ತ್ವಚೆಗೆ ವಿಶೇಷವಾದ ಆರೈಕೆ ಮುಖ್ಯ…ಚಳಿಗಾಲದ ಬಟ್ಟೆಗಳು
Team Udayavani, Nov 12, 2020, 10:09 AM IST
ಬದಲಾವಣೆ ಎನ್ನುವುದು ಪ್ರಕೃತಿ ನಿಯಮವೆನ್ನು ವುದು ಬದಲಾಗುವ ಋತುಮಾನಗಳಿಂದ ತಿಳಿದುಕೊಳ್ಳಬಹುದಾಗಿದೆ. ಪ್ರತಿಯೊಂದು ಕಾಲವೂ ವಾತಾವರಣದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ. ಅಂತಹ ಕಾಲಗಳಲ್ಲಿ ಎಲ್ಲರಿಗೂ ಇಷ್ಟವೆನಿಸುವುದು ಚುಮುಚುಮು ಚಳಿಗಾಲ. ಚಳಿಗಾಲವು ಮನಸ್ಸಿಗೆ ಮುದ ನೀಡುವಂತಹ ಕಾಲವಾಗಿದೆ. ಆದರೆ ತ್ವಚೆಗೆ ವಿಶೇಷವಾದ ಆರೈಕೆಯ ಆವಶ್ಯಕತೆಯಿರುತ್ತವೆ. ಅಷ್ಟೇ ಅಲ್ಲದೆ ಚಳಿಗಾಲದಲ್ಲಿ ಧರಿಸುವ ಬಟ್ಟೆಗಳ ಬಗ್ಗೆಯೂ ಗಮನಹರಿಸುವುದು ಅತ್ಯಂತ ಮುಖ್ಯವಾದುದಾಗಿದೆ. ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಸಾಮಾನ್ಯ. ಆದರೆ ಇಂದು ಎಲ್ಲಾ ಮಹಿಳೆಯರೂ ಕೂಡ ಫ್ಯಾಷನೇಬಲ್ ಆಗಿ ಕಾಣಬಯಸುವುದರಿಂದ ಯಾವ ಬಗೆಯ ಫ್ಯಾಷನೇಬಲ್ ಆಗಿರುವ ಹಾಗೂ ಬೆಚ್ಚಗೂ ಇಡುವ ಬಟ್ಟೆಗಳನ್ನು ಕೊಳ್ಳಬೇಕೆನ್ನುವಲ್ಲಿ ಅಥವಾ ಧರಿಸಬೇಕೆನ್ನುವಲ್ಲಿ ಗೊಂದಲಗಳನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಚಳಿಗಾಲದ ವಿಶೇಷ ಬಗೆಯ ಬಟ್ಟೆಗಳೆಂದರೆ ಉಲ್ಲನ್ ದಿರಿಸುಗಳು, ಮಫ್ಲರ್ಸ್, ಸ್ಕಾಫುಗಳು, ಗ್ಲೌಸುಗಳು, ಸ್ವೆಟರುಗಳು ಇತ್ಯಾದಿ. ಈ ಚಳಿಗಾಲಕ್ಕೆ ನೀವು ಧರಿಸಲು ಕೊಳ್ಳುವ ಬಟ್ಟೆಗಳ ಆಯ್ಕೆಗೆ ಸಹಾಯಕವಾಗಬಲ್ಲ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.
