ಬೈಕ್‌ ಪ್ರಿಯರ ಮನ ಕದಿಯುವ ಸರ್ದಾರರು

ಇಲ್ಲಿವೆ ಸಾಹಸ, ಕ್ರೀಡೆ, ಮಾಮೂಲಿ ಪ್ರಯಾಣಕ್ಕೆ ಬಳಸುವ ಎಂಟು ಬೈಕ್‌ಗಳ ಪರಿಚಯ

Team Udayavani, Jun 29, 2020, 9:57 AM IST

Bike

ಬೈಕ್‌ಗಳು ಭಾರತೀಯರಲ್ಲಿ ವಿಪರೀತ ಚಲಾವಣೆ ಯಲ್ಲಿರುವ ವಾಹನಗಳು. ಬಹುತೇಕರಿಗೆ ಇವು ಕೇವಲ ಪ್ರಯಾಣಕ್ಕೆ ಮಾತ್ರ ಅಗತ್ಯವಿರುವ ವಾಹನಗಳು. ಆದರೆ ಇನ್ನು ಕೆಲವರಿಗೆ ಇವು ಸಾಹಸಕ್ಕೆ, ಕ್ರೀಡೆಗೆ ಬಳಸುವಂತಹ ವಾಹನಗಳು. ಒಂದು ವೇಳೆ ನೀವು ಬೈಕ್‌ ಪ್ರಿಯರಾಗಿದ್ದರೆ ಇಲ್ಲಿವೆ ವಿವಿಧ ಶಕ್ತಿಯುಳ್ಳ ಆಕರ್ಷಕ 8 ಬೈಕ್‌ಗಳು.

ಡುಕಾಟಿ ಪಾನಿಗಲೆ ವಿ4
ಡುಕಾಟಿ ಸಂಸ್ಥೆ ಉತ್ಪಾದಿಸಿದ ಮೊದಲ 4 ಸಿಲಿಂಡರ್‌ಎಂಜಿನ್‌ ಬೈಕ್‌ ಇದು. 1,103 ಸಿಸಿ ಶಕ್ತಿ ಹೊಂದಿರುವ ಇದನ್ನು ಪ್ರಯಾಣಕ್ಕೆ ಮಾತ್ರವಲ್ಲ, ಸ್ಪರ್ಧೆಗೂ ಬಳಸಬಹುದು. ಇದರ ಎಂಜಿನ್‌ 211 ಬಿಎಚ್‌ಪಿ ವೇಗದಲ್ಲಿ ಕೆಲಸ ಮಾಡುವ ಶಕ್ತಿ ಹೊಂದಿದೆ. ಭಾರ ಎಳೆಯುವ ಶಕ್ತಿಯೂ ಅಗಾಧ. ಇದರ ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ.

ಟ್ರಿಯುಂಫ್ ಟೈಗರ್‌ 900
ಈ ಬೈಕನ್ನು ಸವ್ಯಸಾಚಿ ಎಂದರೆ ಅತಿಶಯೋಕ್ತಿ ಎಂದುಕೊಳ್ಳಬೇಡಿ. ಎಂತಹ ರಸ್ತೆಯಲ್ಲೂ ಸಂಚರಿಸುತ್ತದೆ. ಕ್ರೀಡಾಸ್ಪರ್ಧೆಗಳಿಗಂತೂ ಹೇಳಿ ಮಾಡಿ ಸಿದ ಮಧ್ಯಮಭಾರದ ಬೈಕ್‌.
ಸದ್ಯ ಟೈಗರ್‌ 900 ಸಾಹಸ ಪ್ರಿಯ ರಿಗೆ, ದೂರದೂರಿಗೆ ಪ್ರಯಾಣ ಹೊರಡುವವರಿಗೆ ಹೇಳಿ ಮಾಡಿಸಿದಂತಿದೆ.

