ದುಬಾರಿ ವಸ್ತುಗಳು : ಅಟೋಮ್ಯಾಟಿಕ್ ಲೇಸ್ ಶೂ ಬೆಲೆ ಕೇಳಿದ್ರೆ ಹುಬ್ಬೇರಿಸುತ್ತೀರಿ!
Team Udayavani, May 25, 2020, 3:11 PM IST
ಪೆನ್ ಸಿಕ್ಕದೇ ಹೋದರೆ, ಪೆನ್ಸಿಲ್ ಎಲ್ಲಿದೆಯೆಂದು ಹುಡುಕಾಡುವವರು ನಾವು. ಈ ದಿನಗಳಲ್ಲಿ, ಪೆನ್ಸಿಲ್‌ನ ಬಳಕೆ ಮಕ್ಕಳಿಗೆ ಮಾತ್ರ ಸೀಮಿತವಾಗಿದೆ. ಕಲಾವಿದರು, ಬಡಗಿಗಳು, ಕಟ್ಟಡಗಳ ಪ್ಲ್ಯಾನಿಂಗ್ ಮಾಡುವವರಿಗೆ, ಪೆನ್ಸಿಲ್ ಬೇಕೇ ಬೇಕು. ಪೆನ್ಸಿಲ್ ತಯಾರಿಯಲ್ಲಿ ಜಗತ್ತಿನಲ್ಲೇ ಹೆಸರಾದ ಸಂಸ್ಥೆ “ಫೇಬರ್ ಕ್ಯಾಸಲ್’. ಅದು ಆರ್ಡಿನರಿ ಪೆನ್ಸಿಲ್ಲುಗಳನ್ನು ಮಾತ್ರವಲ್ಲ, ದುಬಾರಿ ಬೆಲೆಯ ಲಕ್ಷುರಿ ಪೆನ್ಸಿಲ್ ಅನ್ನು ಕೂಡಾ ತಯಾರಿಸುತ್ತದೆ. ಚಿತ್ರದಲ್ಲಿರುವುದು, ಅಂಥದ್ದೊಂದು ಪೆನ್ಸಿಲ್ 240 ವರ್ಷ ಪುರಾತನದ್ದಾದ ಆಲಿವ್ ಮರ ಮತ್ತು 18 ಕ್ಯಾರೆಟ್ ಚಿನ್ನ ಬಳಸಿ ಇದನ್ನು ತಯಾರಿಸಲಾಗಿದೆ. ಪೆನ್ಸಿಲ್‌ನಲ್ಲೇ ಇರೇಸರ್ ಕೂಡಾ ಇದೆ. ಅಲ್ಲದೆ, ಇದಕ್ಕಾಗಿ ಪ್ರತ್ಯೇಕ ಶಾರ್ಪ್‌ನರ್ ಅನ್ನೂ ಪೆನ್ಸಿಲ್‌ನ ಜೊತೆಯಲ್ಲೇ ನೀಡಲಾಗುತ್ತದೆ. ಪೆನ್ಸಿಲ್ ಅನ್ನು 99 ಬಿಡಿಭಾಗಗಳಿಂದ ಸಿದ್ಧಪಡಿಸಲಾಗಿದೆ. ಸಾಮಾನ್ಯವಾಗಿ, ಪೆನ್ಸಿಲ್‌ಗೆ ಮುಚ್ಚಳ/ ಕ್ಯಾಪ್ ಇರುವುದಿಲ್ಲ. ಆದರೆ ಈ ಪೆನ್ಸಿಲ್‌ಗೆ ಕ್ಯಾಪ್ ಇದೆ. ಕ್ಯಾಪ್‌ನ ತುದಿಯಲ್ಲಿ ಫೇಬರ್ ಕ್ಯಾಸಲ್ ಚಿನ್ಹೆಯಿದ್ದು, ಅದರ ಪಕ್ಕದಲ್ಲೇ ಮೂರು ವಜ್ರದ ಹರಳುಗಳನ್ನು ಕೂರಿಸಲಾಗಿದೆ.
