ಮುಖ ಮರೆ ಮಾಚೋದರಲ್ಲೂ ಇದೆ ಸೌಂದರ್ಯ ; ಫ್ಯಾಶನ್ ಲೋಕದಲ್ಲಿ ಮಾಸ್ಕ್ ಗಳ ಸಾಮ್ರಾಜ್ಯ
Team Udayavani, May 24, 2020, 8:35 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ -19ರ ವಿರುದ್ಧ ಹೋರಾಡುವಲ್ಲಿ ಮಾಸ್ಕ್ ಗಳು ಅನಿವಾರ್ಯವೂ ಹೌದು. ಅತ್ಯಗತ್ಯವೂ ಹೌದು.
ಈ ವೈಯಕ್ತಿಕ ರಕ್ಷಣಾ ಸಾಧನವು ಫ್ಯಾಶನ್ ಲೋಕದಲ್ಲಿ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ. ಮಾಸ್ಕ್ ಧರಿಸಿ ತಮ್ಮ ಮುಖಾರವಿಂದವನ್ನು ತೋರಿಸುವುದಾದರೂ ಹೇಗಪ್ಪಾ ಎಂದುಕೊಂಡರೆ ಫ್ಯಾಶನ್ ಪ್ರಪಂಚ ಮಾತ್ರ ಭಿನ್ನವಾಗಿ ಯೋಚಿಸುತ್ತದೆ.
ಮಾಸ್ಕ್ ನಲ್ಲೇ ವಿವಿಧ ವಿನ್ಯಾಸಗಳನ್ನು ಒಳಗೊಂಡಂತೆ ನಿಮ್ಮ ದಿರಿಸಿಗೆ ಒಪ್ಪುವ ಮಾಸ್ಕ್ ಗಳನ್ನು ರಚಿಸಿ ಮಾರುಕಟ್ಟೆಗೆ ಬಿಡುವ ಪ್ರಯತ್ನಗಳು ಜಾರಿಯಲ್ಲಿವೆ.
ಫ್ಯಾಶನ್ ಲೋಕದಲ್ಲಿ ಮುಖದ ಸೌಂದರ್ಯಕ್ಕೆ ವಿಶೇಷ ಮನ್ನಣೆ ಇದೆ. ಆದರೆ ಈ ಮಾಸ್ಕ್ ಹಾಕಿದರೆ ಸೌಂದರ್ಯವನ್ನು ಬಿಂಬಿಸುವುದಾದರೂ ಹೇಗೆ? ಎಂಬ ಪ್ರಶ್ನೆಯೂ ಫ್ಯಾಶನ್ ಎಕ್ಸ್ ಪರ್ಟ್ ಗಳ ತಲೆತಿನ್ನುವಂತೆ ಮಾಡಿದೆ.
ಎಲ್ಲೆಲ್ಲೂ ಮಾಸ್ಕ್ ಲೋಕ
ಹೊರಗೆ ಇಣುಕಿ ನೋಡಿದರೆ ತೀರಾ ನೆರೆ ಮನೆಯವರ ಪರಿಚಯವೂ ನಮಗೆ ಸಿಗಲಾರದು. ಯಾಕೆಂದರೆ ಮಾಸ್ಕ್ ನೊಳಗಿನ ವ್ಯಕ್ತಿಯ ಗುರುತಿಸುವುದಾದರೂ ಹೇಗೆ.
ಅದೇ ಮಾಸ್ಕ್ ನಲ್ಲಿ ಚಂದದ ಕಸೂತಿಯ ಮಧ್ಯೆ ಹೂ ಒಂದನ್ನು ರಚಿಸಿ ಅದರ ಮಧ್ಯೆ ತಮ್ಮ ನಿಕ್ ನೇಮ್ ಬರೆದರೆ, ಅದೂ ನಮ್ಮ ಗಮನ ಸೆಳೆಯಬಹುದು ಮತ್ತೆ ಮತ್ತೆ ನೋಡಬೇಕೆಂಬ ಕುತೂಹಲ ಮೂಡಿಸಬಹುದು.
ಸುಮ್ಮನೆ ಗಮನಿಸಿ, ಹೊರಗಡೆ ಹೊಗುವವರೆಲ್ಲ ಒಂದೇ ಬಣ್ಣದ ಮಾಸ್ಕ್ ಗಳನ್ನು ಧರಿಸಿದ್ದಾರೆಯೇ, ಅವರ ಬಟ್ಟೆಗೆ ಆ ಮಾಸ್ಕ್ ಗಳು ಎಷ್ಟು ಮ್ಯಾಚಿಂಗ್ ಇವೆ ಇದನ್ನೂ ಗಮನಿಸಿ, ಅಲ್ಲಿಗೆ ನಿಮ್ಮ ಸೌಂದರ್ಯ ಪ್ರಜ್ಞೆಯೂ ಜಾಗೃತವಾಗುತ್ತದೆ.
ಮುಖ ಮರೆ ಮಾಚೋದರಲ್ಲೂ ಇದೆ ಸೌಂದರ್ಯ
ಹೊಸ ವಿನ್ಯಾಸದ ಮಾಸ್ಕ್ ಗಳನ್ನು ಧರಿಸಿದ ಪ್ರತಿಭಟನಕಾರರರು ಫ್ರಾನ್ಸ್ ಬೀದಿಗಳಲ್ಲಿ ಈ ಹಿಂದೆ ಕಾಣ ಸಿಗುತ್ತಿದ್ದರು. ಆದರೆ ಈ ಪರಿಯಾಗಿ ಮಾಸ್ಕ್ ಧರಿಸುವ ಸಾಧ್ಯತೆಯನ್ನು ತೆರೆದಿಟ್ಟದ್ದು ಕೋವಿಡ್ ಪ್ರಭಾವ ಮಾತ್ರ.