1ಉಲ್ಲನ್ ದಿರಿಸುಗಳು: ಉಲ್ಲನ… ಬಟ್ಟೆಯು ಚಳಿಗಾಲಕ್ಕೆ ನಮ್ಮ ದೇಹವನ್ನು ಬೆಚ್ಚಗಿಡುವಲ್ಲಿ ಸಹಾಯಕವಾಗಬಲ್ಲವು. ಇವುಗಳು ಕೇವಲ ಸ್ವೆಟರುಗಳ ಮಾದರಿಯಲ್ಲಿ ದೊರೆಯುತ್ತಿತ್ತು. ಆದರೆ ಇಂದು ಉಲ್ಲನ್‌ನಲ್ಲಿ ಎಲ್ಲಾ ಬಗೆಯ ಮಾಡರ್ನ್ ಹಾಗೂ ಫ್ಯಾಷನೇಬಲ… ಎನಿಸುವ ದಿರಿಸುಗಳು ದೊರೆಯುತ್ತವೆ. ಚಳಿಗಾಲಕ್ಕೆಂದೇ ವಿಶೇಷವಾಗಿ ಉಲ್ಲನ್ ಥೆಡ್‌ಗಳಿಂದ ಸಿದ್ಧಪಡಿಸಿದ ಮಾಡರ್ನ್ ಮತ್ತು ಫ್ಯೂಷನ್‌ವೇರು ಗಳಾದ ಕುರ್ತಾಗಳು, ಟ್ಯೂನಿಕ್‌ಗಳು, ಸ್ವೀಟ… ಶರ್ಟುಗಳು, ಟಾಪುಗಳು ಇತ್ಯಾದಿಗಳು ದೊರೆಯುತ್ತವೆ. ಇವುಗಳನ್ನು ಧರಿಸಿದಾಗ ಸ್ವೆಟರುಗಳ ಆವಶ್ಯಕತೆಯಿರುವುದಿಲ್ಲ. ಈ ಬಗೆಯ ಉಲ್ಲನ್ ಉಡುಪುಗಳೇ ನಮ್ಮ ದೇಹವನ್ನು ಬೆಚ್ಚಗಿಡುವಲ್ಲಿ ಸಹಾಯಕವಾಗಬಲ್ಲವು.
2ಮಫ್ಲರುಗಳು: ಮಫ್ಲರುಗಳಲ್ಲಿ ಹತ್ತು ಹಲವಾರು ವಿಧಗಳನ್ನು ಕಾಣಬಹುದಾಗಿದೆ. ದೇಹದ ಅಂಗಾಂಗಗಳನ್ನು ಹೋಲಿಸಿದಾಗ ಚಳಿಯ ಅನುಭವ ಹೆಚ್ಚಾಗಿ ಬರುವುದು ಕಿವಿಗೆ. ಆದ್ದರಿಂದ ಕಿವಿಯನ್ನು ಆವರಿಸುವ ಮಫ್ಲರುಗಳು ಕೂಡ ಫ್ಯಾಷನಬಲ… ಆದ ಬಗೆಗಳಲ್ಲಿ ದೊರೆಯುತ್ತವೆ.
3ಸ್ಕಾರ್ಫ್: ಇನ್ನು ಬಹು ಉಪಯೋಗಿಯಾಗಿ ಆಗಿ ಬಳಸಬಹುದಾದ ಸ್ಕಾಫುìಗಳ ಬಗೆಗೆ ಹೇಳುವುದಾದರೆ ಹಲವು ಬಗೆಗಳಲ್ಲಿ ದೊರೆಯುವ ಇವುಗಳು ಚಳಿಗಾಲದ ಟ್ರೆಂಡಿ ಆಕ್ಸೆಸ್ಸರಿ ಎನಿಸಿವೆ. ಕುತ್ತಿಗೆಯನ್ನು ಆವರಿಸುವ ಈ ಬಗೆಯ ಸ್ಕಾರ್ಫ್ಗಳು ಹಲವು ವಿಧಗಳಲ್ಲಿ ದೊರೆಯುತ್ತವೆ. ಹಲವು ವಿಧದ ಬಟ್ಟೆಗಳಿಂದ ತಯಾರಿಸಲ್ಪಟ್ಟ ಸ್ಕಾರ್ಫ್ಗಳು