ಅಟೋಮ್ಯಾಟಿಕ್ ಲೇಸ್ ಶೂ : ಬೆಲೆ: 19 ಲಕ್ಷ ರೂ.
ಶೂ ತಯಾರಕ ಸಂಸ್ಥೆ ನೈಕಿ, ತನ್ನ ಸಂಗ್ರಹದಲ್ಲಿ ಹೊಸದೊಂದು ಮಾದರಿಯ, ವಿನೂತನ ಕಾನ್ಸೆಫ್ಟ್ ಶೂ ಒಂದನ್ನು ಹೊಂದಿದೆ. ಈ ಶೂನ ವಿನ್ಯಾಸ ಮತ್ತು
ತಾಂತ್ರಿಕತೆಗೆ ಪ್ರೇರಣೆ, ಒಂದು ಹಾಲಿವುಡ್ ಸಿನಿಮಾ. “ಬ್ಯಾಕ್ ಟು ದ ಫ್ಯೂಚರ್’ ಎನ್ನುವ ಸಿನಿಮಾದಲ್ಲಿ ನಾಯಕ, ಒಂದು ವಿಶೇಷ ಬಗೆಯ ಶೂ ಧರಿಸಿರುತ್ತಾನೆ. ಅದರ ವೈಶಿಷ್ಟ್ಯವೆಂದರೆ, ಲೇಸ್ ಕಟ್ಟಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಕಾಲನ್ನು ಶೂ ಒಳಗೆ ತೂರಿಸಿದರೆ ಸಾಕು, ಅದೇ ಸ್ವಯಂಚಾಲಿತವಾಗಿ ಲೇಸ್ ಕಟ್ಟುತ್ತದೆ. ಅದು ಕೂಡ ಕಾಲಿನ ಗಾತ್ರಕ್ಕೆ ಅನುಗುಣವಾಗಿ, ಹೆಚ್ಚು ಒತ್ತಡ ಬಾರದಂತೆ! ಅದೇ ತಂತ್ರಜ್ಞಾನವನ್ನು ನೈಕಿ ಸಂಸ್ಥೆ, ತನ್ನ “ಏರ್ ಮ್ಯಾಗ್ 2016′ ಎಂಬ ಮಾಡೆಲ್‌ನಲ್ಲಿ ಅಳವಡಿಸಿದೆ. ಈ ಶೂನಲ್ಲಿ, ಬ್ಯಾಟರಿ ಮತ್ತು ಮೋಟಾರ್ ಇದೆ. ಅದರ ಸಹಾಯದಿಂದಲೇ ಅಟೋಮ್ಯಾಟಿಕ್ ಲೇಸ್ ಕಟ್ಟುವ ಪ್ರಕ್ರಿಯೆ ಕಾರ್ಯಗತ ಗೊಳ್ಳುವುದು. ಇದರ ಮಾರಾಟದಿಂದ ಬರುವ ಹಣವನ್ನು, ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರ ಸಹಾಯಾರ್ಥ ವಿನಿಯೋಗಿ ಸಲಿದೆ ಎಂದು ಸಂಸ್ಥೆ ತಿಳಿಸಿತ್ತು. ಶೂನ ಪ್ರಸ್ತುತ ಮಾರುಕಟ್ಟೆ ಬೆಲೆ 19 ಲಕ್ಷ. ಇದನ್ನು ಮಾರುಕಟ್ಟೆಗೆ ಬಿಡುಗಡೆಗೆ ಮುನ್ನ, ಪಾರ್ಕಿನ್ ಸನ್ ಸಹಾಯಾರ್ಥವಾಗಿ ಹರಾಜು ಕಾರ್ಯಕ್ರಮವನ್ನು ನೈಕಿ ಸಂಸ್ಥೆ ಹಮ್ಮಿಕೊಂಡಿತ್ತು. ಅಲ್ಲಿ ಬ್ರಿಟಿಷ್ ಹಾಡುಗಾರನೊಬ್ಬ 28 ಲಕ್ಷ ನೀಡಿ ಈ ಶೂ ಖರೀದಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.