ಇವು ವೈರಸ್ ರಕ್ಷಣೆಗಾಗಿ ಧರಿಸಲ್ಪಟ್ಟರೂ ಅದರಲ್ಲೇ ಮ್ಯಾಚಿಂಗ್ ಆರಿಸುವ ಮಹಿಳಾ ಮಣಿಗಳಿಗೇನೂ ನಮ್ಮಲ್ಲಿ ಕಮ್ಮಿ ಇಲ್ಲ. ಮಾಸ್ಕ್ ಹಾಕಿದ್ದರೂ ಜನರ ಕಣ್ಮಣ ಸೆಳೆಯುವಂತಿರಬೇಕು ಎಂಬುದು ಈಗಿನ ಟ್ರೆಂಡ್ ಆಗಿದೆ.
ಬ್ರಾಂಡೆಡ್ ಮಾಸ್ಕ್ ಗಳಿಗೆ ಡಿಮ್ಯಾಂಡ್
ಯಾವುದೇ ವಸ್ತುಗಳ ಬೆಲೆಯೂ ಅದರ ಬ್ರಾಂಡ್ ಮೇಲೆ ನಿರ್ಧರಿತವಾಗಿರುತ್ತದೆ. ಇದೀಗ ಮಾಸ್ಕ್ ಗಳ ಖರೀದಿಗೂ ಹೆಚ್ಚು ಜನರು ಆಸಕ್ತಿ ವಹಿಸಿದ್ದರಿಂದ ಅವುಗಳ ಬೆಲೆ ದಿನೇ ದಿನೇ ಏರುತ್ತಲೇ ಇದೆ.
ಮಾಸ್ಕ್ ನಲ್ಲೇ ವ್ಯಕ್ತಿತ್ವ
ಮನೆಯಲ್ಲೇ ಸೃಜನಾತ್ಮಕವಾಗಿ ಮಾಸ್ಕ್ ಗಳನ್ನು ತಯಾರಿಸಿ ಧರಿಸುವ ಅಪಾರ ಮಂದಿ ನಮಗೆ ಕಾಣಸಿಗುತ್ತಾರೆ. ಅವರಿಗಿಷ್ಟದ ವಿನ್ಯಾಸ ನೀವು ಧರಿಸೋ ಮಾಸ್ಕ್ ಗಳು ನಿಮ್ಮ ವ್ಯಕ್ತಿತ್ವ ತಿಳಿಸುತ್ತವೆ ಎಂದರೆ ಅದನ್ನೂ ನೀವು ನಂಬಲೇಬೇಕಾಗುತ್ತದೆ.
ಸರಕಾರವೂ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಿರುವುದರಿಂದ ಧರಿಸುವ ಮಾಸ್ಕ್ ನಲ್ಲೇ ಫ್ಯಾಶನ್ ಮಾಡುವ ಮನಸ್ಥಿತಿ ಯುವ ಜನರದ್ದು.
ಮಾಸ್ಕ್ ನಲ್ಲೂ ಎರಡು ವಿಧ
1. ಮಾಲಿನ್ಯ ನಿಯಂತ್ರಕ
ಹೆಚ್ಚಿನ ಎಲ್ಲ ಮಾಸ್ಕ್ ಗಳು ಮಾಲಿನ್ಯ ನಿಯಂತ್ರಣದಲ್ಲಿ ಸಹಕಾರಿಯಾಗುತ್ತವೆ. ಸಾಮಾನ್ಯ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳು ಕೇವಲ ಹೊಗೆಯಿಂದ, ಧೂಳಿನಿಂದ ರಕ್ಷಣೆ ನೀಡಲಷ್ಟೇ ಶಕ್ತವಾಗಿರುತ್ತದೆ. ಇದನ್ನು ಕೋವಿಡ್ ರಕ್ಷಣೆಗಾಗಿ ಧರಿಸಿದರೆ ಯಾವ ಪ್ರಯೋಜನವೂ ಇಲ್ಲ.
2. ವೈರಸ್ ನಿಯಂತ್ರಕ
ಎನ್19ನಂತಹ ಮಾಸ್ಕ್ ಗಳು ಮಾತ್ರವೇ ಶೇ. 95 ವೈರಸ್‌ಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಇದೀಗ ಇಂತಹ ಮಾಸ್ಕ್ ಗಳಿಗೆ ವಿಪರೀತ ಬೇಡಿಕೆ ಇದ್ದರೂ ಅದರ ಪೂರೈಕೆಯಲ್ಲಿ ಕೊರತೆ ಅಪಾರವಿದೆ.
‘2020ರಲ್ಲಿ ಮಾಸ್ಕ್ ಕೇವಲ ರಕ್ಷಣೆಗಾಗಿ ಮಾತ್ರ ಅಲ್ಲ. ಅದನ್ನು ಧರಿಸುವುದೂ ಒಂದು ಫ್ಯಾಶನ್. ಇದು ನಾನು ಪ್ರತಿದಿನ ಧರಿಸಬೇಕಾದ ವಿಷಯವಾಗಿದೆಯೆಂದು ನಾನು ಭಾವಿಸುತ್ತೇನೆ’ ಎಂದು ಖ್ಯಾತ ರೂಪದರ್ಶಿಯಾಗಿರುವ ಕೋಲ್ಬಿ ಅಭಿಪ್ರಾಯ ಪಡುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.