ಬ್ಯಾಕ್ಟೀರಿಯಾ ನಿರ್ಮೂಲನೆಗೆ 4 ನಿಮಿಷಗಳ ಬ್ರಷಿಂಗ್ ಬೇಕು!
Team Udayavani, Oct 29, 2021, 6:30 AM IST
ಪ್ರತೀ ದಿನ ಬೆಳಗ್ಗೆ ನಮ್ಮ ಹಲ್ಲುಗಳನ್ನು ಟೂತ್‌ಬ್ರಷ್ ನಿಂದ ಸುಮಾರು 2 ನಿಮಿಷಗಳ ಕಾಲ ಉಜ್ಜಿ ಶುಚಿ ಗೊಳಿಸಬೇಕು ಎಂಬ ಸಲಹೆಯನ್ನು ಚಿಕ್ಕವರಿದ್ದಾಗಿನಿಂದ ಕೇಳಿರುತ್ತೇವೆ. ಆದರೆ, ಇತ್ತೀಚಿನ ಅಧ್ಯಯನದ ಪ್ರಕಾರ, 2 ನಿಮಿಷಗಳ ಬ್ರಷಿಂಗ್ ಸಾಕಾಗಿದೆಯಾದರೂ ಹಲ್ಲುಗಳು ಪೂರ್ತಿ ಸ್ವಚ್ಛವಾಗಲು, ದೀರ್ಘವಾಗಿ ಬಾಳಿಕೆ ಬರಲು ನಾಲ್ಕು ನಿಮಿಷಗಳವರೆಗೆ ಸ್ವಚ್ಛಗೊಳಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
ಉಪಯೋಗ: ಹಲ್ಲುಗಳ ಮೇಲೆ ಬ್ಯಾಕ್ಟೀರಿಯಾ, ಫಂಗೈ ಹಾಗೂ ವೈರಾಣುಗಳು ತಮ್ಮದೇ ಆದ ಪ್ರತ್ಯೇಕ ಸ್ತರಗಳಲ್ಲಿ ಒಟ್ಟಿಗೆ ಸಹಜೀವನ ನಡೆಸುತ್ತಿರುತ್ತವೆ. ಈ ಬಡಾವಣೆ ಸ್ವರೂಪದ ಸಹಜೀವನವನ್ನು ಬಯೋಫಿಲ್ಮ್ಸ್ ಎಂದು ಕರೆಯಲಾಗುತ್ತದೆ. ಈ ಬಯೋಫಿಲ್ಮ್ ಗಳು ಹೆಚ್ಚು ಅಂಟುವಿಕೆಯ ಗುಣವನ್ನು ಹೊಂದಿದೆ. ಹಾಗಾಗಿ ಕೇವಲ 2 ನಿಮಿಷಗಳ ಬ್ರಷಿಂಗ್‌ನಿಂದ ಇದು ಸುಲಭವಾಗಿ ತೊಲಗಿಹೋಗುವುದಿಲ್ಲ.
ಇನ್ನು ಬ್ರಷ್ ತಾಗದ ಕಡೆಗಳಲ್ಲಿ ಇದು ಹಲ್ಲುಗಳಿಗೆ ತೆಳುಪರದೆಯ ರೂಪದಲ್ಲಿ ಅಂಟಿಕೊಂಡೇ ಇರುತ್ತದೆ. ನಾಲ್ಕು ನಿಮಿಷಗಳ ಬ್ರಷಿಂಗ್ ಮಾಡಿದರಷ್ಟೇ ಇದು ಸಂಪೂರ್ಣವಾಗಿ ತೊಲಗಿಹೋಗುತ್ತದೆ. ಹಲ್ಲುಗಳ ಎಲ್ಲ ಭಾಗಗಳಿಗೂ ಬ್ರಷ್ ತಲುಪುವುದನ್ನು ಖಾತ್ರಿ ಪಡಿಸಿಕೊಂಡು ಉಜ್ಜಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. ಈ ಬಯೋಫಿಲ್ಮ್ ತೊಲಗದೇ ಉಳಿದರೆ ಅದರಿಂದ ಮುಂದೆ ಹುಳುಕು ಹಲ್ಲು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.