Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ
Team Udayavani, Apr 21, 2024, 1:30 PM IST
ಆ್ಯಂಕಿಲೋಸಿಂಗ್ ಸ್ಪಾಂಡಿಲೈಟಿಸ್ ಎಂದರೇನು?
ಇದು ಆರ್ಥೈಟಿಸ್‌ನ ಒಂದು ವಿಧವಾಗಿದ್ದು, ಪ್ರಮುಖವಾಗಿ ಬೆನ್ನೆಲುಬನ್ನು (ಕುತ್ತಿಗೆ ಮತ್ತು ಬೆನ್ನು) ಬಾಧಿಸುತ್ತದೆ. ಆ್ಯಂಕಿಲೋಸ್ ಎಂದರೆ ಸಂಧಿ ಬಿಗಿತ; ಸ್ಪಾಂಡಿಲೊ ಎಂದರೆ ಕಶೇರುಕ.
ಆ್ಯಂಕಿಲೋಸ್ ಸ್ಪಾಂಡಿಲೈಟಿಸ್ ಉಂಟಾಗಲು ಕಾರಣವೇನು?
ಇದಕ್ಕೆ ನಿರ್ದಿಷ್ಟವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಬಹುತೇಕ ಆರ್ಥೈಟಿಸ್‌ಗಳಿಗೆ ವಂಶವಾಹಿ ಕಾರಣಗಳು ಮತ್ತು ಅಸಹಜ ರೋಗ ಪ್ರತಿರೋಧಕ ಪ್ರತಿಕ್ರಿಯೆಯನ್ನು ಉಂಟು ಮಾಡುವ ಪಾರಿಸರಿಕ ಪ್ರಚೋದಕಗಳು ಇರುತ್ತವೆ. ರೋಗ ಪ್ರತಿರೋಧಕ ಶಕ್ತಿಯು ಸಂಧಿಗಳು ಮತ್ತು ಇತರ ದೇಹ ಸಂರಚನೆಗಳ ಮೇಲೆ ತಪ್ಪಾಗಿ ಆಕ್ರಮಣ ನಡೆಸುತ್ತದೆ. ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್‌ನಲ್ಲಿ ಸಂಧಿಗಳು ಮತ್ತು ಬೆನ್ನಿನ ಜತೆಗೆ ಕಣ್ಣುಗಳು, ಕರುಳು ಮತ್ತು ಹೃದಯವನ್ನೂ ಇದು ಬಾಧಿಸಬಹುದಾಗಿದೆ.
ಯಾರಿಗೆ ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ಉಂಟಾಗಬಹುದು?
ಸಾಮಾನ್ಯವಾಗಿ ಈ ಕಾಯಿಲೆಯು ಹದಿಹರಯದವರು/ ಯುವಕರಲ್ಲಿ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಇದು 45 ವರ್ಷ ವಯಸ್ಸಿಗೆ ಮುನ್ನ ಕಾಣಿಸಿಕೊಳ್ಳುತ್ತದೆ. ಮಹಿಳೆಯರಿಗಿಂತ ಪುರುಷರಲ್ಲಿ ಇದು ಉಂಟಾಗುವ ಸಾಧ್ಯತೆಯು 2-3 ಪಟ್ಟು ಹೆಚ್ಚಾಗಿರುತ್ತದೆ. ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ಕಾಯಿಲೆ ಹೊಂದಿರುವವರ ಕುಟುಂಬ ಸದಸ್ಯರು ಕೂಡ ಇದೇ ಕಾಯಿಲೆಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ಹೀಗಾಗಿ ದೀರ್ಘಕಾಲದಿಂದ ಬೆನ್ನುನೋವು ಹೊಂದಿದ್ದು, ಔಷಧೋಪಚಾರದಿಂದ ಗುಣ ಕಾಣದ ಹದಿಹರಯದವರು, ಯುವಕರು ಬೆನ್ನುನೋವಿಗೆ ಕಾರಣವನ್ನು ಪತ್ತೆ ಮಾಡಲು ತಪಾಸಣೆಗೆ ಒಳಪಡುವುದು ಉತ್ತಮ.
