ಬಾಯಿ ಕ್ಯಾನ್ಸರ್‌ನ 7 ಆರಂಭಿಕ ಚಿಹ್ನೆಗಳು
Team Udayavani, Dec 18, 2022, 12:22 PM IST
- ಗಂಟಲಿನಲ್ಲಿ ದಪ್ಪಗಾಗಿರುವಂತಹ ಅನುಭವ ಬಾಯಿಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದು ಗಂಟಲಿನ ಭಾಗದಲ್ಲಿ ಏನೋ ಸಿಕ್ಕಿ ಹಾಕಿಕೊಂಡಿರುವ ಅಥವಾ ದಪ್ಪಗಾಗಿರುವಂತಹ ಅನುಭವ. ಇದು ತೀರಾ ಸೂಕ್ಷ್ಮ ಅನುಭವ ಆಗಿರಬಹುದು, ಆದರೆ ನಿಮ್ಮ ಗಂಟಲಿನಲ್ಲಿ ಮತ್ತು ನುಂಗುವಾಗ ಸಾಮಾನ್ಯಕ್ಕಿಂತ ಏನೋ ಒಂದು ಹೊಸ ಅನುಭವ ಆಗುತ್ತಿರುತ್ತದೆ.
- ಧ್ವನಿ ಬದಲಾವಣೆ ಅಥವಾ ಧ್ವನಿ ದೊರಗಾಗುವುದು ಧ್ವನಿಯಲ್ಲಿ ಬದಲಾವಣೆ ಆಗುವುದು ಅಥವಾ ಧ್ವನಿ ದೊರಗಾಗುವುದು ಕೂಡ ಏನೋ ತಾಳ ತಪ್ಪಿದೆ ಎಂಬುದರ ಸೂಚನೆಯಾಗಿದೆ. ಕೆಲವೊಮ್ಮೆ ಕೆಳಧ್ವನಿಯಲ್ಲಿ ಮಾತನಾಡಲು ಕಷ್ಟವಾಗುತ್ತದೆ ಅಥವಾ ದೊಡ್ಡ ಧ್ವನಿಯಲ್ಲಿ ಮಾತನಾಡಲು ಕಷ್ಟವಾಗುತ್ತದೆ. ಇದು ಕೂಡ ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಇಷ್ಟು ಮಾತ್ರವಲ್ಲದೆ ಗಂಟಲನ್ನು ಆಗಾಗ ಸರಿಪಡಿಸಬೇಕಾಗಿ ಬರುವುದು ಕೂಡ ಒಂದು ಲಕ್ಷಣವಾಗಿರಬಹುದು.
- ದುಗ್ಧರಸ ಗ್ರಂಥಿಗಳು ಊದಿಕೊಂಡಿರುವುದು ಕುತ್ತಿಗೆಯ ಭಾಗದಲ್ಲಿ ಒಂದು ಅಥವಾ ಹೆಚ್ಚು ದುಗ್ಧರಸ ಗ್ರಂಥಿಗಳು ಊದಿಕೊಳ್ಳುವುದು ಬಾಯಿ ಮತ್ತು ಅನ್ನನಾಳದ ಕ್ಯಾನ್ಸರ್‌ನ ಆರಂಭಿಕ ಸಾಮಾನ್ಯ ಲಕ್ಷಣಗಳಲ್ಲಿ ಒಂದು. ಗಂಟು ದೊಡ್ಡದಾಗುತ್ತಿದ್ದರೆ ಬಾಯಿಯ ಸರ್ಜನ್‌ರನ್ನು ಕೂಡಲೇ ಭೇಟಿಯಾಗುವುದು ಅಗತ್ಯ.
