನೀವು ತೆಗೆದುಕೊಂಡು ಹೋಗುವ ವಸ್ತುಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಅದರ ಜತೆಗೆ ನಿಮ್ಮ ವಸ್ತುಗಳನ್ನು ಕ್ಯಾರಿ ಮಾಡಲು ನೀವು ಉಪಯೋಗಿಸುವ ಟ್ರಾವೆಲ್ ಬ್ಯಾಗ್ ಕೂಡ ಬಹುಮುಖ್ಯ.
ಸಾಮಾನ್ಯವಾಗಿ ಟ್ರಾವೆಲ್ ಬ್ಯಾಗ್‍ಗಳು ಕಡಿಮೆ ತೂಕದವು ಆಗಿರಬೇಕು. ಸುಲಭವಾಗಿ ತೆಗೆದುಕೊಂಡು ಹೋಗುವಂತಿರಬೇಕು. ಪ್ರವಾಸದ ವೇಳೆಯಲ್ಲಿ ನಿಮ್ಮ ಟ್ರಾವೆಲ್ ಬ್ಯಾಗ್ ನಿಮಗೆ ಕಿರಿಕಿರಿಯಾಗಬಾರದು. ಹಾಗಾದರೆ ಸದ್ಯ ನಿಮಗಾಗಿ ಮಾರುಕಟ್ಟೆಯಲ್ಲಿರುವ ಕೆಲವು ಸುಂದರ ಟ್ರಾವಲ್ ಬ್ಯಾಗ್ ಇಲ್ಲಿವೆ ನೋಡಿ.
- ಬ್ಯಾಕ್‍ಪ್ಯಾಕ್ ಸ್ಟ್ರೈಲ್ : ಪ್ರವಾಸಿಗರಿಗೆ ಬ್ಯಾಕ್‍ಪ್ಯಾಕ್ ಶೈಲಿಯ ಈ ಬ್ಯಾಗ್ ತುಂಬ ಅನುಕೂಲಕರ. ನಿಮಗೆ ಅಗತ್ಯ ಇರುವ ವಸ್ತುಗಳನ್ನು ತುಂಬಿಕೊಂಡು, ಹೆಗಲ ಮೇಲೆ ಬ್ಯಾಗ್ ಹಾಕಿಕೊಂಡು ಎಷ್ಟು ದೂರವಾದರೂ ನಡೆಯಬಹುದು. ಇದು ಕ್ಯಾರಿ ಮಾಡಲು ಸುಲಭ ಹಾಗೂ ನೋಡಲು ಅತ್ಯಾಕರ್ಷಕವಾಗಿಯೂ ಕಾಣಿಸುತ್ತದೆ.
- ಡಫೆಲ್ ಬ್ಯಾಗ್ : ಬಟ್ಟೆ ತುಂಬಿದ ಹೆಣಬಾರದ ಸೂಟ್‍ಕೇಸ್ ಹೊತ್ತುಕೊಂಡು ಸುಸ್ತಾಗುವ ಬದಲಿಗೆ ಡಫೆಲ್ ಬ್ಯಾಗ್ ಮೊರೆ ಹೊಗುವುದು ಉತ್ತಮ. ಇವು ಹಗುರ ಹಾಗೂ ಅರಾಮದಾಯಕವಾಗಿವೆ. ಒಂದೆರಡು ದಿನಗಳ ಪ್ರವಾಸಕ್ಕೆ ಡಫೆಲ್ ಬ್ಯಾಗ್ ಉತ್ತಮ ಆಯ್ಕೆ.
- ಟ್ರಾವೆಲ್ ಟೂಟೆ : ನೀವು ಪ್ರವಾಸಕ್ಕೆ ಹೊರಡುವ ಮುನ್ನ ಅಗತ್ಯ ಇರುವ ಎಲ್ಲ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು ಅಗತ್ಯವೆನಿಸಿದರೆ ಟೂಟೆ ಬ್ಯಾಗ್ ನಿಮ್ಮ ಸಹಾಯಕ್ಕೆ ಬರಬಹುದು.
- ಮೆಸೆಂಜರ್ ಬ್ಯಾಗ್ : ಇವು ಭದ್ರತೆ ದೃಷ್ಟಿಯಿಂದಲೂ ಉತ್ತಮವಾಗಿರುವ ಬ್ಯಾಗ್. ಇದು ಪರ್ಸ್ ಇಡಲು ಹೊಸ ವಿನ್ಯಾಸವನ್ನು ಹೊಂದಿದೆ.
ಟ್ರಾವೆಲ್ ಬ್ಯಾಗ್ ಖರೀದಿಸುವ ಮುನ್ನ ಗಮನಿಸಬೇಕಾದ ಅಂಶಗಳು :
ಅಳತೆ ಮತ್ತು ತೂಕ :
ಬ್ಯಾಗ್ ಖರೀದಿಸುವ ಮುನ್ನ ಅದರ ಅಳತೆ ಹಾಗೂ ಅದರ ತೂಕದ ಬಗ್ಗೆ ಗಮನ ನೀಡಿ. ಎಷ್ಟು ತೂಕದ ವಸ್ತುಗಳನ್ನು ಅದರಲ್ಲಿ ಇಡಬಹುದು ಎಂಬುದರ ಬಗ್ಗೆ ವಿಚಾರಿಸಿಕೊಳ್ಳಿ.
ಎಲ್ಲ ಫೀಚರ್ ಬಗ್ಗೆ ತಿಳಿದುಕೊಳ್ಳಿ :
ಕಡಿಮೆ ತೂಕದ ಬ್ಯಾಗ್ ಮೇಲಿನ ಆಫರ್ ಗಳು, ಇತ್ತೀಚಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಬ್ಯಾಗ್, ಅವು ಹೊಂದಿರುವ ವಿಶೇಷ ಫೀಚರ್ ( ಉದಾ: ವಾಟರ್ ಫ್ರ್ಯೂಪ್) ಬಗ್ಗೆ ತಿಳಿದುಕೊಳ್ಳಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.