ಯಕೃತ್ತು ಕ್ಯಾನ್ಸರ್‌ಗೆ ಗಣಿಕೆ ಸೊಪ್ಪು ರಾಮಬಾಣ!
health tips
Team Udayavani, Nov 6, 2021, 7:59 AM IST
ತಿರುವನಂತಪುರಂ: ಯಕೃತ್ತು ಕ್ಯಾನ್ಸರ್ ಚಿಕಿತ್ಸೆಗೆ ನಮ್ಮ ನಿಮ್ಮ ಹಿತ್ತಿಲಲ್ಲೇ ಸಿಗುವ “ಕಾಶಿ ಸೊಪ್ಪು'(ಗಣಿಕೆ ಸೊಪ್ಪು) ರಾಮಬಾಣ ಎಂಬ ಮಹತ್ವದ ಸಂಶೋಧನೆಯೊಂ ದನ್ನು ಇಲ್ಲಿನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ(ಆರ್‌ಜಿಸಿಬಿ)ಯ ಇಬ್ಬರು ವಿಜ್ಞಾನಿ ಗಳು ಮಾಡಿದ್ದಾರೆ.
ಮನಾಥಕ್ಕಾಲಿ ಎಂದೂ ಕರೆಯಲ್ಪಡುವ ಈ ಗಣಿಕೆ ಸೊಪ್ಪಿನ ಎಲೆಗಳಿಂದ ಹೊರತೆಗೆದ ಸಂಯುಕ್ತವು ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿ ಎಂಬುದನ್ನು ಕಂಡುಕೊಳ್ಳಲಾಗಿದೆ. ಮಾನವನ ಯಕೃತ್ತಿನಲ್ಲಿ ಕ್ಯಾನ್ಸರ್ ಕೋಶಗಳು ಅನಿಯಂತ್ರಿತವಾಗಿ ಬೆಳೆಯುವುದನ್ನು ತಪ್ಪಿ ಸುವಲ್ಲಿ ಗಣಿಕೆ ಸೊಪ್ಪಿನ ಎಲೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಈ ಎಲೆಗಳಲ್ಲಿನ ಯುಟ್ರೋಸೈಡ್ -ಬಿ ಎಂಬ ಕಣವನ್ನು ಪ್ರತ್ಯೇಕಿಸಿ, ಪರೀಕ್ಷಿಸಿದಾಗ ಯಕೃ ತ್ತಿನ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು ಎಂಬುದನ್ನು ಕಂಡುಕೊಳ್ಳಲಾಯಿತು ಎಂದು ಆರ್‌ಜಿಸಿಬಿ ಹಿರಿಯ ವಿಜ್ಞಾನಿ ರೂಬಿ ಜಾನ್ ಆ್ಯಂಟೋ ಮತ್ತು ಅವರ ವಿದ್ಯಾರ್ಥಿ ಡಾ. ಲಕ್ಷ್ಮೀ ಆರ್.ನಾಥ್ ಹೇಳಿದ್ದಾರೆ.
ಇವರು ಅಭಿವೃದ್ಧಿಪಡಿಸಿರುವ ಸಂಯುಕ್ತಕ್ಕೆ ಅಮೆರಿಕದ ಆಹಾರ ಮತ್ತು ಔಷಧ ಮಹಾನಿರ್ದೇಶನಾಲಯವು “ಆಫìನ್ ಡ್ರಗ್'(ವಾಣಿಜ್ಯಿಕವಾಗಿ ಅಭಿವೃದ್ಧಿಪಡಿಸದ ಔಷಧ) ಎಂಬ ಸ್ಥಾನಮಾನ ನೀಡಿದೆ. ಅಲ್ಲದೇ, ಯುಎಸ್‌ಎ, ಕೆನಡಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ ಈ ಔಷಧಕ್ಕೆ ಪೇಟೆಂಟ್ ಕೂಡ ಸಿಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.