- ಜಗಿಯಲು, ನುಂಗಲು ಅಥವಾ ಮಾತನಾಡಲು ಕಷ್ಟ ಬಾಯಿ ಕ್ಯಾನ್ಸರ್ ನಾವು ಬಾಯಿಯ ಮೂಲಕ ಮಾಡುವ ಹಲವು ಕೆಲಸಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನುಂಗುವುದು ಕಷ್ಟವಾಗಬಹುದು, ಜಗಿಯುವುದು ಕೂಡ ಕಠಿನವಾಗಬಹುದು. ಜಗಿಯುವ ಸಂದರ್ಭದಲ್ಲಿ ನೋವು ಅನುಭವಕ್ಕೆ ಬರಬಹುದು ಅಥವಾ ಹಲ್ಲು ಅಭದ್ರವಾಗಿದೆ ಎಂಬ ಭಾವನೆ ಉಂಟಾಗಬಹುದು. ಕೆಲವೊಮ್ಮೆ ಮಾತನಾಡುವುದಕ್ಕೆ ಕೂಡ ಕಷ್ಟವಾಗಬಹುದು.
- ಕಿವಿಗಳಲ್ಲಿ ನೋವು ಮತ್ತು ತಲೆನೋವು ಕಿವಿಗಳು ಮುಚ್ಚಿಕೊಂಡಂತೆ, ಕೇಳುವಿಕೆಯಲ್ಲಿ ಸಮಸ್ಯೆ ಇರುವಂತೆ ಅನಿಸಬಹುದು. ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಕಿವಿ ನೋವು ಕೂಡ ಒಂದಾಗಿದೆ. ಸಾಮಾನ್ಯಕ್ಕಿಂತ ಹೆಚ್ಚು ತಲೆನೋವಿನ ಅನುಭವ ಆಗುವುದು ಕೂಡ ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ.
- ಬಾಯಿ ಜೋಮುಗಟ್ಟುವಿಕೆ ಬಾಯಿ, ತುಟಿ ಅಥವಾ ನಾಲಿಗೆ ಸತತವಾಗಿ, ಕಾರಣವಿಲ್ಲದೆ, ವಿವರಿಸಲಾಗದಂತೆ ಜೋಮು ಹಿಡಿದಿರುವುದು ಕೂಡ ಬಾಯಿ ಕ್ಯಾನ್ಸರ್ ಬೆಳವಣಿಗೆ ಹೊಂದುತ್ತಿರುವುದರ ಪ್ರಾಥಮಿಕ ಲಕ್ಷಣವಾಗಿರುತ್ತದೆ.
- ಯಾವುದೇ ಸಕಾರಣವಿಲ್ಲದೆ ಒಂದು ಹಲ್ಲು ಅಥವಾ ಹಲವು ಹಲ್ಲುಗಳು ಸಡಿಲವಾಗುವುದು ಹಲ್ಲುಗಳಿಗೆ ಸಂಬಂಧಿಸಿದ ಯಾವುದೇ ತೊಂದರೆ ಇಲ್ಲದೆಯೇ ಹಲ್ಲು ಅಥವಾ ಹಲವು ಹಲ್ಲುಗಳು ಸಡಿಲವಾಗುವುದು ಅಥವಾ ಅಲುಗಾಡುವುದು ಬಾಯಿಯ ಕ್ಯಾನ್ಸರ್‌ನ ಒಂದು ಲಕ್ಷಣವಾಗಿರುತ್ತದೆ. ಹಲ್ಲು ಅಥವಾ ಹಲವು ಹಲ್ಲುಗಳು ಅಲುಗಾಡು ವುದು, ಸಡಿಲವಾಗುವುದು, ಜತೆಗೆ ದವಡೆ ಮತ್ತು ನಾಲಗೆಯಲ್ಲಿ ಆಗಿರುವ ಬದಲಾವಣೆಯನ್ನು ಎಚ್ಚರಿಕೆಯಿಂದ ಗಮನಿಸಿ ದಂತವೈದ್ಯರಲ್ಲಿ ತೋರಿಸಬೇಕು. – ಡಾ| ಆನಂದ್‌ದೀಪ್ ಶುಕ್ಲಾ, ಅಸೋಸಿಯೇಟ್ ಪ್ರೊಫೆಸರ್, ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ , ಎಂಸಿಡಿಒಎಸ್, ಮಾಹೆ, ಮಣಿಪಾಲ
- (ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓಂಕಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.