ದೊರೆಯುತ್ತಲಿದ್ದು ವಿಭಿನ್ನ ಡಿಸೈನನ್ನು ಹೊಂದಿರುತ್ತವೆ. ಸಿಲ್ಕ…, ಉಲ್ಲನ್, ಕಾಟನ್, ನೆಟ್ಟೆಡ್, ಜ್ಯೂಟ್, ಶಿಫಾನ್, ಟೆರಿಕಾಟ್, ಸಿಲ್ಕ… ಇತ್ಯಾದಿ ಬಟ್ಟೆಗಳಲ್ಲಿ ದೊರೆಯುತ್ತವೆ. ಅಷ್ಟೇ ಅಲ್ಲದೆ ಪ್ರಿಂಟೆಡ್ ಮತ್ತು ಪ್ಲೆ„ನ್ ಎರಡೂ ಬಗೆಗಳಲ್ಲಿಯೂ ದೊರೆಯುವುದರಿಂದ ಆಯ್ಕೆಗೆ ವಿಫುಲ ಅವಕಾಶವಿರುತ್ತವೆ. ಪ್ರಯಾಣದ ಸಂದರ್ಭದಲ್ಲಿ ಇವುಗಳ ಧರಿಸುವಿಕೆಯಿಂದ ನಮ್ಮ ಕೂದಲನ್ನೂ ರಕ್ಷಿಸುವ ಕೆಲಸವನ್ನು ಮಾಡುತ್ತವೆ ಈ ಸ್ಕಾರ್ಫ್ಗಳು. ದಿರಿಸಿಗೆ ಮ್ಯಾಚ್ ಆಗುವಂತಹ ಸ್ಕಾರ್ಫ್ಗಳನ್ನು ಆಯ್ಕೆಮಾಡಿಕೊಳ್ಳಬಹುದು.
4ವಿಂಟರ್ ಕ್ಯಾರ್ಫ್: ವಿಂಟರ್ ಕ್ಯಾಪುಗಳು ಬೆಳಗಿನ ಜಾಗಿಂಗ್ ಅಥವಾ ಪ್ರಯಾಣಗಳಲ್ಲಿ ನಮ್ಮ ಕಿವಿಗಳನ್ನು ಬೆಚ್ಚಗಿಡಲು ಬಳಸಲ್ಪಡುತ್ತವೆ. ಅತಿಯಾದ ಚಳಿಬೀಳುವ ಪ್ರದೇಶಗಳಲ್ಲಿ ಹಲವು ಸಮಯ ಈ ಬಗೆಯ ಕ್ಯಾಪುಗಳನ್ನು ಧರಿಸುವ ಆವಶ್ಯಕತೆಯಿರುತ್ತದೆ. ಅಂತಹ ಸಂದರ್ಭಗಳಲ್ಲಿ ಮಹಿಳೆಯು ಸ್ಟೈಲಿಶ್ ಆದ ಕ್ಯಾಪನ್ನು ಧರಿಸಲು ಇಚ್ಛಿಸುವುದು ಸಹಜವಾದುದು. ವಿಂಟರ್ ಕ್ಯಾಪುಗಳಲ್ಲಿ ಹಲವು ಬಗೆಗಳನ್ನು ನೋಡಬಹುದಾಗಿದೆ. ಕ್ಯಾನ್ವಾಸ್ ಕ್ಯಾಪುಗಳು, ಚೂಕ್ ಕ್ಯಾಪುಗಳು, ನೆಟ್ಟೆಡ್ ಹ್ಯಾಟುಗಳು, ವೂಲನ್ ಹ್ಯಾಟುಗಳು, ಕಾಟೂìನ್ ಡಿಸೈನ್ ಉಲ್ಲನ್ ಹ್ಯಾಟುಗಳು, ಬಾಂಬರ್ ಹ್ಯಾಟುಗಳು ಇತ್ಯಾದಿ ಬಗೆಯ ಸ್ಟೈಲಿಶ್ ಆಗಿರುವ ಹ್ಯಾಟುಗಳನ್ನು ಆಯ್ಕೆಮಾಡಿಕೊಳ್ಳುವುದರ ಮೂಲಕ ನಿಮ್ಮ ಫ್ಯಾಷನ್ ಆ್ಯಟಿಟ್ಯೂಡನ್ನು ಮುಂದುವರಿಸಬಹುದಾಗಿದೆ.