ವೈದ್ಯಕೀಯ ಲಕ್ಷಣಗಳು
ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ಕುತ್ತಿಗೆ ಭಾಗ ಮತ್ತು ಕೆಳ ಬೆನ್ನುಭಾಗದಲ್ಲಿ ನೋವು ಮತ್ತು ಬಿಗಿತದ ಲಕ್ಷಣಗಳನ್ನು ಉಂಟುಮಾಡುತ್ತದೆ. ನೋವು ಮಧ್ಯರಾತ್ರಿ ಹಾಗೂ ಹಾಸಿಗೆಯಿಂದ ಎದ್ದ ಬಳಿಕ ಬೆಳಗಿನ ವೇಳೆಯಲ್ಲಿ ಅಧಿಕವಾಗಿದ್ದು, ಆ ಬಳಿಕ ಒಂದೆರಡು ತಾಸುಗಳಲ್ಲಿ ಕಡಿಮೆಯಾಗುತ್ತದೆ. ವ್ಯಾಯಾಮಗಳು ಮತ್ತು ನೋವು ನಿವಾರಕಗಳಿಂದ ಸಾಮಾನ್ಯವಾಗಿ ನೋವು ಉಪಶಮನ ಹೊಂದುತ್ತದೆ. ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ವಯಸ್ಸಾಗುವುದರಿಂದ ಉಂಟಾಗುವ ಬೆನ್ನುನೋವಿನಿಂದ ಭಿನ್ನವಾಗಿದೆ; ವಯೋಸಂಬಂಧಿ ಬೆನ್ನುನೋವು ಬೆಳಗಿನ ವೇಳೆ ಕಡಿಮೆ ಇದ್ದು, ಕೆಲಸ ಮತ್ತು ಚಟುವಟಿಕೆಗಳನ್ನು ನಡೆಸಿದ ಬಳಿಕ ಹೆಚ್ಚುತ್ತದೆ. ಕುತ್ತಿಗೆ ಮತ್ತು ಬೆನ್ನಿನ ಜತೆಗೆ ಭುಜ, ಮೊಣಕೈ, ಮೊಣಕಾಲು ಕೂಡ ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್‌ನಿಂದ ಬಾಧಿತವಾಗಬಹುದು. ಕೆಲವು ರೋಗಿಗಳಲ್ಲಿ ಕಣ್ಣು ಕೆಂಪಗಾಗುವುದು (ಉವೈಟಿಸ್), ಸೋರಿಯಾಸಿಸ್ ನಂತಹ ಚರ್ಮದ ಅನಾರೋಗ್ಯಗಳು, ಬೇಧಿ (ಇನ್‌ಫ್ಲಮೇಟರಿ ಬವೆಲ್ ಡಿಸೀಸ್)ಯಂತಹ ಲಕ್ಷಣಗಳು ಕೂಡ ತಲೆದೋರಬಹುದಾಗಿದೆ. ಕ್ಲಪ್ತ ಕಾಲದಲ್ಲಿ ಈ ಕಾಯಿಲೆಯನ್ನು ಗುರುತಿಸಿ ಚಿಕಿತ್ಸೆ ಒದಗಿಸದೆ ಹೋದರೆ ಬೆನ್ನು ಬಾಗುವಿಕೆ, ಕುತ್ತಿಗೆ ಚಲನೆಗೆ ತೊಂದರೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ರೋಗಪತ್ತೆ
ರುಮಟಾಲಜಿ ತಜ್ಞರು ರೋಗಿಯನ್ನು ವಿವರವಾದ ವಿಶ್ಲೇಷಣೆ, ತಪಾಸಣೆಗೆ ಒಳಪಡಿಸಿ ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ರೋಗ ಪತ್ತೆ ಮಾಡುತ್ತಾರೆ. ಸಿಆರ್‌ಪಿ, ಎಚ್‌ಎಲ್‌ಎ ಬಿ27 ಮತ್ತು ಎಂಆರ್‌ಐ ಈ ರೋಗಪತ್ತೆಗೆ ಸಹಾಯ ಮಾಡಬಲ್ಲ ಕೆಲವು ಪರೀಕ್ಷೆಗಳು.