ಬಿಎಂಡಬ್ಲ್ಯೂ ಆರ್‌ 1250 ಜಿಎಸ್‌
ಸಾಹಸ ಕ್ರೀಡಾ ಬೈಕ್‌ ಇದು ಜಗತ್ತಿನಲ್ಲೇ ಅತಿ ಜನಪ್ರಿಯವಾಗಿರುವ ಸಾಹಸ ಕ್ರೀಡಾ ಬೈಕ್‌. ಇದರ ತೂಕ 250 ಕೆಜಿ. 1254 ಸಿಸಿ (ವಾಹನಕ್ಕೆ ಪೂರೈಕೆಯಾಗುವ ಶಕ್ತಿಯ ಅಳತೆ) ಸಾಮರ್ಥಯ ಹೊಂದುವ ಮೂಲಕ, ಇದು ಚಿರತೆಯ ಮೇಲೆ ಕುಳಿತ ಅನುಭವ ನೀಡುತ್ತದೆ. ಎಂಜಿನ್‌ ವೇಗ 134 ಬಿಎಚ್‌ಪಿ, ಎಳೆಯುವ ಶಕ್ತಿ 143 ಎನ್‌ಎಂ.

ಹೊಂಡಾ ಆಫ್ರಿಕಾ ಟ್ವಿನ್‌
ಭಾರತದಲ್ಲಿ ಮಧ್ಯಮಭಾರದ ಸಾಹಸ ಬೈಕ್‌ಗಳ ಬಗೆಗಿನ ಗ್ರಹಿಕೆಯನ್ನೇ ಬದಲಿಸಿದ್ದು ಈ ಬೈಕ್‌. ಮೇಲ್ನೋಟಕ್ಕೆ ಇದು ಗೇರುಗಳಿಲ್ಲದ (ವಾಸ್ತವವಾಗಿ ಗೇರು ಒಳಗೇ ಇರುತ್ತದೆ, ಓಡಿಸುವಾಗ ತನ್ನಷ್ಟಕ್ಕೇ ತಾನೇ ಬದಲಾಗುವ ವ್ಯವಸ್ಥೆಯಿರುತ್ತದೆ), ತಾನೇತಾನಾಗಿ ವೇಗ ವೃದ್ಧಿಸಿಕೊಳ್ಳುವ ಭಾರತದ ಏಕೈಕ ಕ್ರೀಡಾ ಬೈಕ್‌. ಕ್ಲಚ್‌ ಮೂಲಕವೇ ಗೇರನ್ನು ನಿರ್ಧರಿಸಬಹುದು. ಎಂತಹ ರಸ್ತೆಗಳಿಗೂ ಒಗ್ಗಿಕೊಳ್ಳುವ ಇದಕ್ಕೆ ಯಾಕೋ ಜನಪ್ರಿಯತೆ ಸಿಕ್ಕಿಲ್ಲ.

ಸುಜುಕಿ ಜಿಎಸ್‌ಎಕ್ಸ್‌-ಎಸ್‌750
ಬಹುಶಃ ಈ ಬೈಕ್‌ಗಳನ್ನು ನೀವು ರಸ್ತೆಯಲ್ಲಿ ನೋಡಿರಲಿಕ್ಕಿಲ್ಲ, ಬಹಳ ಕೇಳಿರಲಿಕ್ಕೂ ಇಲ್ಲ. ಆದರೆ ಬೈಕ್‌ ಸಾಹಸಿಗಳಿಗೆ ಮಾತ್ರ ಇದು ಅಚ್ಚುಮೆಚ್ಚಿನ ವಾಹನ. ಮಧ್ಯಮಗಾತ್ರದ ಈ ಬೈಕ್‌ ರಸ್ತೆಗೂ, ಸ್ಪರ್ಧಾ ಕಣಕ್ಕೂ ಹೇಳಿ ಮಾಡಿಸಿದಂತಿದೆ. ಕೆಲವು ಸ್ಪರ್ಧಿಗಳಿಗಂತೂ ಇದು ಹೊರಡಿಸುವ ಘರ್ಜನೆಯಂತ ಶಬ್ದ ಬಹಳ ಇಷ್ಟ ಎನ್ನುತ್ತಾರೆ ತಜ್ಞರು.