5ಹ್ಯಾಂಡ್ ಗ್ಲೌಸುಗಳು: ಚಳಿಗಾಲದಲ್ಲಿ ಕೈಗಳನ್ನು ಬೆಚ್ಚಗಿಡುವುದು ಕೂಡ ಅತ್ಯಂತ ಆವಶ್ಯಕವಾದ ಅಂಶವಾಗಿದೆ. ಲೆದರ್ ಗ್ಲೌಸುಗಳು, ಕಾಟನ್ ಗ್ಲೌಸುಗಳು, ಲೇಸ್ ಗ್ಲೌಸುಗಳು, ಪ್ರಿಂಟೆಡ್ ಗ್ಲೌಸುಗಳು ದೊರೆಯುತ್ತವೆ. ಇಂತಹ ಗ್ಲೌಸುಗಳು ನಿಮ್ಮನ್ನು ಬೆಚ್ಚಗಿಡುವುದಷ್ಟೇ ಅಲ್ಲದೆ ನಿಮ್ಮ ದಿರಿಸಿಗೂ ಒಳ್ಳೆಯ ಸಾಥ್ ಕೊಡುತ್ತವೆ.
6ವಿಂಟರ್ ಪ್ಯಾಂಟುಗಳು: ವಿಂಟರ್ ಪ್ಯಾಂಟುಗಳು ಹಲವು ವಿಧಗಳಲ್ಲಿ ದೊರೆಯುತ್ತವೆ. ಇವುಗಳಲ್ಲಿ ಕ್ಯಾಷುವಲ… ವೇರ್ ಪ್ಯಾಂಟುಗಳು ಹಲವಾರು ಬಗೆಗಳಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತವೆ. ಸಾಮಾನ್ಯ ಚಳಿಯಿರುವ ಪ್ರದೇಶಗಳಿಗೆ ಜೀನ್ಸ್ ಪ್ಯಾಂಟುಗಳು ಬೆಚ್ಚಗಿನ ಅನುಭವವನ್ನು ಕೊಡುತ್ತವೆ. ಇನ್ನುಳಿದಂತೆ ಕಾಟನ್ ಲೆಗ್ಗಿಂಗುಗಳು ಅಥವಾ ಜೆಗ್ಗಿಂಗುಗಳನ್ನು ಕೂಡ ಧರಿಸಬಹುದು. ಟೆರಿಕಾಟ…, ಶಿಫಾನ್, ಸಿಲ್ಕ… ಬಟ್ಟೆಗಳಿಂದ ತಯಾರಾದ ಪ್ಯಾಂಟುಗಳ ಬಳಕೆಯನ್ನು ಚಳಿಗಾಲದಲ್ಲಿ ಕಡಿಮೆಗೊಳಿಸುವುದು ಉತ್ತಮವಾದುದಾಗಿರುತ್ತದೆ.
7ಸ್ವೆಟರುಗಳು: ಸ್ವೆಟರುಗಳೆಂದರೆ ಥಟ್ಟನೆ ನೆನಪಿಗೆ ಬರುವುದು ಉಲ್ಲನ್ ಸ್ವೆಟರುಗಳು. ಇವುಗಳು ಹೆಚ್ಚಾಗಿ ಸಾಂಪ್ರದಾಯಿಕ ಉಡುಗೆಗಳಾದ ಚೂಡಿದಾರ, ಕುರ್ತಾಗಳು ಅಥವಾ ಸೀರೆ ಇಗಳಿಗೆ ಮಾತ್ರ ಹೊಂದುವಂತಹುದಾಗಿದೆ. ಇವುಗಳು ಮಾಡರ್ನ್ ಬಟ್ಟೆಗಳೊಂದಿಗೆ ಹೆಚ್ಚಿನ ಲುಕ್ಕನ್ನು ನೀಡುವುದಿಲ್ಲ. ಆದರೂ ಕೂಡ ಇವುಗಳು ಎವರ್ ಗ್ರೀನ್ ವಿಂಟರ್ ಆಕ್ಸೆಸ್ಸರಿಗಳಲ್ಲೊಂದಾಗಿದೆ.