ಚಿಕಿತ್ಸೆ
ಈ ಕಾಯಿಲೆಯನ್ನು ಚಿಕಿತ್ಸೆಗೆ ಒಳಪಡಿಸಬಹುದಾಗಿದ್ದು, ಸದ್ಯ ಲಭ್ಯವಿರುವ ಔಷಧಗಳಿಂದ ಉಪಚರಿಸಿದಾಗ ರೋಗಿಗಳು ನೋವುಮುಕ್ತ ಜೀವನವನ್ನು ನಡೆಸಬಹುದಾಗಿದೆ. ಔಷಧಗಳನ್ನು ದೀರ್ಘಕಾಲದ ವರೆಗೆ ತೆಗೆದುಕೊಳ್ಳಬೇಕಾಗಿರುತ್ತದೆ. ಈ ಔಷಧಗಳನ್ನು ತೆಗೆದುಕೊಳ್ಳುತ್ತಿರುವಾಗ ನಿಮ್ಮ ವೈದ್ಯರ ಬಳಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ನಿಯಮಿತ ಅವಧಿಗಳಲ್ಲಿ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.
ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್‌ಗೆ ಅತ್ಯಾಧುನಿಕ ಔಷಧಗಳು ಲಭ್ಯವಿದ್ದು, ರೋಗವನ್ನು ನಿಯಂತ್ರಣಕ್ಕೆ ತರುತ್ತವೆ. ಆದರೆ ರುಮಟಾಲಜಿ ತಜ್ಞ ವೈದ್ಯರ ಅಲಭ್ಯತೆ, ಮಾಹಿತಿಯ ಕೊರತೆಯಿಂದಾಗಿ ಅನೇಕ ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ರೋಗಿಗಳು ನೋವು ನಿವಾರಕ ಔಷಧಗಳು ಮತ್ತು ವ್ಯಾಯಮಗಳನ್ನಷ್ಟೇ ಅವಲಂಬಿಸಿರುತ್ತಾರೆ. ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್‌ಗೆ ನೀಡುವ ಬಹುತೇಕ ಅತ್ಯಾಧುನಿಕ ಔಷಧಗಳು ಪ್ರಸ್ತುತ ಕಾಲದಲ್ಲಿ ಜನಸಾಮಾನ್ಯರ ಕೈಗಟಕುವ ಬೆಲೆಯಲ್ಲಿವೆ.
ಇದರ ಚಿಕಿತ್ಸೆಯಲ್ಲಿ ಉಪಯೋಗಿಸಲಾಗುವ ಕೆಲವು ಔಷಧಗಳು ಎಂದರೆ ಮೆಥೊಟ್ರೆಕ್ಸೇಟ್, ಸಲ್ಫಾಸಾಲ್ಜಿನ್, ಟೊಫಸಿಟಿನಿಬ್ ಮತ್ತು ತೀವ್ರ ಸ್ವರೂಪದ ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್‌ಗೆ ಬಯಾಲಾಜಿಕಲ್‌ಗಳು (ಅಡಾಲಿಮುಮಾಬ್). ಈ ಔಷಧಗಳ ಬಳಕೆಯಿಂದ ಆ್ಯಂಕಿಲೋಸಿಸ್ ಸ್ಪಾಂಡಿಲೈಟಿಸ್ ರೋಗಿಗಳು ಸಹಜಕ್ಕೆ ನಿಕಟ ಜೀವನವನ್ನು ನಡೆಸಬಹುದಾಗಿದೆ.
-ಡಾ| ಪ್ರತ್ಯೂಷಾ ಮಣಿಕುಪ್ಪಮ್,
ಅಸಿಸ್ಟೆಂಟ್ ಪ್ರೊಫೆಸರ್
-ಡಾ| ಶಿವರಾಜ್ ಪಡಿಯಾರ್,
ಅಸೋಸಿಯೇಟ್ ಪ್ರೊಫೆಸರ್
ರುಮಟಾಲಜಿ ವಿಭಾಗ
ಕೆಎಂಸಿ, ಅತ್ತಾವರ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.