ಸ್ವದೇಶಿ ರಾಯಲ್‌ ಎನ್ಫಿಲ್ಡ್‌ 650
ರಾಯಲ್‌ ಎನ್‌ಫಿಲ್ಡ್‌ ಬೈಕ್‌ ಹೆಸರನ್ನು ಕೇಳದವರು ಯಾರು? ಭಾರತದ ಅತ್ಯಂತ ಜನಪ್ರಿಯ ಸ್ವದೇಶಿ ಬೈಕ್‌ ಇದು. ಇದರ ಹೊಸ ಆವೃತ್ತಿಗಳು ಆರ್‌ಇ ಇನ್‌ಸೆಪ್ಟರ್‌ 650, ಆರ್‌ಇ ಕಾಂಟಿನೆಂಟಲ್‌ ಜಿಟಿ 650. ಮುಂಚಿನಿಂದಲೂ ವೇಗಕ್ಕೆ, ಅದ್ಭುತ ಸಾಮರ್ಥಯಕ್ಕೆ ಹೆಸರುವಾಸಿ ಎನ್‌ಫಿಲ್ಡ್‌ನ ಈ ಆವೃತ್ತಿಗಳಂತೂ ಕಣ್ಮನ ಸೆಳೆದಿವೆ.

ಟ್ರಿಯುಂಫ್ ಸ್ಟ್ರೀಟ್‌ಟ್ರಿಪಲ್‌ ಆರ್‌ಎಸ್‌
ಮಧ್ಯಮಭಾರದ ಕ್ರೀಡಾ ಬೈಕ್‌ಗಳ ಪೈಕಿ ಇದಕ್ಕೆ ಬಹಳ ಜನಪ್ರಿಯತೆಯಿದೆ. ಹಲವರು ಇದನ್ನು ತಮ್ಮ ಆಯ್ಕೆಯಾಗಿ ಬಳಸುತ್ತಾರೆ. ಇದು 765 ಸಿಸಿ ಸಾಮರ್ಥಯ ಹೊಂದಿದೆ. ಈ ಬೈಕ್‌ಗೆ ಕೆಟಿಎಂ 790 ಡ್ನೂಕ್‌ನಿಂದ ಸ್ಪರ್ಧೆಯಿತ್ತು. ಆದರೆ ಅದು ಬಹಳ ಕಾಲ ಉಳಿಯದಿದ್ದರಿಂದ ಟ್ರಿಯುಂಫ್ ಟ್ರಿಪಲ್‌ ಏಕಾಂಗಿಯಾಗಿ ಸ್ಪರ್ಧೆಯಲ್ಲುಳಿಯಿತು ಎನ್ನುತ್ತಾರೆ ತಜ್ಞರು.

ಕೆಟಿಎಂ 390 ಡ್ನೂಕ್‌
ಈ ಬೈಕ್‌ ಮೊದಲು ಭಾರತದಲ್ಲಿ ಬಿಡುಗಡೆಯಾಗಿದ್ದು 2013ರಲ್ಲಿ. ಇದೀಗ ಬಿಎಸ್‌6 ದರ್ಜೆಗೆ ತಕ್ಕಂತೆ ಬದಲಾಗಿದೆ. ಇದನ್ನು ಬಳಸಿದ ತಜ್ಞರು, ಈ ದಶಕದಲ್ಲೇ ಭಾರತದಲ್ಲಿ ಬಿಡುಗಡೆಯಾದ ಅತ್ಯುತ್ತಮ ಬೈಕ್‌ಗಳಲ್ಲಿ ಇದೂ ಒಂದು ಎನ್ನುತ್ತಾರೆ. ಇದರ ವಿಶೇಷತೆಯೆಂದರೆ ಇದು ಆಸ್ಟ್ರಿಯದ ಕೆಟಿಎಂ, ಭಾರತದ ಬಜಾಜ್‌ ಸೇರಿ ತಯಾರಿಸುವ ಬೈಕ್‌.

ಟಾಪ್ ನ್ಯೂಸ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

kmc

Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

11(1)

Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.