8ಕೇಪ್ಸ್: ಕೇಪ್‌ಗ್ಳು ಚಳಿಗಾಲದ ಅತ್ಯಂತ ಟ್ರೆಂಡಿಯಾದ ಉಡುಪಾಗಿದೆ. ಇವುಗಳು ಉಳಿದ ಕಾಲದಲ್ಲಿ ಧರಿಸಬಹುದಾಗಿದ್ದರೂ ಚಳಿಗಾಲಕ್ಕೆಂದೇ ಉಲ್ಲನ್ ಕೇಪುಗಳು, ಥೆಡ್ ಕೇಪುಗಳು, ಕಾಟನ್ ಕೇಪುಗಳು, ಫರ್ ಕೇಪುಗಳು, ಫೆಲ್ಟ… ಕೇಪುಗಳು ದೊರೆಯುತ್ತವೆ. ಇವುಗಳು ಸ್ವೆಟರ್‌ಗಳಂತೆಯೇ ಬೆಚ್ಚನೆಯ ಅನುಭವವನ್ನು ನೀಡುತ್ತವೆ. ಸ್ವೆಟರುಗಳಿಗೆ ಹೋಲಿಸಿದಾಗ ಅತ್ಯಂತ ಸ್ಟೈಲಿಶ್ ಲುಕ್ಕನ್ನು ಕೊಡುವಂತಹ ಬಗೆಯಾಗಿದೆ. ಬೇಕಾದ ಬಣ್ಣಗಳ ಆಯ್ಕೆಗೆ ಇಲ್ಲಿ ಅವಕಾಶವಿದೆ.
9ವಿಂಟರ್ ಜಾಕೆಟ್ಸ್ ಮತ್ತು ಶ್ರಗ್ಸ್: ವಿಂಟರ್ ಜಾಕೆಟ…ಗಳು ಮಾಡರ್ನ್ ದಿರಿಸುಗಳಿಗೆ ಸೂಕ್ತವೆನಿಸಿದರೆ ಶ್ರಗ್ಗುಗಳು ಫ್ಯೂಷನ್ ವೇರುಗಳಿಗೆ ಹೊಂದುವಂತಿರುತ್ತವೆ. ಇವುಗಳು ಚಳಿಗಾಲಕ್ಕೆ ನಿಮ್ಮ ಲುಕ್ಕನ್ನು ಸ್ಟೈಲಿಶ್‌ಗೊಳಿಸುವಲ್ಲಿ ಸಹಾಯಕವೆನ್ನಬಹುದಾಗಿದೆ.
10ಶಾಲುಗಳು ಮತ್ತು ದುಪಟ್ಟಾಗಳು: ಇವುಗಳು ಬಹಳ ಹಿಂದಿನಿಂದಲೂ ಬಳಸಲ್ಪಡುತ್ತಿದ್ದ ಬಗೆಗಳಾಗಿದ್ದರೂ ಫ್ಯಾಷನ್ ಲೋಕದಲ್ಲಿ ನಡೆಯುವ ಪ್ರಯೋಗಗಳಿಗೊಳಪಟ್ಟು ವಿಭಿನ್ನವಾದ ಮತ್ತು ಸುಂದರವಾದ ಬಗೆಗಳಲ್ಲಿ ದೊರೆಯಲಾರಂಭಿಸಿವೆ ಎನ್ನಬಹುದಾಗಿದೆ. ಶಾಲುಗಳು ಮತ್ತು ದುಪಟ್ಟಾಗಳು ಹೆಚ್ಚಾಗಿ ಸೀರೆಗಳೊಂದಿಗೆ ಅಥವಾ ಚೂಡಿದಾರಗಳಂತಹ ಸಾಂಪ್ರದಾಯಿಕ ಉಡುಗೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಇವುಗಳಲ್ಲಿ ಹಲವು ಡಿಸೈನುಗಳ ಶಾಲುಗಳು ಮತ್ತು ದುಪಟ್ಟಾಗಳು ದೊರೆಯುತ್ತವೆ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.